Karnataka Times
Trending Stories, Viral News, Gossips & Everything in Kannada

Naga Chaitanya And Samantha: ನಾಗಚೈತನ್ಯ ಸಮಂತಾ ಡಿವೋರ್ಸ್ ವಿಷಯದಲ್ಲಿ ಮಹತ್ವದ ತಿರುವು

Advertisement

ಚಿತ್ರೋದ್ಯಮದಲ್ಲಿರುವ (film industry) ಸ್ಟಾರ್ ದಂಪತಿಗಳ (star couple) ತಮ್ಮ ವೈಯುಕ್ತಿಕ ಬದುಕಿನಲ್ಲಿ ಏನೆಲ್ಲಾ ನಡಿಯುತ್ತಿದೆ ಎಂದು ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳಿಗೆ ಬಹಳ ಕುತೂಹಲವಿರುತ್ತದೆ. ಹೌದು ಅದರಲ್ಲೂ ತುಂಬಾನೇ ಮುದ್ದಾದ ಜೋಡಿಗಳ ಬಗ್ಗೆ ಅಭಿಮಾನಿಗಳಿಗೆ ಕೊಂಚ ಕುತೂಹಲ ಜಾಸ್ತಿನೆ ಇರುತ್ತದೆ ಎನ್ನಬಹುದು.

ತೆಲುಗು ಚಿತ್ರೋದ್ಯಮದಲ್ಲಿನ (Telugu film industry) ಒಂದು ಸ್ಟಾರ್ ನಟ-ನಟಿಯ ಜೋಡಿ ಕಳೆದ ಒಂದು ವರ್ಷದಲ್ಲಿ ತುಂಬಾನೇ ಸುದ್ದಿಯಲ್ಲಿದ್ದು ಆ ಸುದ್ದಿಯಾಗುವುದಕ್ಕೆ ಮುಖ್ಯ ಕಾರಣವೆಂದರೆ ಅವರಿಬ್ಬರ ವೈವಾಹಿಕ ಜೀವನದಿಂದ (married life) ಬೇರ್ಪಟ್ಟಿರುವುದು ಎಂದೇ ಹೇಳಬಹುದು. ಹೌದು ತೆಲುಗಿನ ಸಿನಿ ಪ್ರೇಕ್ಷಕರು ಅತೀ ಹೆಚ್ಚಾಗಿ ಇಷ್ಟ ಪಡುತ್ತಿದ್ದ ಜೋಡಿ ಎಂದರೆ ಅದು ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ (Samantha Ruth Prabhu and Naga Chaitanya) ಅವರದು. ಆದರೆ ಅವರು ತಮ್ಮ ವಿವಾಹವನ್ನು ಕೊನೆಗೊಳಿಸುವುದಾಗಿ ಜಂಟಿ ಹೇಳಿಕೆಯಲ್ಲಿ ಘೋಷಿಸಿದಾಗ ಅಭಿಮಾನಿಗಳು ಒಂದು ಕ್ಷಣ ದಿಗ್ಭ್ರಮೆಗೊಂಡರು.

ಇನ್ನು ಕಳೆದ ವರುಷದಿಂದ ನಾಗ ಚೈತನ್ಯ (Nagachaitanya) ಹಾಗೂ ಸಮಂತಾ(Samanta) ಜೋಡಿ ವಿಚ್ಛೇದನ(Divorce) ಪಡೆದಿದ್ದು ಯಾಕೆ? ಇದರ ಹಿಂದಿನ ಕಾರಣಗಳೇನು ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು(Fans) ಹುಡುಕುತ್ತಲೇ ಇದ್ದಾರೆ. ಈ ಸನ್ನಿವೇಶಗಳ ನಡುವೆ ಸೆನ್ಸಾರ್ ಸದಸ್ಯ ಹಾಹೂಚಲನಚಿತ್ರ ವಿಮರ್ಶಕ ಉಮೈರ್ ಸಂಧು (Umair Sandhu) ಅವರು ಇತ್ತೀಚೆಗೆ ಮಾಡಿದ ಟ್ವೀಟ್ (Tweet) ಒಂದು ಇದೀಗ ದೊಡ್ಡ ಸಂಚಲನ ಮೂಡಿಸುತ್ತಿದೆ.

Advertisement

ಹೌದು ನಾಗ ಚೈತನ್ಯ ಕಿರುಕುಳದಿಂದಲೇ ಸಮಂತಾ ಆತನೊಂದಿಗಿನ ಸಂಬಂಧವನ್ನು ಕಳೆದುಕೊಂಡಿದ್ದಾರೆ ಎಂದು ಉಮೈರ್ ಸಂಧು ರವರು ಇದೀಗ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ನಾಗ ಚೈತನ್ಯ ಒಬ್ಬ ಕೆಟ್ಟ ಗಂಡ. ಅವರು ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಟ್ಟಿದ್ದಾನೆ. ನಾನು ಗರ್ಭಿಣಿಯಾಗಿದ್ದೆ ಬಳಿಕ ನಾನು ಗರ್ಭಪಾತ ಮಾಡಿಸಬೇಕಾಗಿ ಬಂತು. ಆತನ ಕಿರುಕುಳವನ್ನು ಸಹಿಸಲಾಗುತ್ತಿಲ್ಲ ಎಂದು ಸಮಂತಾ ಹೇಳಿದ್ದಾರೆ ಎಂದು ಉಮರ್ ಸಂಧು ಇದೀಗ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಟ್ವೀಟ್ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಇನ್ನು ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ ಆಗಿದ್ದು ಇತ್ತೀಚಿಗೆ ಬಿಡುಗಡೆಯಾಫ ಯಶೋದಾ (Yashoda) ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ನವೆಂಬರ್ 11 ರಂದು ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆದಿತ್ತು. ಸದ್ಯ ಇದೀಗ ಅಮೆಜಾನ್ ಪ್ರೈಮ್​ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇನ್ನು ಸಮಂತಾ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ.

ಪುರಾಣದ ಹಿನ್ನೆಲೆ ಒಳಗೊಂಡಿದ್ದು ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದು ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ.ತೆಲುಗು ಹಿಂದಿತಮಿಳು ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಶಾಕುಂತಲಂ ಚಿತ್ರ ಫೆಬ್ರವರಿ 17 ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದ್ದು ಶಾಕುಂತಲಂ ಸಿನಿಮಾ ಕಾಳಿದಾಸನ ಅಭಿಜ್ಞಾನ ಶಾಕುಂತಲಂ ಮಹಾಕಾವ್ಯ ಆಧರಿಸಿದ್ದು ನಿರ್ಮಾಪಕ ಗುಣ ಶೇಖರ್ ನಿರ್ದೇಶನದ ಪೌರಾಣಿಕ ಪ್ರೇಮ ಕಾವ್ಯವಾಗಿದೆ.

Advertisement

Leave A Reply

Your email address will not be published.