ಕೆಜಿಎಫ್ (KGF) ಸಿನೆಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಯಶಸ್ಸನ್ನು ಭಿತ್ತರಿಸಿದ ಸಿನೆಮಾ. ಇಂದು ರಾಕಿಂಗ್ ಸ್ಟಾರ್ ಯಶ್ ಮಾತ್ರವಲ್ಲದೇ ಇಡೀ ಸಿನೆಮಾ ತಂಡವನ್ನೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಗುರುತಿಸಿಕೊಳ್ಳಲು ಈ ಸಿನೆಮಾ ನೆರವಾಗಿತ್ತು , ಈ ಸಿನೆಮಾ ಯಶಸ್ಸಿನ ಬಳಿಕ ಕಾಂತಾರ ಸಿನೆಮಾ ಕೂಡ ಭರ್ಜರಿ ಯಶಸ್ಸು ಪಡೆಯಿತು. ಸದ್ಯ ಈಗ ಎಲ್ಲರ ಕಣ್ಣು ಇರುವುದು ಇನ್ನೊಂದು ಕಬ್ಜ ಸಿನೆಮಾ ಮೇಲೆ ಕಬ್ಜ ಸಿನೆಮಾ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದ್ದು ಇದು ಕೆಜಿಎಫ್ ಮಾದರಿಯಲ್ಲೇ ಬಿಡುಗಡೆಯಾಗಲಿರುವ ಸಿನೆಮಾ ಎಂಬ ಮಾತು ಸಹ ಹರಿದಾಡುತ್ತಿದೆ ಹಾಗಾದರೆ ಈ ಬಗ್ಗೆ ಸಿನೆಮಾ ತಂಡದೊಂದಿಗೆ ನಟಿಸಿದ್ದ ಹರೀಶ್ ರಾಯ್ (Harish Roy) ಏನಂದಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಕೆಜಿಎಫ್ ಟರ್ನಿಂಗ್ ಪಾಯಿಂಟ್:
ನಟ ಹರೀಶ್ ರಾಯ್ ಎಂದಾಗ ಬಹುತೇಕರಿಗೆ ಪರಿಚಯವಾಗಲಿಕ್ಕಿಲ್ಲ ಅದರ ಬದಲಾಗಿ ಕೆಜಿಎಫ್ ಚಾಚಾ ಹರೀಶ್ ಎಂದರೆ ನಿಮಗೂ ನೆನಪಾಗಬಹುದು. ಕೆಜಿಎಫ್ ಸಿನೆಮಾದಲ್ಲಿ ರಾಕಿ ಬಾಯ್ ಯಶ್ ಅವರಿಗೆ ಪ್ರೀತಿಯ ಚಾಚನಾಗಿ ಹರೀಶ್ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಹರೀಶ್ ಹಳೆಯ ನಟರಾಗಿದ್ದರೂ ಒಂದು ಮಧ್ಯಂತರ ಅವಧಿಯಲ್ಲಿ ಸಿನೆಮಾದಿಂದ ದೂರ ಉಳಿದಿದ್ದರು. ಆದರೆ ಕೆಜಿಎಫ್ ಮಾತ್ರ ಅವರ ಬದುಕಿಗೆ ದೊಡ್ಡ ಇನ್ನಿಂಗ್ಸ್ ನೀಡಿತು. ಈ ಮೂಲಕ ಈ ಸಿನೆಮಾ ಬಗ್ಗೆ ಅವರು ಮನಬಿಚ್ಚಿ ಮಾತಾಡಿದ್ದಾರೆ.
ಎರಡು ಒಂದೇ ಸಿನೆಮಾನಾ?
ಇತ್ತೀಚೆಗೆ ಹರೀಶ್ ಅವರು ಕಬ್ಜ ಸಿನೆಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತಾಡಿದ್ದಾರೆ. ಸಂದರ್ಶಕ ಸರ್ ಕಬ್ಜ ಮತ್ತು ಕೆಜಿಎಫ್ ಎರಡು ಒಂದೇ ರೀತಿಯಾದ ಸಿನೆಮಾ ಎಂಬ ಮಾತು ಕೇಳಿಬರುತ್ತಿದೆ ನೀವು ಈ ಸಿನೆಮಾ ತಂಡದೊಂದಿಗೆ ಕೆಲಸ ಮಾಡಿದ್ದೀರಿ ಈ ಬಗ್ಗೆ ಏನು ಹೇಳ್ತೀರಿ ಎಂದು ಕೇಳಿದ್ದಕ್ಕೆ ನಾನು 25ವರ್ಷದ ಹಿಂದೆ ಉದ್ದ ಕೂದಲು ಬಿಟ್ಟಿದ್ದೆ ಆ ಕಾಲದಲ್ಲಿ ನಾನು ಮೊದಲು ಆ ಸ್ಟೈಲ್ ಮಾಡಿದ್ದಯ ಆದರೆ ಈಗ ನೋಡಿದರೆ ಹಾದಿ ಬೀದಿಯಲ್ಲಿ ಅದಕ್ಕೂ ಮೀರಿದ ಸ್ಟೈಲ್ ನಮಗೆ ಕಾಣಸಿಗುತ್ತದೆ ಹಾಗೆಂದು ನಾನೇ ಮೊದಲು ಅನ್ನಲು ಆಗಲಾರದು ಈ ಮೂಲಕ ಹೇಳುದೆಂದರೆ ಎಲ್ಲ ಸಿನೆಮಾ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಅದನ್ನು ನಾವು ಮೊದಲೇ ಬಿಂಬಿಸಲಾಗದು ಅದು ಬೇರೆ ಈ ಸಿನೆಮಾ ಕೂಡ ಬೇರೆನೆ ನನಗೆ ಕಬ್ಜ ತಂಡದೊಂದಿಗೆ ಉಪ್ಪಿ ಸರ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ ಎಂದಿದ್ದಾರೆ. ಈ ಮೂಲಕ ಸಿನೆಮಾ ಎಂದಿದ್ದಾರೆ ನಿರೀಕ್ಷೆ ಮಾತ್ರ ಸಂಪೂರ್ಣ ಬದಲಾಗಿದೆ.