Karnataka Times
Trending Stories, Viral News, Gossips & Everything in Kannada

Weekend with Ramesh: ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಮಹತ್ವದ ತಿರುವು

Advertisement

ವೀಕೆಂಡ್​ ವಿತ್​ ರಮೇಶ್​ (Weekend with Ramesh) ಕಾರ್ಯಕ್ರಮವಂತೂ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ. ಈಗಾಗಲೇ ಈ ಕಾರ್ಯಕ್ರಮದ ಕುರಿತಾಗಿ ಚರ್ಚೆಗಳು ನಡೆಯುತ್ತಲೇ ಇದೆ, ಈ ಕಾರ್ಯಕ್ರಮದ ಅಭಿಮಾನಿಗಳಂತು ತಮ್ಮ ಮೆಚ್ಚಿನ ವ್ಯಕ್ತಿಗಳ ಹೆಸರು ಹೇಳಿ ಕಾಮೆಂಟ್ ಮಾಡುತ್ತಿದ್ದಾರೆ, ಖ್ಯಾತ ನಟ ರಮೇಶ್​ ಅರವಿಂದ್​ (Ramesh Aravind) ಇದರ ಆ್ಯಕರಿಂಗ್ ಮಾಡುತ್ತಾರೆ. ಇವರ ಭಾಷೆಯು ಕೂಡ ಸರಳವಾಗಿದ್ದು ಜನರಿಗೆ ಸುಲಭವಾಗಿ ಕನೆಕ್ಟ್ ಆಗಲಿದೆ.

ವೀಕೆಂಡ್ ವಿತ್ ರಮೇಶ್ ಸೀಟ್ ನಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್?

ಬದುಕಿದ ಅಷ್ಟೂ ದಿನ ಅಪ್ಪು ಮಾದರಿಯಾಗುವಂತೆ ಜೀವನ ನಡೆಸಿದವರು, ಸಾಮಾಜಿಕ ಕೆಲಸಗಳು, ವ್ಯಕ್ತಿತ್ವ, ಸರಳತೆ ಎಲ್ಲವೂ ಇವರನ್ನು ನೋಡಿ ಕಲಿಯಬೇಕು. ಪುನೀತ್​ ರಾಜ್​ಕುಮಾರ್​ ಅವರು ಕೂಡ ಅನೇಕ ಕನಸು (Dream) ಗಳನ್ನು ಕಂಡಿದ್ದರು, ಅವರ ಕನಸುಗಳನ್ನು ಅಶ್ವಿನಿ ಪುನೀತ್ ನೆರೆವೇರಿಸುತ್ತಿದ್ದಾರೆ, ಇವರ ಸರಳತೆ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ, ಈ ನಿಟ್ಟಿನಲ್ಲಿ ಅಶ್ವಿನಿ ಪುನೀತ್ ಈ ಕಾರ್ಯಕ್ರಮಕ್ಕೆ ಬರಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Advertisement

ಡಾ.ಬ್ರೋ ಸಾಧಕರ ಸೀಟ್‌ನಲ್ಲಿ ಕೂರಲಿದ್ದಾರಾ:

ಯೂಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಈ ಡಾ ಬ್ರೋ ಚಿರಪರಿಚಿತ, ಭರತನಾಟ್ಯ ಕಲಿತು ಅದರ ಕ್ಲಾಸ್‌ ನಡೆಸಿದ್ದ. ಫೋಟೋಗ್ರಫಿ, ವಿಡಿಯೂ ಗ್ರಫಿ ಕಲಿತು ತನ್ನದೇ ಆದ ಯೂ ಟ್ಯೂಬ್‌ ಚಾನೆಲ್ ಶುರು ಮಾಡಿದ್ದ, ಕಷ್ಟದ ಹಾದಿಯಲ್ಲಿ ಕಷ್ಟ ಪಟ್ಟು ಕೆಲಸ ಮಾಡಿ ಫೇಮಸ್ಸು ಆದವರು ಡಾ ಬ್ರೋ ವಿಕೆಂಡ್ ವಿಧ್ ಕಾರ್ಯಕ್ರಮಕ್ಕೆ ಬರಲಿ ಅನ್ನುತ್ತಿದ್ದಾರೆ.

ವೀಕೆಂಡ್‌ ವಿತ್‌ ರಮೇಶ್‌ ಜೊತೆ ಬೇರೆ ಯಾರೆಲ್ಲ ಗೆಸ್ಟ್ ಇದ್ದಾರೆ?

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಈ ಸೀಸನ್‌ನ ಮೊದಲ ಅತಿಥಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಆಗಲಿದ್ದಾರೆ ಎನ್ನಲಾಗಿದೆ. ರಿಷಬ್ ಶೆಟ್ಟಿ ಬರಲಿ ಎನ್ನವುದು ಅಭಿಮಾನಿಗಳ ಆಸೆ ಕೂಡ ಆಗಿದೆ. ಆದರೆ ಇನ್ನು ಮಾಹಿತಿ ತಿಳಿದು ಬಂದಿಲ್ಲ, ಅದೇ ರೀತಿ ಮಾಲಾಶ್ರೀ ಅವರು ಕೂಡ ಬರಬೇಕು ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ, ರಮ್ಯ ಹೆಸರು ಕೇಳುಬರುತ್ತಿದೆ, ಯಾರೆಲ್ಲ ಗೆಸ್ಟ್ ಇದ್ದಾರೆ ಕಾದು ನೋಡ್ಬೇಕು. ಈಗಾಗಲೇ 4 ವೀಕೆಂಡ್ ವಿತ್ ರಮೇಶ್ ಸೀಸನ್‍ಗಳು ಮುಗಿದಿವೆ. 4 ಸೀಸನ್‍ಗಳಲ್ಲಿ ಹಲವಾರು ಸಾಧಕರ ಬಗ್ಗೆ ನಮಗೆ ತೋರಿಸಿ ಕೊಟ್ಟಿದ್ದಾರೆ. ಈಗಾಗಲೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಿದ್ದತೆ ಪ್ರಾರಂಭವಾಗಿದ್ದು ಸದ್ಯದಲ್ಲೇ ಪ್ರಸಾರವಾಗಲಿದೆ ಎನ್ನಲಾಗಿದೆ.

Advertisement

Leave A Reply

Your email address will not be published.