ಪಟಪಟ ಮಾತಿನ ಮಳ್ಳಿ ಯಾರೆಂದಾಗ ನಮಗೆ ತಟ್ ಅಂತ ನೆನಪಾಗೋದು ನಿರೂಪಕಿ ಅನುಶ್ರೀ (Anushree) ಅವರೆಂದು , ಇಂದು ಅನುಶ್ರೀ ಅವರು ಅನೇಕ ಟಿವಿ ಮತ್ತು ಹೊರಗಿನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿ ಸೈ ಎನಿಸಿದ್ದು ಮಾತ್ರವಲ್ಲದೆ ಆ್ಯಂಕರ್ ಅನುಶ್ರೀ ಯುಟ್ಯೂಬ್ (Anchor Anushree Youtube) ಚಾನೇಲ್ ಮೂಲಕ ಈಗಾಗಲೇ ಹಲವು ಸಿನೆಮಾ ತಾರೆಯರ ಸಂದರ್ಶನ ಮಾಡಿದ್ದಾರೆ. ಈ ಮೂಲಕ ಆಗಾಗ ಲೈವ್ ಬಂದು ತಮ್ಮ ಅಭಿಮಾನಿಗಳಿಗೆ ತೀರ ಸಾಮಿಪ್ಯ ಆಗಿದ್ದಾರೆ.
ಲೈವ್ನಲ್ಲಿ ಅನು ಹೇಳಿದ್ದೇನು?
ಅನುಶ್ರೀ ಅವರು ಆಗಾಗ ಫೇಸ್ ಬುಕ್ ಲೈವ್(Face Book Live) ಬರುತ್ತಿರುತ್ತಾರೆ. ಈ ಮೂಲಕ ಈ ಬಾರಿ ಅನುಶ್ರೀ ಅವರು ಲೈವ್ ಬಂದಾಗ ಒಂದಿಷ್ಟು ಜನರು ದರ್ಶನ್ ಸರ್ ಅವರ ಸಂದರ್ಶನ ಮಾಡಿ ಅಕ್ಕ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ಮೊದಲು ಅನುಶ್ರೀ ಅವರು ಮಾತನಾಡಿ , ಅನುಪಮಾ , ದಿಯಾ , ಶಿವಾನಿ ಎಲ್ಲರೂ ಹಾಯ್ ಎನ್ನುತ್ತಿದ್ದಾರೆ. ನನ್ನ ಸಾಂಗ್ ತುಂಬಾ ಇಷ್ಟವಂತೆ ಥ್ಯಾಂಕ್ಯೂ ಎಂದಿದ್ದಾರೆ. ಬಳಿಕ ಕಾರ್ತಿಕ್ ಅವರು ಮೇಡಂ / ಅನು ಅಕ್ಕ ನೀವು ಡಿ ಬಾಸ್ ಸಂದರ್ಶನ ಮಾಡಿ ಪ್ಲೀಸ್ ಎಂದು ಹಾಕಿದ್ದಾರೆ. ಅದಕ್ಕೆ ಉತ್ತರಿಸಿದ್ದ ಅನುಶ್ರೀ ಅವರು ಹಾಗೇನು ಮಾಡಬಾರದು ಅಂತ ಇಲ್ಲ, ಖಂಡಿತಾ ಮಾಡುತ್ತೇನೆ. ನಾನು ಅವರ ಸಂದರ್ಶನ ಮಾಡೊಲ್ಲ ಅನ್ನು ವಷ್ಟು ದೊಡ್ಡ ವ್ಯಕ್ತಿ ಅಂತು ಅಲ್ಲ . ನಾನು ಡಿ ಬಾಸ್, ಶ್ರೀಮುರಳಿ, ದರ್ಶನ್ ಸರ್, ಧ್ರುವ ಸರ್ಜಾ, ರಾಕಿ ಬಾಯ್ ಯಶ್ ಸೇರಿದಂತೆ ಅನೇಕರ ಸಂದರ್ಶನ ಮಾಡಲು ಇನ್ನು ಬಾಕಿ ಇದೆ ಖಂಡಿತವಾಗಿ ಮಾಡುತ್ತೇನೆ ಅದಕ್ಕೆಲ್ಲ ಸ್ವಲ್ಪ ಸಮಯ ಬೇಕು. ನಾವು ಸಂದರ್ಶನ ಮಾಡಬೇಕೆಂಬ ಸೆಲೆಬ್ರಿಟಿ ಕೂಡ ಸ್ವಲ್ಪಮಟ್ಟಿಗೆ ಫ್ರಿ ಇರಬೇಕು. ಎಲ್ಲಕ್ಕೂ ಕಾಲ ಕೂಡಿ ಬರಬೇಕು. ಆದಷ್ಟು ಬೇಗ ಸಂದರ್ಶನ ಮಾಡುತ್ತೇನೆ ಎಂದಿದ್ದಾರೆ.
ಭಾರೀ ಫೇಮಸ್ಸಲ್ಲಿದೆ ಅನುಶ್ರಿ ಯೂಟ್ಯೂಬ್:
ಸದ್ಯ ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನಲ್ ತುಂಬಾ ಫೇಮಸ್ ಆಗುತ್ತಿದ್ದು , ಬಹುತೇಕರು ಸಬ್ ಸ್ಕ್ರೈಬ್ (Subscribe) ಮಾಡಿದ್ದಾರೆ. ಅದೇ ರೀತಿ ಈಗಾಗಲೇ ಮಾಡಿದ್ದ ವೀಡಿಯೋ ಕೂಡ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ ಪಡೆಯುತ್ತಿದೆ. ಇವರ ಚಾನೆಲ್ ನಲ್ಲಿ ಸಂದರ್ಶನಗಳು (Interview) ಬಹಳ ಇಂಟ್ರಸ್ಟಿಂಗ್ ಆಗೀ ನಿರ್ವಹಿಸುತ್ತಾರೆ, ನೀವು ಅನುಶ್ರೀ ಅವರ ಅಭಿಮಾನಿ ಆಗಿದ್ದಲ್ಲಿ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.