Suchendra Prasad: ಪವಿತ್ರ ಲೋಕೇಶ್ ನಾಲ್ಕನೇ ಮದುವೆ ಬೆನ್ನಲ್ಲೇ ಮಾಜಿ ಪತಿ ಸುಚೇಂದ್ರ ಪ್ರಸಾದ್ ಮಹತ್ವದ ಹೇಳಿಕೆ

Advertisement
ನಟಿ ಪವಿತ್ರಾ ಲೋಕೇಶ್ (Pavithra Lokesh) ಮತ್ತು ನಟ ಸುಚೇಂದ್ರ ಪ್ರಸಾದ್ (Suchendra Prasad) ಸಹಜೀವನದ ಕುರುಹುವಾಗಿ ಈ ದಂಪತಿಗೆ ಎರಡು ಮಕ್ಕಳು (children’s) ಇದ್ದಾರೆ. ಹೌದು ಈ ಮಕ್ಕಳ ಬಗ್ಗೆ ಪ್ರಥಮ ಬಾರಿಗೆ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ ಎಂದು ನಟ ಸುಚೇಂದ್ರ ಪ್ರಸಾದ್ ಕಳೆದ ವರುಷ ಹೇಳಿದ್ದರು. ಹೌದು ಆರು ವರ್ಷಗಳಿಂದ (6 Years) ದೂರವೇ ಇರುವ ಈ ಜೋಡಿಯು ಈವರೆಗೂ ಕೂಡ ಈ ಗುಟ್ಟನ್ನು ಯಾರೊಂದಿಗೆ ಹಂಚಿಕೊಂಡಿರಲಿಲ್ಲ. ಹೌದು ಈಗ ಎಲ್ಲವೂ ಬಟಾಬಯಲು ಆದ ಪರಿಣಾಮ ಮಕ್ಕಳ ಮನಸ್ಥಿತಿಯ ಬಗ್ಗೆ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ ಸುಚೇಂದ್ರ ಪ್ರಸಾದ್.
ಇನ್ನು ಈವರೆಗೂ ಪವಿತ್ರಾ ಲೋಕೇಶ್ (Pavitra Lokesh) ಹಾಗೂ ಸುಚೇಂದ್ರ ಪ್ರಸಾದ್ (Suchendra Prasad) ಮದುವೆಯಾಗಿದ್ದಾರೆ ಎಂದು ನಂಬಲಾಗಿತ್ತು. ಹೌದು ಮುದ್ದಾದ ಎರಡು ಮಕ್ಕಳು ಇರುವ ಕಾರಣದಿಂದಾಗಿ ಸತಿಪತಿ ನಡುವೆ ಒಳ್ಳೆಯ ಬಾಂಧವ್ಯವಿದೆ ಎಂದೂ ಅಂದುಕೊಳ್ಳಲಾಗಿತ್ತು. ಹೌದು ಆದರೆ ತಮ್ಮ ನಡುವೆ ಯಾವುದೂ ಸರಿಯಿಲ್ಲವೆಂದು ಪವಿತ್ರಾ ಲೋಕೇಶ್ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇನ್ನು ಆರು ವರ್ಷಗಳಿಂದ ತಾವು ದೂರವಿರುವುದಾಗಿಯೂ ತಿಳಿಸಿದ್ದು ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಸುಚೇಂದ್ರ ಪ್ರಸಾದ್ ಆತಂಕ ವ್ಯಕ್ತ ಪಡಿಸಿದ್ದರು.
Advertisement
ಇನ್ನು ಮಾಧ್ಯಮದೊಂದಿಗೆ ಮಾತನಾಡಿರುವ ಸುಚೇಂದ್ರ ಪ್ರಸಾದ್ ಪವಿತ್ರಾ ಲೋಕೇಶ್ ಅವರ ಭಾವನೆಯನ್ನು ಗೌರವಿಸುತ್ತೇನೆ. ಆದರೆ ಎರಡು ಮಕ್ಕಳಿವೆ. ಅವುಗಳನ್ನು ನೆನಪಿಸಿಕೊಂಡರೆ ದುಃಖವಾಗುತ್ತದೆ. ಮನಸು ವಿಚಲಿತವಾಗುತ್ತದೆ. ಮಕ್ಕಳ ಕಾರಣದಿಂದಾಗಿಯೂ ಅಂತಹ ನಿರ್ಧಾರ ತಗೆದುಕೊಳ್ಳಬಾರದಿತ್ತು. ಯಾವ ಕಾಲದಲ್ಲಿ ಏನು ನಡೆಯಬೇಕೋ ಅದು ನಡೆಯುತ್ತದೆ. ಆದರೆಮಕ್ಕಳಿಗೆ ಅದರಿಂದ ತೊಂದರೆ ಆಗಬಾರದು ಎಂದು ಮಾತನಾಡಿದ್ದರು. ಸದ್ಯ ಇದೀಗ ಪವಿತ್ರಾ ಹಾಗೂ ನರೇಶ್ ಮದುವೆಯಾಗಿರುವುದು ತಿಳಿಯುತ್ತಿದ್ದಂತೆ ಮಕ್ಕಳನ್ನು ಕರೆದುಕೊಂಡು ಲೈವ್ ಬಂದ ಸುಚೇಂದ್ರ ಪ್ರಸಾದ್ ಏನು ಹೇಳಿದ್ದಾರೆ ಗೊತ್ತಾ? ಲೇಖನಿ ಕೆಳಗಿನ ವಿಡಿಯೋ ನೋಡಿ.
ಇನ್ನು ತೆಲುಗು ನಟ ನರೇಶ್ ನಡುವಿನ ಪ್ರೇಮ್ ಕಹಾನಿ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಹೌಫು ಇವರಿಬ್ಬರ ಲವ್ ಸ್ಟೋರಿ ವಿವಾದಕ್ಕೆ ತಿರುಗಿದ್ದು ಕೂಡ ಇದೆ. ಈಗ ತೆಲುಗು ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರೂ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇನ್ನು ಇದಕ್ಕೆ ಪೂರಕ್ಕೆ ಎನ್ನುವಂತೆ ಸ್ವತ: ನರೇಶ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನರೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಚಿಕ್ಕ ವಿಡಿಯೋವನ್ನು ಹೊರಬಿಟ್ಟಿದ್ದು ಒಂದು ಪವಿತ್ರ ಬಂಧ.. ಎರಡು ಮನಸ್ಸುಗಳು.. ಮೂರು ಮುಳ್ಳುಗಳು..ಏಳು ಪಾದಗಳು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
Advertisement