Actress Meena: ಜೀವನದ ಖಾಸಗಿ ವಿಷಯ ಬಿಚ್ಚಿಟ್ಟ ನಟಿ ಮೀನ

Advertisement
ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೀನಾ (Actress Meena) ಅವರು ಬೇರೆ ಬೇರೆ ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ಇಂದಿಗೂ ಅಚ್ಚು ಮೆಚ್ಚಿನ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ ಒಳ್ಳೆಯ ಪಾತ್ರಗಳು ಸಿಕ್ಕಾಗ ನಟಿ ಮೀನಾ ನಟೀಸ್ತಾರೆ, ಇವರು ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಸಕ್ರಿಯರಾಗಿದ್ದ ನಟಿ ಇವರು.
ನಟಿ ಮೀನಾಗೆ ಈ ಹೀರೋ ಮೇಲೆ ಲವ್ ಆಗಿತ್ತಂತ್ತೆ:
6 ವರ್ಷವಿದ್ದಾಗಲೇ ಚಿತ್ರರಂಗ ಪ್ರವೇಶಿಸಿದ ಮೀನಾ ನಟಿಯಾಗಿ 40 ವರ್ಷ ಪೂರೈಸಿದ್ದಾರೆ. ಇದೇ ವೇಳೆ ತಮ್ಮ ಜೀವನದಲ್ಲಿ ಕೆಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ, ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ (Hrithik Roshan) ಅವರನ್ನು ನಾನು ಪ್ರೀತಿಸುತ್ತಿದ್ದೆ ಎಂದು ಮೀನಾ ಹೇಳಿದ್ದಾರೆ. ನನಗೆ ಹೃತಿಕ್‌ನಂತಹ ಗಂಡ ಬೇಕು ಎಂದು ನನ್ನ ತಾಯಿಗೆ ಹೇಳುತ್ತಿದ್ದೆ. ಅವರ ಮದುವೆಯ ದಿನದಂದು ನಾನು ತೀವ್ರವಾಗಿ ಬೇಸರಗೊಂಡಿದ್ದೆ, ಮತ್ತು ಅವರು ಸಿಗಲಿಲ್ಲ ಎಂಬ ಕಾರಣಕ್ಕೆ ದುಃಖ ತಡಿಯಲಾಗದೇ ಕಣ್ಣೀರು ಸಹ ಹಾಕಿದ್ದೆ ಎಂದಿದ್ದಾರೆ.
ಇತ್ತೀಚಿಗಷ್ಟೇ ಗಂಡನನ್ನು ಕಳೆದುಕೊಂಡಿದ್ದ ನಟಿ ಮೀನಾ:
Advertisement
ಕೆಲ ತಿಂಗಳ ಹಿಂದೆ ಪತಿ ವಿದ್ಯಾಸಾಗರ್ ಅವರನ್ನು ಮೀನಾ ಕಳೆದುಕೊಂಡು ಬೇಸರದಲ್ಲಿದ್ದಾರೆ, ಕೋವಿಡ್ ಸೋಂಕಿನಿಂದ ವಿದ್ಯಾಸಾಗರ್ (Vidya Sagar) ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು ಶ್ವಾಸಕೋಶ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾ ಸಾಗರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಿದ್ಯಾಸಾಗರ್ ಅವರು ಅಕಾಲಿಕ ಮರಣ ಹೊಂದಿದ್ದು ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗಿತ್ತು
ನಟಿ ಮೀನಾ ಎರಡನೇ ಮದುವೆಯಾಗುತ್ತಾರೆ ಎಂಬ ವದಂತಿ:
ಪತಿಯ ಸಾವಿನಿಂದ ನಟಿ ಮೀನಾ ಈಗಾಗಲೇ ತುಂಬಾ ದುಕ್ಕಿತರಾಗದ್ದರು. ಅವರಿಗೆ ಪತಿಯ ಸಾವಿನಿಂದ ಹೊರ ಬರಲು ಸಾಕಷ್ಟು ಸಮಯ ಬೇಕಾಯಿತು, ನಟಿ ಮೀನಾ ಅವರು ಎರಡನೇ ಮದುವೆಯನ್ನು ಮಾಡಿಕೊಳ್ಳಬೇಕೆಂದು ಕುಟುಂಬದವರು ಹಾಗೂ ಅವರ ಸ್ನೇಹಿತರು ಒತ್ತಾಯಿಸಿದ್ದರು,ಎಂಬ ವದಂತಿ ಕೇಳಿ ಬಂದಿತ್ತು.
ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಮೀನಾ:
ಮೀನಾರವರಿಗೆ ನಿಜಕ್ಕೂ ಎರಡನೇ ಮದುವೆಯಾಗುವ ಉದ್ದೇಶವಿದ್ದರೇ ನಾನೇ ತಿಳಿಸುತ್ತೇನೆ, ಆದರೆ ಯಾರೂ ಸಹ ಇಲ್ಲದ ವಿಚಾರ ಕ್ರಿಯೇಟ್ ಮಾಡಬಾರದು ಎಂದು ಮೀನಾ ತಿಳಿಸಿದ್ದಾರೆ. ನನ್ನ ದುಃಖದಲ್ಲಿ ಜೊತೆಗೆ ನಿಂತ ಎಲ್ಲರಿಗೂ ಧನ್ಯವಾದ. ಆದರೆ ಇದರ ನಡುವೆ ಕೆಲವು ಸುಳ್ಳು ಸುದ್ದಿಗಳು ಹಬ್ಬಿದ್ದು ಆಘಾತ ತಂದಿದೆ. ದಯವಿಟ್ಟು ನನ್ನ ಖಾಸಗಿತನವನ್ನು ಗೌರವಿಸಿ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದರು ನಟಿ ಮೀನಾ.
Advertisement