Karnataka Times
Trending Stories, Viral News, Gossips & Everything in Kannada

Anchor Anushree: ಸದ್ದಿಲ್ಲದೇ ಅಪ್ಪುಗಾಗಿ ಮಹತ್ವದ ಕೆಲಸ ಮಾಡಿದ ಅನುಶ್ರೀ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ (Power Star) ಕರ್ನಾಟಕ ರತ್ನ (Karnataka Rathna) ಪುನೀತ್ ರಾಜ್​ಕುಮಾರ್ ರವರು (Puneeth Rajkumar) ಅಭಿಮಾನಿಗಳಿಗೆ ಮನೆ ದೇವರು ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎನ್ನಬಹುದು. ಸದ್ಯ ಅಭಿಮಾನಿಗಳು ಇದೀಗ ಅಪ್ಪುರವರನ್ನು (Power Star Puneeth Rajkumar) ಸಾಕ್ಷಾತ್ ದೇವರನ್ನೇ ಆಗಿ ಭಾವಿಸುತ್ತಿದ್ದು ವಿಜಯನಗರದ ಪುನೀತ್ ರಾಜ್​ಕುಮಾರ್ (Vijayanagara Puneeth Rajkumar Fans) ಅವರ ಅಭಿಮಾನಿಗಳು ಪುನೀತ್ ರಾಜ್​ಕುಮಾರ್ ರವರ ದೇವರ ಮಾಲೆ (Apuu Vritha) ವ್ರತಕ್ಕೆ ಸಜ್ಜಾಗಿದ್ದಾರೆ ಎಂದರೆ ನೀವು ನಂಬಲೇ ಬೇಕು.

ಹೌದು ದೊಡ್ಮನೆ ಹುಡ್ಗನ (Dodmane Hudga) ಅಭಿಮಾನಿಗಳಿಂದ ಮಾಲಾಧಾರಣೆ ವ್ರತ ಈಗಾಗಲೇ ಆರಂಭವಾಗಿದ್ದು ಮಾರ್ಚ್ 1 ರಿಂದ ಅಭಿಮಾನಿಗಳು ಮಾಲಾಧಾರಣೆ ಮಾಡಲಿದ್ದಾರೆ. ಹೌದು ವಿಜಯನಗರದ ಹೊಸಪೇಟೆ ನಗರದ ಅಪ್ಪು ಪುತ್ಥಳಿ ಬಳಿ ಅಭಿಮಾನಿಗಳು ಮಾಲೆ ಧರಿಸಲಿದ್ದು ತದನಂತರ ಮಾರ್ಚ್ 18 ಕ್ಕೆ ಅಪ್ಪು ಪುಣ್ಯಭೂಮಿಯ ದರ್ಶನ ಪಡೆಯಲಿದ್ದಾರೆ ಎನ್ನಲಾಗಿದೆ.

Join WhatsApp
Google News
Join Telegram
Join Instagram

ಇನ್ನು ಅಪ್ಪು ಮಾಲೆ ಧರಿಸಿರುವವರು ನಾನಾ ಸಂಕಲ್ಪ ಪಾಲಿಸಬೇಕಿದ್ದು ಅಪ್ಪು ಪುಣ್ಯಭೂಮಿ ದರ್ಶನದ ಬಳಿಕವಷ್ಟೇ ಹಂಪಿಯಲ್ಲಿ ಅಭಿಮಾನಿಗಳು ಮಾಲೆ ವಿಸರ್ಜನೆ ಮಾಡಬಹುದಾಗಿದೆ. ಹೌದು ಅಪ್ಪು ದೇವರ ವೃತ ಹೀಗೆ ಆಚರಿಸಬೇಕಂತ.!ಅಪ್ಪು ದೇವರ ಡಾಲರ್ ಇರುವ ಮಾಲೆ ಕೇಸರಿ ಶಾಲು ಕೇಸರಿ ಪಂಚೆ ಕೇಸರಿ ಶರ್ಟ್ ತೊಟ್ಟು ಅಪ್ಪು ದೇವರ ಫೋಟೋವನ್ನು ಇಟ್ಟಿ ಪೂಜೆ ಮಾಡುವ ವ್ರತ ಪಾಲಿಸಬೇಕಿದೆ. ಬೆಳಗ್ಗೆ ಸೂರ್ಯ ಹುಟ್ಟುವ ಮೊದಲು ಸ್ನಾನ ಮತ್ತು ಸಂಜೆ ಸೂರ್ಯ ಮುಳುಗಿದ ನಂತರ ಸ್ನಾನ. ಪ್ರಸಾದ ಬೆಳಗ್ಗೆ ಟಿಫಿನ್ ಮಧ್ಯಾಹ್ನ ಊಟ ಹಾಗೂ ರಾತ್ರಿ ಟಿಫಿನ್ ಮಾಡಬಹುದಾಗಿದೆ ಎಂದು ಮನವಿ ಮಾಡಲಾಗಿದೆ.

ಇನ್ನುಈ ಮಾಲೆಯನ್ನು ಹಾಕುವವರೆಲ್ಲರೂ ಯಾವ ಕೆಟ್ಟ ಚಟಗಳಿಗೆ ಹೋಗಬಾರದು. ಹೌದು ಮಾಲೆ ಹಾಕುವ ಎಲ್ಲಾ ಅಭಿಮಾನಿಗಳು 5 ದಿನ 11 ದಿನ ಅಥವಾ 1 ದಿನ ಮಾಲೆ ಹಾಕಬಹುದಾಗಿದೆ. ಪುಣ್ಯಭೂಮಿಗೆ ಹೋಗುವಾಗ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗತಕ್ಕದ್ದು. ಹೌದು ಅದರಲ್ಲಿ ಅಕ್ಕಿ ಬೇಳೆ ಎಣ್ಣೆ ಮುಂತಾದ ದಿನಸಿ ತೆಗೆದುಕೊಂಡು ಹೋಗತಕ್ಕದ್ದು. ತಮ್ಮ ಕೈಲಾದಷ್ಟು ಒಯ್ಯಬಹುದು. ಇದು ಅಪ್ಪು ದೇವರ ಮಾಲೆಯ ವಿದಾಯ ಎಂದು ಬರೆಯಲಾಗಿದೆ.

ಇನ್ನು ಇದೆಲ್ಲದರ ಜೊತೆ ಮತ್ತೊಂದು ವಿಷಯ ಈಗ ಬಾರಿ ಸುದ್ದಿ ಆಗುತ್ತಿದೆ. ಹೌದು ಅದೇನೆಂದರೆ ಅಪ್ಪು ಅವರ ಅಪ್ಪಟ ಅಭಿಮಾನಿ ಆಗಿರುವ ನಿರೂಪಕಿ ಅನುಶ್ರೀ (Anchor Anushree) ಅವರು ಅಪ್ಪು ಮಾಲಾಧಾರಿಗಳನ್ನು ಕರೆಸಿ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ್ದಾರೆ. ಇದರ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪ್ರತಿಷ್ಠಿತ ಹೋಟೆಲ್ ಅಲ್ಲಿ ಅಪ್ಪು ಮಲೆ ಧರಿಸುವ ಕೆಲವೊಂದು ಮಾಲಾದಾರಿಗಳಿಗೆ ಜೊತೆ ಅನುಶ್ರೀ ಅವರು ಮಾತಾಡಿಸುತ್ತಿರುವುದು ಮತ್ತು ಅವರನ್ನು ಊಟಕ್ಕೆ ಕರೆದಿರುವುದು ಇದರಲ್ಲಿ ಸ್ಪಷ್ಟ ಆಗುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

Leave A Reply

Your email address will not be published.