Naresh And Pavitra Lokesh: ಪವಿತ್ರ ಲೋಕೇಶ್ ನ ಮದುವೆ ಆಗಿರುವ ನರೇಶ್ ನ ಮತ್ತೊಂದು ಖಾಸಗಿ ವಿಷಯ ಬಯಲು
ತೆಲುಗು (Telugu) ಚಿತ್ರರಂಗದ ಖ್ಯಾತ ಹಿರಿಯ ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavithra Lokesh) ನಡುವಿನ ಸಂಬಂಧ ಗುಟ್ಟಾಗಿ ಉಳಿದಿಲ್ಲ. ಹೌದು ಇಬ್ಬರ ಪ್ರಕರಣವನ್ನು ಈಗಾಗಲೇ ನರೇಶ್ ಮೂರನೇ ಪತ್ನಿಯೇ ಬಯಲು ಮಾಡಿದ್ದಾರೆ. ಹೌದು ನರೇಶ್ ಪವಿತ್ರಾ ಲೋಕೇಶ್ ಮತ್ತು ರಮ್ಯಾ ರಘುಪತಿ (Ramya Raghupati) ಈ ಮೂವರ ಮಧ್ಯೆ ಆಗಾಗ ಕಿತ್ತಾಟಗಳೂ ಸಹ ನಡೆಯುತ್ತಲೇ ಇರುತ್ತೆ. ಇನ್ನು ಮಾರ್ಚ್ 10 ರ ಬೆಳಗ್ಗೆ ನರೇಶ್ ನಟಿ ಪವಿತ್ರಾ ಲೋಕೇಶ್ ಜೊತೆ ವಿವಾಹ (Marriage) ಆಗುತ್ತಿರುವ ವಿಡಿಯೋ ರಿಲೀಸ್ ಮಾಡಿದ್ದೇ ತಡ ತೆಲುಗಿನ ಎರಡು ರಾಜ್ಯಗಳು ಮತ್ತು ಕರ್ನಾಟಕದಲ್ಲಿ (Karnataka) ಹಲ್‌ಚಲ್ ಎದ್ದಿತ್ತು..
ಹೌದು ಹೊಸ ವರ್ಷದ (New Year) ಸಂದರ್ಭದಲ್ಲಿ ನರೇಶ್ ನಟಿ ಪವಿತ್ರಾ ಲೋಕೇಶ್ ಜೊತೆಗಿನ ಚುಂಬನ ವಿಡಿಯೋ ಸಂಚಲನ ಮೂಡಿಸಿದ್ದು ಆ ನಂತರ ಮಾರ್ಚ್ 10 ರಂದು ಮತ್ತೆ ತಮ್ಮ ಮದುವೆಯ ವಿಡಿಯೋ ಪೋಸ್ಟ್ ಮಾಡಿ ರಮ್ಯಾ ರಘುಪತಿಗೆ ಶಾಕ್ ಕೊಟ್ಟಿದ್ದಾರೆ. ಹೌದು ಅಸಲಿಗೆ ಇದು ರಿಯಲ್ ಲೈಫ್ ಮದುವೆಯೇ? ಇಲ್ಲಾ ರೀಲ್ ಲೈಫ್ ಮದುವೆನಾ ಅನ್ನೋದೇ ದೊಡ್ಡ ಚರ್ಚೆಯಾಗೀಡು ಕೂಡ ಮಾಡಿದೆ ಎನ್ನಬಹುದು .
ಇನ್ನು ನರೇಶ್ ಮತ್ತು ಪವಿತ್ರಾ ಲೋಕೇಶ್ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು. ಹೌದು ಈ ಬೆನ್ನಲ್ಲೇ ಹಲವು ಚರ್ಚೆಗಳು ಎದ್ದಿದ್ದು ನರೇಶ್ ಕೇವಲ ವಿಡಿಯೋ ಅಷ್ಟೇ ಹಂಚಿಕೊಂಡಿರಲಿಲ್ಲ. ಇದರ ಜೊತೆಗೆ ಒಂದು ಪವಿತ್ರ ಬಂಧ.. ಎರಡು ಮನಸ್ಸು.. ಮೂರು ಮುಳ್ಳು.. ಏಳು ಹೆಜ್ಜೆ. ನಿಮ್ಮ ಆಶೀರ್ವಾದವಿರಲಿ ಎಂದು ನರೇಶ್ ಟ್ವೀಟ್ ಮಾಡಿದ್ದರು.
ಇನ್ನು ಈ ವಿವಾದಾತ್ಮಕ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದ್ದು ಅಲ್ಲದೆ ಮೂರನೇ ಪತ್ನಿಗೆ ವಿಚ್ಛೇದನ ನೀಡದೆಯೇ ಇನ್ನೊಂದು ಮದುವೆ ಆಗಿದ್ದು ಹೇಗೆ? ಎಂಬ ಚರ್ಚೆಗಳೂ ಕೂಡ ಆರಂಭ ನಡೆಯುತ್ತಲೇ ಇದ್ದವು. ಈ ಮಧ್ಯೆ ಟಾಲಿವುಡ್ ಮಾಧ್ಯಮಗಳಲ್ಲಿ ಇಬ್ಬರು ಹನಿಮೂನ್‌ಗೆ ಹೋಗಿಬಂದಿರುವ ಸುದ್ದಿ ಕೂಡ ಪ್ರಸಾರ ಮಾಡಲಾಗುತ್ತಿದೆ.
ಇನ್ನು ಯಥಾ ಪ್ರಕಾರ ವಿವಾಹವಾಸ ಬಳಿಕ ಹನಿಮೂನ್ಗಾಗಿ ದುಬೈಗೆ (Dubai) ಹಾರಿರುವ ಈ ಜೋಡಿಗಳ ಮಧ್ಯ ನಿರಾಸೆ ಉಂಟಾಗಿದೆ. ಹೌದು ಹನಿಮೂನ್ ಗಾಗಿ (Honeymoon) ವಿದೇಶಕ್ಕೆ ಹೋಗಿದ್ದರು ಇವರಿಬ್ಬರ ನಡುವೆ ಏನು ನಡೆದೆ ಇಲ್ಲ ಎಂಬ ಮಾಹಿತಿ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೌದು ಹನಿಮೂನ್ಗಾಗಿ ದುಬೈನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದ ಹಾಗೆ ಹಲವು ಮೂಲಗಳ ಮಾಹಿತಿಗಳು ಇವರಿಬ್ಬರು ಹನಿಮೂನ್ಗಾಗಿ ದುಬೈಗೆ ಹೋಗಿಲ್ಲ ಬದಲಿಗೆ ಇವರಿಬ್ಬರ ಪ್ರೀತಿಯ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ.
ಇದರ ಶೂಟಿಂಗ್ ಸಲುವಾಗಿ ದುಬೈನಲ್ಲಿ ಫೋಟೋ ಮಾಡಿಸುತ್ತಿದ್ದಾರೆ ಎನ್ನಲಾಗಿತ್ತಿದೆ.ಇದು ಎಷ್ಟರಮಟ್ಟಿಗೆ ಸತ್ಯ ಎಷ್ಟರಮಟ್ಟಿಗೆ ಸುಳ್ಳು ಎಂಬುದರ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಇನ್ನು ನಿಮ್ಮ ಪ್ರಕಾರ ಇವರಿಬ್ಬರೂ ಮದುವೆಯಾದದ್ದು ಸರಿನಾ? ಈ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.