Karnataka Times
Trending Stories, Viral News, Gossips & Everything in Kannada

Weekend with Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರುತ್ತಿರುವವರ ಲಿಸ್ಟ್ ಇಲ್ಲಿದೆ.

Advertisement

ಸದ್ಯ ಕನ್ನಡದ ಕಿರುತೆರೆಯಲ್ಲಿ (Kannada Television) ಅತಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವಂತಹ ಟಾಕ್ ಶೋ (Talk Show) ಎಂದರೆ ವೀಕೆಂಡ್ ವಿತ್ ರಮೇಶ್ (Weekend With Ramesh). ಕಳೆದ ನಾಲ್ಕು ಸೀಸನ್‌ಗಳು ಕಿರುತೆರೆಯ ವೀಕ್ಷಕರನ್ನು ಸೆಳೆದಿದ್ದು ಆದರೆ, ಕರೋನಾ (Covid) ಕಾರಣದಿಂದ ಕಳೆದ ವರ್ಷ ವೀಕೆಂಡ್ ಸೀಸನ್ ಶುರುವಾಗಿರಲಿಲ್ಲ. ಈಗ ಮತ್ತೆ ಸೀಸನ್‌ 5 ಆರಂಭ ಆಗಲಿದೆ.

ಹೌದು ವಿವಿಧ ಕ್ಷೇತ್ರಗಳ ದಿಗ್ಗಜರನ್ನು ವೇದಿಕೆ (Stage) ಮೇಲೆ ಕರೆದು ಅವರ ಸಾಧನೆಯನ್ನು ವೀಕ್ಷಕರಿಗೆ ತೋರಿಸುವ ಕಾರ್ಯಕ್ರಮವೇ ಈ ವೀಕೆಂಡ್ ವಿತ್ ರಮೇಶ್. ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳು (Celebrities) ಈ ವೇದಿಕೆ ಮೇಲೆ ಬೆಳೆದು ಬಂದ ಹಾದಿಯನ್ನು ವೀಕ್ಷಕರ ಮುಂದಿಟ್ಟಿದ್ದು ಅದೆಷ್ಟೋ ಸಾಧಕರು ಈ ಕುರ್ಚಿಯನ್ನು (Seat) ಅಲಂಕರಿಸಿದ್ದಾರೆ. ಸದ್ಯ ಇದೀಗ ಮತ್ತೆ ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ಆರಂಭ ಆಗುತ್ತಿದ್ದು ಕಳೆದ ಕೆಲವು ದಿನಗಳಿಂದ ಈ ಸುದ್ದಿ ಹರಿದಾಡುತ್ತಲೇ ಇತ್ತು. ಅದಕ್ಕೆ ತಕ್ಕಂತೆ ಸೀಸನ್ ಪ್ರೋಮೊವನ್ನು ಕೂಡ ರಿಲೀಸ್ (Release) ಮಾಡಲಾಗಿತ್ತು.

ಸದ್ಯ ರಿಷಬ್ ಶೆಟ್ಟಿ (Rishab Shetty) ಅವರು ಮೊದಲ ಎಪಿಸೋಡ್‌ಗೆ ಅತಿಥಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ರಿಷಬ್ ಬದಲು ಬೇರೆ ಅತಿಥಿ ಇರಲಿದ್ದಾರಂತೆ. ಹೌದು ವೀಕೆಂಡ್ ವಿಥ್ ರಮೇಶ್ ಸೀಸನ್ 5 ಶೋನ ಮೊದಲ ಎಪಿಸೋಡ್ ಶೂಟಿಂಗ್ ಈಗಾಗಲೇ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ (Abbayya Naydu Studio Banglore) ನಡೆದಿದೆ. ಈ ಶೋನಲ್ಲಿ ನಟ ನಿರ್ದೇಶಕ ಡ್ಯಾನ್ಸರ್ ಪ್ರಭುದೇವ (Prabhudeva) ಅವರು ಭಾಗವಹಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಾಹಿನಿ ಏನೂ ಹೇಳಿಕೆ ಕೊಟ್ಟಿಲ್ಲ ಇನ್ನು ಮೈಸೂರು (Mysore) ಮೂಲದ ಪ್ರಭುದೇವ ಅವರು ಈಗ ಬಾಲಿವುಡ್‌ನಲ್ಲಿ(Bollywood) ಸಕ್ರಿಯರಾಗಿದ್ದಾರೆ.

Advertisement

ತಮಿಳು (Tamil) ಹಿಂದಿ (Hindi) ತೆಲುಗು (Telugu) ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಪ್ರಭುದೇವ ಅವರು 32 ವರ್ಷ ವಿಧ ವಿಧವಾದ ಸ್ಟೈಲ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಹೌದು ಡ್ಯಾನ್ಸ್ ರಂಗಕ್ಕೆ ನೀಡಿದ ಕೊಡುಗೆ ಸಲುವಾಗಿ ಪ್ರಭುದೇವ ಅವರಿಗೆ ಪದ್ಮಶ್ರೀ (Padhmashree) ಪ್ರಶಸ್ತಿ ಸಿಕ್ಕಿತ್ತು. ಅಷ್ಟೇ ಅಲ್ಲದೆ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದ ಸಲುವಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

2005ರಿಂದ ಇಲ್ಲಿಯವರೆಗೆ ಕೆಲ ಸಿನಿಮಾಗಳಿಗೆ ನಿರ್ದೇಶಕರಾಗಿ ಕೆಲಸ ಕೂಡ ಮಾಡಿರುವ ಪ್ರಭುದೇವ ರವರು ಸಲ್ಮಾನ್ ಖಾನ್‌ (Salman Khan) ನಟನೆಯ ದಬಾಂಗ್ 3 (Dbaang 3) ರಾಧೆ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದರು. ಅಷ್ಟೇ ಅಲ್ಲದೆ ಶಾಹೀದ್ ಕಪೂರ್ ನಟನೆಯ ಆರ್ ರಾಜ್‌ಕುಮಾರ್ ಅಜಯ್ ದೇವ್ಗನ್‌ಗೆ ಆಕ್ಷನ್ ಜಾಕ್ಸನ್ ಅಕ್ಷಯ್ ಕುಮಾರ್‌ಗೆ ಸಿಂಗ್ ಈಸ್ ಬ್ಲಿಂಗ್ ರೌಡಿ ರಾಥೋರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಇನ್ನು ವೀಕೆಂಡ್ ವಿಥ್ ರಮೇಶ್ ಶೋ ಕನ್ನಡದಲ್ಲಿ 2014ರಲ್ಲಿ ಮೊದಲ ಸೀಸನ್‌ ಆರಂಭವಾಗಿದ್ದು ಅದಾಗಿ 2019ರ ಒಳಗಡೆಯೇ ರಮೇಶ್ ಅರವಿಂದ್ ಅವರು ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ಹೌದು ಸದ್ಯ ಈಗ ಸೀಸನ್ 5 ಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದು ಈ ಬಾರಿ ಏನಾದರೂ ವಿಶೇಷತೆ ಇದೆಯಾ ಎಂದು ಕಾದು ನೋಡಬೇಕಿದೆ.

ಇನ್ನುಬಈ ಶೋನಲ್ಲಿ ರಮೇಶ್ ಅರವಿಂದ್ ಅವರು ಅತಿಥಿಗಳ ಬಾಲ್ಯ ಶಿಕ್ಷಣ ವೃತ್ತಿ ಜೀವನ ವೈಯಕ್ತಿಕ ಜೀವನದ ಏರಿಳಿತ ಸಾಧನೆ ಸಾಮಾಜಿಕ ಕೆಲಸ ಸೇರಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಹೌದು ಅತಿಥಿಗಳ ಕುಟುಂಬ ಪ್ರಾಧ್ಯಾಪಕರು ಸ್ನೇಹಿತರು, ಆತ್ಮೀಯ ವ್ಯಕ್ತಿಗಳು ಈ ಶೋನಲ್ಲಿ ಹಾಜರಿ ಹಾಕಿ ಅತಿಥಿಗಳ ಜೀವನವನ್ನು ತೆರೆದಿಡುತ್ತಾರೆ.

Advertisement

Leave A Reply

Your email address will not be published.