ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಗುಣ ಎಂತಹದು ಎಂದು ಹೇಳಬೇಕಾಗಿಲ್ಲ, ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲೂ ಪುನೀತ್ ಚಿರಸ್ಥಾಯಿಯಾಗಿ ಇದ್ದಾರೆ, ಪುನೀತ್ ನಮ್ಮನ್ನು ಆಗಲಿದರೂ ಅವರ ಪರವಾಗಿ ಸಮಾಜಮುಖಿ ಕೆಲಸಗಳು ನಡೆಯುತ್ತಲೇ ಇದೆ, ಇದಕ್ಕೆ ಸಾಕ್ಷಿ ಎಂಬಂತೆ ಅಶ್ವಿನಿ ಪುನೀತ್ (Ashwini Puneeth) ಅವರು ಪುನೀತ್ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಅಪ್ಪುವಿನ ಈ ಗುಣ ಅಶ್ವಿನಿ ಪುನೀತ್ ಗೆ ಇಷ್ಟ:
ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ, ಪುನೀತ್ಗೆ ಪತ್ನಿ ಮೇಲೆ ಅಪಾರ ಪ್ರೀತಿ ಇತ್ತು. ಅಶ್ವಿನಿ ಅವರಿಗೂ ಅಷ್ಟೇ ಪತಿಯನ್ನು ಕಂಡರೆ ಅತಿಯಾದ ಪ್ರೀತಿ, ಆದರೆ, ಪುನೀತ್ ಈಗ ನಮ್ಮೆನ್ನೆಲ್ಲ ಆಗಲಿದ್ದಾರೆ, ಅಶ್ವಿನಿ ಚಿಕ್ಕಮಗಳೂರಿನವರು, ಪುನೀತ್ ರಾಜ್ಕುಮಾರ್ ಅವರ ಸಿಂಪ್ಲಿಸಿಟಿ ಅಶ್ವಿನಿ ಗೆ ಇಷ್ಟವಂತೆ, ಪುನೀತ್ ಅವರ ಸರಳತೆ ಮತ್ತು ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ನೋಡಿ ಅವರನ್ನು ಇಷ್ಟ ಪಟ್ಟಿದ್ದಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿಕೊಂಡಿದ್ದಾರೆ.
ಅಪ್ಪು- ಅಶ್ವಿನಿ ಪ್ರೀತಿ ವಿಚಾರ ಮನೆಯಲ್ಲಿ ತಿಳಿಸಿದ್ದೆ ಶಿವಣ್ಣ ಅಂತೆ:
ಪುನೀತ್ ರಾಜಕುಮಾರ್ ಅವರ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅವರ ಹಿಂದಿನ ದೊಡ್ಡ ಶಕ್ತಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿಂತುಕೊಂಡಿದ್ದರು. ಇಬ್ಬರೂ ಕೂಡ 1996ರ ಸಿನಿಮಾ ಚಿತ್ರೀಕರಣ ಒಂದರಲ್ಲಿ ಸಾಮಾನ್ಯ ಸ್ನೇಹಿತರ ಮೂಲಕ ಭೇಟಿಯಾಗುತ್ತಾರೆ. ನಂತರ ಅಪ್ಪು ಅವರಿಗೆ ಅಶ್ವಿನಿ ಅವರ ಮೇಲೆ ಪ್ರೀತಿ ಮೂಡುತ್ತದೆ. ಈ ವಿಚಾರವಾಗಿ ಅಪ್ಪು ಪ್ರೀತಿ ವಿಚಾರ ಡಾ.ರಾಜ್ಕುಮಾರ್ ಅವರಿಗೆ ಮೊದಲೇ ತಿಳಿದಿತ್ತಂತೆ. ಅಪ್ಪು-ಅಶ್ವಿನಿ ಪ್ರೀತಿ ವಿಚಾರ ತಿಳಿದ ಶಿವಣ್ಣ ಮೊದಲು ನೇರವಾಗಿ ಪಾರ್ವತಮ್ಮ ಬಳಿ ಹೇಳಿದ್ದರಂತೆ,ಪ್ರೀತಿ ವಿಚಾರ ಮನೆಯಲ್ಲಿ ಒಪ್ಪಿಕೊಂಡ ನಂತರ ಮದುವೆಯಾದರಂತೆ ಅಶ್ವಿನಿ ಪುನೀತ್
ಮಾರ್ಚ್ 17ಕ್ಕೆ ಪುನೀತ್ ಬರ್ತ್ಡೇ:
ಮಾರ್ಚ್ 17ಕ್ಕೆ ಪುನೀತ್ ರಾಜ್ಕುಮಾರ್ ಬರ್ತ್ಡೇ ಇದೆ. ಇದನ್ನು ಅದ್ದೂರಿಯಾಗಿ ಆಚರಿಸಲು ಫ್ಯಾನ್ಸ್ ತಯಾರಿ ಮಾಡಿಕೊಂಡಿದ್ದಾರೆ. ಇದರ ಜೊತೆ ಹಲವು ಸಾಮಾಜಿಕ ಕೆಲಸಗಳನ್ನು ಕೂಡ ಮಾಡಲಾಗುತ್ತಿದೆ, ಬದುಕಿನ ಬಗ್ಗೆ ಹೇಗೆಲ್ಲ ಕನಸು ಕಟ್ಟಿಕೊಂಡಿದ್ದರೋ ಹಾಗೆಯೇ ಬದುಕಿ ತೋರಿಸಿದವರು ಪುನೀತ್, ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ, ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಚಾರ್ ಆಗಿ ರೂಪಿಸಿದ್ದ ಪರಿ ಇಂದಿಗೂ ನಮ್ಮೆಲ್ಲರಲ್ಲಿ ಅಮರ ಎನ್ನಬಹುದು.