Yash: ಯಶ್ ಮುಂದಿನ ಸಿನೆಮಾಗಾಗಿ ಕಾಯುತ್ತಿದ್ದವರಿಗೆ ಸಿಹಿಸುದ್ದಿ

Advertisement
ಸದ್ಯ ಕನ್ನಡದ ಹೆಮ್ಮೆ ಕೆಜಿಎಫ್ 2 (KGF 2) ಬಿಡುಗಡೆಯಾಗಿ 11 ತಿಂಗಳುಗಳಾಗಿದ್ದು ಆದರೆ ಯಶ್ (Yash) ಮುಂದಿನ ಸಿನಿಮಾ ಬಗ್ಗೆ ಮಾತ್ರ ಯಾವುದೇ ಸುಳಿವಿಲ್ಲ. ಇನ್ನು ತಮಿಳಿನ ಶಂಕರ್ (Shankar) ಜೊತೆ ಸಿನಿಮಾ ಮಾಡುತ್ತಾರೆ ಹೊಂಬಾಳೆಯಲ್ಲಿ (Hombale) ಪ್ರಶಾಂತ್ ನೀಲ್ (Prashanth Neel) ಜೊತೆ ಕೆಜಿಫ್ 3 ಮಾಡ್ತಾರೆ ಎಂದು ಅಂದಾಜಿಸಲಾಗಿತ್ತು. ಇನ್ನು ಟಾಲಿವುಡ್ ಮಾಲಿವುಡ್ (Tollywood & Mollywood) ನಿರ್ದೇಶಕರ ಹೆಸರು ಯಶ್ 19ನೇ ಸಿನಿಮಾ ಜೊತೆ ಕೇಳಿಬಂದಿತ್ತು. ಅದರೇ ಯಾವುದರ ಬಗ್ಗೆಯೂ ಕೂಡ ಅಧಿಕೃತ ಘೋಷಣೆ ಅಗಿಲ್ಲ. ಇನ್ನು ಯಶ್ ರವರ 19ನೇ ಸಿನಿಮಾದ ಬಗ್ಗೆ ಇಷ್ಟೆಲ್ಲಾ ಚರ್ಚೆಗಳಾಗುತ್ತಿದ್ದರೂ ಕೂಡ ಯಶ್ ರವರು ಮಾತ್ರ ತಮ್ಮ ಪಾಡಿಗೆ ತಾವು ಮುಂದಿನ ಸಿನಿಮಾ ಅಲೋಚನೆ ಜೊತೆಗೆ ಕುಟುಂನದ ಜೊತೆ ಕೂಡ ಕಾಲ ಕಳೆಯುತ್ತಿದ್ದಾರೆ.
ಇನ್ನು ಇದರ ಜೊತೆಗೆ ಕೆಜಿಎಫ್ 2 ತೆರೆಕಂಡು ಶೀಘ್ರದಲ್ಲೇ ಒಂದು ವರ್ಷ ಪೂರೈಸಲಿರುವ ಹಿನ್ನೆಲೆಯಿಂದಾಗಿ ಮುಂದಿನ ಚಿತ್ರದ ಕಥೆ ಹಾಗೂ ನಿರ್ದೇಶಕರು ಫೈನಲ್ ಆಗದ ಕಾರಣ ಯಶ್ ಕೊಂಚ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನುವುದು ಕೂಡ ಅವರ ಆಪ್ತ ಬಳಗದ ಮಾಹಿತಿ. ಇನ್ನು ಪ್ರತಿನಿತ್ಯ ಕೂಡ ಮುಂದಿನ ಚಿತ್ರದ ತಯಾರಿಯಲ್ಲೇ ದಿನ ಆರಂಭಿಸುತ್ತಿರುವ ಯಶ್ ಸದ್ಯ ಇಂಗ್ಲೆಂಡ್ನಲ್ಲಿದ್ದಾರೆ (England). ಹೌದು ಹುಟ್ಟುಹಬ್ಬಕ್ಕೆ ದುಬೈಗೆ (Dubai) ಹೋಗಿದ್ದ ಯಶ್ ರವರು ಈಗ ಇಂಗ್ಲೆಂಡ್ಗೆ ತಮ್ಮ ಮುಂದಿನ ಸಿನಿಮಾದ ಕಥೆ ಬಗ್ಗೆ ಪ್ಲ್ಯಾನ್ ಮಾಡಲು ಹೋಗಿದ್ದಾರೆ. ಹೌದು ತಮ್ಮ ಹೊಸ ಚಿತ್ರದ ಕಥೆ ಬಗ್ಗೆ ಚರ್ಚೆ ಮಾಡುತ್ತಿರುವುದು ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ.
Advertisement
ಸದ್ಯ ಪತ್ನಿ ರಾಧಿಕಾ ಪಂಡಿತ್ ರವರು ಯಶ್ ರವರ ಚಿತ್ರದ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾಗಿದ್ದು ಯಶ್ ಈಗಾಗಲೇ ತಮಿಳುನ ಸ್ಟಾರ್ ಡೈರೆಕ್ಟರ್ ಮಣಿರತ್ನಂ (Maniratnam) ಯಂಗ್ ಅಂಡ್ ಎನರ್ಜಿಟಿಕ್ ಡೈನಾಮಿಕ್ ಡೈರೆಕ್ಟರ್ ಲೋಕೇಶ್ ಕನಗರಾಜ್ ರವರ ಜೊತೆ ತಮ್ಮ 19ನೇ ಚಿತ್ರದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನುವ ಮಾಹಿತಿ ಸದ್ಯ ಇದೀಗ ಸಿಕ್ಕಿದೆ. ಹೌದು ಯಶ್ ಮಣಿರತ್ನಂ ಲೋಕೇಶ್ ಕನಗರಾಜ್ ಜೊತೆಗೆ ನಟಿ ರಾಧಿಕಾ ಪಂಡಿತ್ ರವರು ಕೂಡ ಕಥೆ ಬಗ್ಗೆ ಚರ್ಚೆ ಮಾಡಿದ್ದು ಈಗ ಆ ಕಥೆಯನ್ನು ಡೆವಲಪ್ ಮಾಡುವ ಸಲುವಾಗಿ ಇಂಗ್ಲೆಂಡ್ಗೆ ಹಾರಿದ್ದಾರೆ. ಇನ್ನು ಯಶ್ ಸದ್ಯ ಮೂರು ಕಥೆಗಳ ಶಾರ್ಟ್ ಲಿಸ್ಟ್ ಮಾಡಿದ್ದು ಈ ಮೂರರಲ್ಲಿ ಯಾವ ಕಥೆ ಓಕೆ ಮಾಡುತ್ತಾರೆ ಅನ್ನುವುದು ಮಾತ್ರ ಗೊತ್ತಿಲ್ಲ. ಒಂದು ವೇಳೆ ಮಣಿರತ್ನಂ ಹಾಗೂ ಲೋಕೇಶ್ ಕನಗರಾಜ್ ಕಥೆ ಓಕೆ ಆಗದಿದ್ದರೆ ಮಡದಿ ರಾಧಿಕಾ ಜೊತೆ ಚರ್ಚೆ ಮಾಡಿರುವ ಕಥೆಯನ್ನೇ ಫೈನಲ್ ಮಾಡಲು ಯಶ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಕಥೆ ಏಮಾದರು ಓಕೆ ಆಗಿದ್ದೇ ಆದರೆ ಯಶ್ ರವರ 19ನೇ ಸಿನಿಮಾಗೆ ರಾಧಿಕಾ ಪಂಡಿತ್ ಡೈರೆಕ್ಷನ್ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಅಲ್ಲದೇ ಈ ಸಿನಿಮಾ ಯಶ್ ಹೋಮ್ ಪ್ರೊಡಕ್ಷನ್ಸ್ನಲ್ಲಿ ಬರಲಿದ್ದು ಮುಂಬೈನ ಪ್ರೊಡಕ್ಷನ್ ಹೌಸ್ ಒಂದು ಸಹ ರಾಕಿಗೆ ಸಾಥ್ ಕೊಡಲಿದೆ. ಇನ್ನು ಯಶ್ ರವರ ಕೆರಿಯರ್ ಆರಂಭದ ದಿನಗಳಿಂದಲೂ ಕೂಡ ಪ್ರತೀ ಹೆಜ್ಜೆಯಲ್ಲೂ ಹೆಜ್ಜೆ ಹಾಕುತ್ತಿರುವ ರಾಧಿಕಾ ಪಂಡಿತ್ ರವರು ಎಲ್ಲ ಅಂದುಕೊಂಡಂತೆ ಆದರೆ ಯಶ್19ನೇ ಸಿನಿಮಾಗೆ ಸಾರಥಿಯಾಗ್ತಾರೆ. ಅಲ್ಲದೇ ರಾಧಿಕಾ ಪಂಡಿತ್ ಧಾರಾವಾಹಿಯಲ್ಲಿ ನಟಿಸುವಾಗಿನಿಂದ ನಿರ್ದೇಶನ ಮಾಡುವ ಹಂಬಲ ಅವರಲಿ ಇತ್ತು ಎನ್ನುವುದು ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವಾಗಿದೆ.
Advertisement