Yash And Yogi: ಲೂಸ್ ಮಾದ ಯೋಗಿ ನಟಿಸಬೇಕಿದ್ದ ಸಿನೆಮಾವನ್ನು ರಾಕಿ ಬಾಯ್ ಯಶ್ ನಟಿಸಿ ಹಿಟ್ ಆಗಿದ್ದರು, ಇಲ್ಲಿದೆ ವರದಿ
ಚೆಂದನವನದ ಬೆಸ್ಟ್ ಫ್ರೆಂಡ್ಸ್ ಗಳ ಪೈಕಿ ಯಶ್ (Yash) ಮತ್ತು ಯೋಗಿ (Yogi) ಕೂಡ ಒಬ್ಬರೆನ್ನಬಹುದು. ಯಶ್ ಮತ್ತು ಲೂಸ್ ನಾದ ಯೋಗಿ ಹೆಚ್ಚು ಕಮ್ಮಿ ಸ್ಯಾಂಡಲ್ ವುಡ್ ಗೆ(Sandalwood) ಕಾಲಿಟ್ಟದ್ದು ಒಂದೇ ಸಮಯ ಆದರೂ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡದ್ದು ಮಾತ್ರ ಯಶ್ ಎನ್ನಬಹುದು. ಅದೇ ರೀತಿ ಯೋಗಿ ಅವರು ಅಭಿನಯಿಸಬೇಕಿದ್ದ ಸಿನೆಮಾ ವನ್ನು ಯಶ್ ಅಭಿನಯಿಸಿ ಆ ಒಂದು ಸಿನೆಮಾ ಹಿಟ್ ಸಹ ಆಗಿತ್ತು ಆ ಸಿನೆಮಾ ಯಾವುದೆಂಬ ಬಗ್ಗೆ ಇಲ್ಲಿದೆ ಮಾಹಿತಿ.
ನಿಮಗೆ ದುನಿಯಾ ವಿಜಯ್ (Dunia vijay) ಅಭಿನಯದ ದುನಿಯಾ ಸಿನೆಮಾ ನೆನಪಿದ್ದರೆ ಅದರಲ್ಲಿ ಲೂಸ್ ಮಾದ ಅವರು ಮೊದಲ ಬಾರಿ ಒಂದು ಖಳನಾಯಕನ ನಟನೆ ಮಾಡಿದ್ದನ್ನು ಕಾಣಬಹುದು. ನೋಡಲು ಸಣ್ಣ ದೇಹವಾದರೂ ಯೋಗಿ ಅವರು ತಮ್ಮದೇ ಆದ ವಿಭಿನ್ನ ನಟನೆ ಮೂಲಕ ಗುರುತಿಸಿಕೊಂಡವರು. ಈ ಮೂಲಕ ಅಂಬರ, ರಾವಣ, ಅಂಬಾರಿ, ಜಿಂಕೆ ಮರಿ, ಜಾನ್ ಜಾನಿ ಜನಾರ್ಧನ್, ಲೂಸ್ ಮಾದ, ಅಲೆಮಾರಿ, ಧೂಳ್, ಕಿರಗೂರಿನ ಗೈಯ್ಯಾಳಿಗಳು, ಹುಡುಗರು, ಸಿಧ್ಲಿಂಗು, ಯಾರೇ ಕೂಗಾಡಲಿ ಇನ್ನೂ ಅನೇಕ ಹಿಟ್ ಸಿನೆಮಾಗಳನ್ನು ನೀಡಿ ಕಾಲ ಕ್ರಮೇಣ ಸಿನೆಮಾ ಆಯ್ಕೆ ವಿಚಾರದಲ್ಲಿ ಸೋತಿದ್ದಾರೆ ಎನ್ನಬಹುದು.
ಯಾವುದು ಆ ಮೂರು ಸಿನೆಮಾ?
ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಸತೀಶ್ ನೀನಾಸಂ ಹಾಗೂ ಸಿಂಧು ನಾಲ್ವರು ಒಟ್ಟಾಗಿ ನಟಿಸಿ ಡ್ರಾಮ ಸಿನೆಮಾದ ಮೊದಲ ಆಫರ್ ಲೂಸ್ ಮಾದ ಯೋಗಿ ಅವರಿಗೆ ಬಂದಿತ್ತು ಆದರೆ ಕಾರಣಾಂತರದಿಂದ ಈ ಸಿನೆಮಾವನ್ನು ಅವರು ಮಾಡಲಾಗಲಿಲ್ಲವಂತೆ. ಅಂಬರೀಶ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದ ಈ ಸಿನೆಮಾ ಭರ್ಜರಿ ಯಶಸ್ಸು ಪಡೆಯಿತು.
ಈ ಮೂಲಕ ಡ್ರಾಮಾ (Drama) ಸಿನೆಮಾ ಮೂಲಕ ಯಶಸ್ವಿ ಕಾಣಬೇಕಾದ ಯೋಗಿ ಈ ಅವಕಾಶದಿಂದ ವಂಚಿತರಾಗಿದ್ದರು, ಸದ್ಯ ರಾಕಿಬಾಯ್ ಯಶ್ ಅವರು ಪ್ಯಾನ್ ಇಂಡಿಯಾ(Pan India) ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಯೋಗಿ ಈಗ ಸಿನೆಮಾ ಕ್ಷೇತ್ರದಿಂದ ಸ್ವಲ್ಪ ದೂರ ಉಳಿದಿದ್ದಾರೆ.