Rakshita: ಚೆಂದನವನದ ಕ್ರೇಜಿ ಕ್ವೀನ್ ರಕ್ಷಿತಾ, ನಿಜ ವಯಸ್ಸು ಎಷ್ಟು? ಇಲ್ಲಿದೆ ಮಾಹಿತಿ

Advertisement
ಸ್ಯಾಂಡಲ್ ವುಡ್ ನ (Sandalwood) ಕ್ರೇಜಿ ಕ್ವೀನ್ ಯಾರೆಂದು ಕೇಳಿದಾಗ ತಟ್ ಎಂದು ನೆನಪಾಗೋ ಹೆಸರೆ ನಟಿ ರಕ್ಷಿತಾ (Rakshita) ರಕ್ಷಿತಾ ಅವರು ಒಂದು ಕಾಲದಲ್ಲಿ ಚೆಂದನವನದ ಸಾಲು ಸಾಲು ಹಿಟ್ ಸಿನೆಮಾಗಳನ್ನು ನೀಡಿದವರು. ಇವರು ನಟಿಸಿದ್ದ ಸುಂಟರಗಾಳಿ, ಕಲಾಸಿಪಾಳ್ಯ, ಅಪ್ಪು, ಹುಬ್ಬಳ್ಳಿ, ಡೆಡ್ಲಿ ಸೋಮ, ಗೋಕರ್ಣ, ಕಾಶಿ, ಯಶವಂತ, ತಾಯಿಗಾಗಿ, ಅಯ್ಯ, ತನನಂ ತನನಂ ಇನ್ನು ಅನೇಕ ಸಿನೆಮಾದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಯ ನಟಿಯಾಗಿದ್ದಾರೆ, ಶಿವರಾಜ್ ಕುಮಾರ್ , ಉಪೇಂದ್ರ, ವಿಜಯರಾಘವೇಂದ್ರ, ಶ್ರೀ ಮುರುಳಿ, ದರ್ಶನ್ , ಪುನೀತ್ ರಾಜ್ ಕುಮಾರ್, ಸುದೀಪ್ ಹೀಗೆ ಅನೇಕ ನಟರೊಂದಿಗೆ ಬೆಳ್ಳಿ ಪರದೆ ಹಂಚಿಕೊಂಡಿದ್ದಾರೆ.
ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಎನ್.ಟಿ.ಆರ್ ಮುಂತಾದ ನಟರೊಂದಿಗೆ ಹಂಚಿಕೊಂಡರು.ಕನ್ನಡದಲ್ಲಿ ದರ್ಶನ್-ರಕ್ಷಿತಾ ಜೋಡಿ ಸಾಕಷ್ಟು ಪ್ರಸಿದ್ಧಿಯಾಗಿದ್ದು ಇವರು ಮದುವೆಯಾಗ್ತಾರಾ? ಎಂಬ ಗುಸು ಗುಸು ಮಾತು ಸಹ ಕೇಳಿಬರುತ್ತಿತ್ತು, ಆದರೆ ಎಲ್ಲರಿಗೂ ಆಶ್ಚರ್ಯ ಎಂಬಂತೆ ರಕ್ಷಿತಾ ಅವರು ಪ್ರೇಮ್ ಅವರನ್ನು ಪ್ರೀತಿಸಿ, ವಿವಾಹವಾಗಿ ಇಂತಹ ಊಹೆಗಳಿಗೆ ತೆರೆ ಎಳೆದರು .
ನಟನೆಯಿಂದ ದೂರವಾದ ನಟಿ ರಕ್ಷಿತಾ:
Advertisement
ನಟಿ ರಕ್ಷಿತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಟನೆಯಿಂದ ದೂರ ಉಳಿದಿದ್ದಾರೆ. ಸದ್ಯ ನಟಿ ರಕ್ಷಿತಾ ಅವರು ತಮ್ಮ ಪತಿಯ ಸಿನೆಮಾಗಳಿಗೆ ನಿರ್ಮಾಣ ಮಾಡುತ್ತಿದ್ದಾರೆ. ಹಾಗೂ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದಾರೆ. ಇದಕ್ಕೂ ಮೊದಲೇ ಸ್ವಯಂವರ ಅನ್ನೊ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದರು, ಡಿಕೆಡಿ, ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಟಿ ರಕ್ಷಿತಾ ಅವರು ನಾಯಕಿಯಾಗಿ ನಟಿಸಿದ್ದ ಕೊನೆ ಸಿನೆಮಾ ಎಂದರೆ ಅದು ಶಿವರಾಜ್ ಕುಮಾರ್ ಅಭಿನಯದ ತಾಯಿಗಾಗಿ ಸಿನೆಮಾ ,
ಈ ಸಿನೆಮಾ ನಟಿಸುವಾಗಲೆ ಅವರ ದೇಹದ ತೂಕ ಹೆಚ್ಚಾಗಿ ಬಿಟ್ಟಿತ್ತು, ಸಿನೆಮಾ ಕ್ಷೇತ್ರದಲ್ಲಿ ಅಗಣ್ಯ ಸಾಧನೆ ಮಾಡಿದ್ದ ರಕ್ಷಿತಾ ಅವರ ನಿಜ ವಯಸ್ಸು ಎಷ್ಟು ಎಂಬ ಕುತೂಹಲ ನಿಮಗೂ ಇರಬಹುದು.
ರಕ್ಷಿತಾ ನಿಜವಾದ ವಯಸ್ಸು ಎಷ್ಟು?
ಮದುವೆ ಆದ ನಂತರ ರಕ್ಷಿತಾ ಅವರು ಯಾವುದೇ ಸಿನಿಮಾದಲ್ಲಿಯೂ ಕೂಡ ನಟಿಯಾಗಿ ಕಾಣಿಸಿಕೊಂಡಿಲ್ಲ. ಅವರ ಮುಂದಿನ ಪ್ರಾಜೆಕ್ಟ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪ್ರೇಮ್ ಅವರು ಕೂಡ ಈಗಾಗಲೇ ನಿರ್ದೇಶನದಲ್ಲಿ ಕಮ್ ಬ್ಯಾಕ್ ಮಾಡಿದ್ದು ಅವರ ನಿರ್ದೇಶನದ ಕೆಡಿ(KD) ಸಿನಿಮಾ ಈಗ ಎಲ್ಲರ ನಿರೀಕ್ಷೆಯಲ್ಲಿದೆ. ಹೌದು ರಕ್ಷಿತಾ ನಿಜವಾದ ವಯಸ್ಸು 39 ಎಂದು ತಿಳಿದುಬಂದಿದೆ. ಈ ನಟಿ ಥಿಯೇಟರ್ ಮೇಲೆ ಕಾಣಿಸದ್ದಿದರು ಅಭಿಮಾನಿಗಳು ಮಾತ್ರ ತಾವು ಪ್ರೀತಿಸುವಂತಹ ನಟಿಯನ್ನು ಎಂದೂ ಮರೆಯುವುದಿಲ್ಲ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಕ್ಷಿತಾ ಅವರ ಹೆಸರಿನಲ್ಲಿ ಫ್ಯಾನ್ಸ್ ಪೇಜ್ ಕ್ರಿಯೇಟ್ (Fan page) ಮಾಡಿ ನೆನಪಿಸಿಕೊಳ್ಳುತ್ತಾರೆ
Advertisement