ಕನ್ನಡ ಸಿನೆಮಾ ರಂಗದಲ್ಲಿ ನಿರ್ದೇಶಕನಾಗಿ, ಸಂಗೀತ ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡ ವಿ. ಮನೋಹರ್ (V. Manohar) ಅವರು ಸಿನೆಮಾರಂಗಕ್ಕೆ ಅಪಾರ ಕೊಡುಗೆ ನೀಡುದ್ದ ಮೇರು ವ್ಯಕ್ತಿತ್ತ್ವದವರು. ಅವರ ರಚನೆಯಲ್ಲಿ ಹಲವಾರು ಸಂಗೀತದ ನಾದ ಹೊಮ್ಮಿದ್ದು ತಮ್ಮ ಬದುಕಿನ ದೃಷ್ಟಾಂತದ ಬಗ್ಗೆ ಸ್ವತಃ ವಿ. ಮನೋಹರ್ ಅವರೇ ಮಾತಾಡಿದ್ದಾರೆ. ಈ ಮೂಲಕ ತಾನು ಈ ಮಟ್ಟಕ್ಕೆ ಬರಲು ಓರ್ವ ವ್ಯಕ್ತಿ ಕಾರಣ ಎಂಬ ಸತ್ಯವನ್ನು ಸಹ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಕಬ್ಜ ಸಿನೆಮಾ ಎಲ್ಲರ ಬಾಯಲ್ಲೂ ಬಹುನಿರೀಕ್ಷಿತ ಸಿನೆಮಾವಾಗಿ ಹೊರಹೊಮ್ಮಿದ್ದನ್ನು ನಾವು ಕಂಡಿದ್ದೇವೆ. ಅದೇ ರೀತಿ ಈ ಸಿನೆಮಾಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ವಿ. ಮನೋಹರ್ ಅವರಿಗೆ ಪ್ರಶ್ನೆ ಕೇಳಲಾಗಿದ್ದು ಈ ಬಗ್ಗೆ ಅವರು ಮಾತಾಡಿದ್ದಾರೆ.
ಯಾರು ಆ ವ್ಯಕ್ತಿ?
ನನ್ನ ಬದುಕನ್ನು ಬದಲಾಯಿಸಿದ್ದು ರಿಯಲ್ ಸ್ಟಾರ್ ಉಪೇಂದ್ರ (Upendra) ಎಂದು ಈ ಬಗ್ಗೆ ವಿ. ಮನೋಹರ್ ಅವರು ಸತ್ಯ ತಿಳಿಸಿದ್ದಾರೆ. ಸಂದರ್ಶಕನು ಸರ್ ಉಪೇಂದ್ರ ಅವರು ನೀವು ಬರೆದ ಲಿರಿಕ್ಸ್ ಅನ್ನು ಜೇಬಲ್ಲಿ ಇಟ್ಟುಕೊಂಡು ಅವರು ಬರೆದದನ್ನು ನಿರ್ದೇಶಕರಿಗೆ ನೀಡಿದ್ದಾರೆ ಅನ್ನುತ್ತಾರಲ್ಲ ಅದರ ಬಗ್ಗೆ ಏನು ಹೇಳ್ತೀರಿ ಎಂದು ಕೇಳಿದ್ದಕ್ಕೆ. ಅವರು ಹೇಳ್ತಾರೆ ಸರ್ ಅದು ಅವರ ದೊಡ್ಡ ಗುಣ , ನಾನಿಂದು ಈ ಮಟ್ಟಕ್ಕೆ ತಲುಪಿದ್ದೇನೆ ಎಂದರೆ ಅದಕ್ಕೆ ಅವರೆ ಕಾರಣ ನಾನು ನಿರ್ದೇಶಕನಾಗಬೇಕೆಂದು ಬಂದೆ ಈಗ ದೊಡ್ಡ ಸಂಗೀತ ನಿರ್ದೇಶಕನಾಗಿದ್ದೇನೆ.
ಅವರು ನನ್ನ ಬದುಕನ್ನು ಬದಲಾಯಿಸಿದ್ದ ಬ್ರಹ್ಮ ಯಾಕೆಂದರೆ ನನ್ನೊಳಗಿರುವ ಸಂಗೀತ ಲೋಕವನ್ನು ಅದರ ಜ್ಞಾನವನ್ನು ನನಗೆ ಪರಿಚಯಿಸಿದ್ದಾರೆ. ಇಂದು ನನ್ನ ಎಲ್ಲ ಕಷ್ಟಕ್ಕೆ ಅವರು ನೆರವಾಗಿದ್ದಾರೆ. ಅವರು ಲಿರಿಕ್ಸ್ ರೈಟರ್ ಆದರೂ ನನ್ನನ್ನು ಭೇಟಿಯಾಗಲು ಹಲವು ಸಿನೆಮಾದವರಿಗೆ ಹೇಳಿದ್ದಾರೆ. ಎಷ್ಟೋ ಅವಕಾಶಗಳು ಅವರಿಗೆ ಬಂದದ್ದನ್ನು ನನಗೆ ನೀಡಿದ್ದಾರೆ. ನಿಜಕ್ಕೂ ಈ ವಿಚಾರದಲ್ಲಿ ಅವರೆಂದರೆ ನಂಗೆ ಹೆಮ್ಮೆ ನಾನು ಸಾರ್ಥಕ ಜೀವನ ಕಾಣಲು ಕಾರಣ ಅವರೇ ಎಂದಿದ್ದಾರೆ.
ಒಟ್ಟಾರೆಯಾಗಿ ಉಪ್ಪಿ ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದೆಂಬ ವ್ಯಕ್ತಿತ್ತ್ವದವರೆಂಬುದು ನಮಗೆ ತಿಳಿದೆ ಇದೆ ಇದೀಗ ವಿ. ಮನೋಹರ್ (V. Manohar) ಅವರು ಮಾತಾಡಿದ್ದ ವೀಡಿಯೋ ಅಂತೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.