Oscar Award: ರಾಜಮೌಳಿ ತಂಡಕ್ಕೆ ಸಿಕ್ಕ ಆಸ್ಕರ್ ಅವಾರ್ಡ್ ಎಷ್ಟು ಬೆಲೆ ಬಾಳುತ್ತೆ, ಇಲ್ಲಿದೆ ಮಾಹಿತಿ
ತೆಲುಗುನ (Telugu) ಎಂಎಂ ಕೀರವಾಣಿಯವರ (MM Keravani) ಯವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ನಾಟು ನಾಟು (Natu Natu) ಹಾಡಿಗೆ ಆಸ್ಕರ್ (Oscar)ಪ್ರಶಸ್ತಿ ಬಂದು ಒದಗಿದೆ. ಮೈದಾನದಲ್ಲಿ ರಾಮ್ ಚರಣ್ ತೇಜ(Ram Charan Teja) ಮತ್ತು ಜೂನಿಯರ್ ಎನ್ಟಿಆರ್ (J.NTR) ಹಾಕುವಂತಹ ಪ್ರತಿಯೊಂದು ಸ್ಟೆಪ್ ಕೂಡ ಮೈ ರೋಮಾಂಚನಗೊಳಿಸುವಂತ್ತಿದ್ದು ಈ ಹಾಡು ಇಂದಿಗೂ ಅದೆಷ್ಟೋ ಅಭಿಮಾನಿಗಳ ಹಾರ್ಟ್ ಫೇವರೆಟ್(Heart favourite) ಕೂಡ ಹೌದು.
ಸದ್ಯ ಇದನ್ನು ಅಂತರಾಷ್ಟ್ರೀಯ (International) ಮಟ್ಟದಲ್ಲಿ ಗುರುತಿಸಲಾಗಿದ್ದು ಅಮೆರಿಕದಲ್ಲಿ ನಡೆದಂತಹ ಆಸ್ಕರ್ ಅವಾರ್ಡ್ (Oscar Award) ಫಂಕ್ಷನ್ ನಲ್ಲಿ ಈ ಒಂದು ವಿಶೇಷವಾದ ಪ್ರಶಸ್ತಿ ದೊರಕಿದೆ.ಇನ್ನು ಆಸ್ಕರ್ ಅವಾರ್ಡ್ ವಿಭಿನ್ನ ಶೇಪ್ ಇರುವಂತಹ ಮೂರ್ತಿಯಾಗಿದ್ದು ಇದನ್ನು ತಯಾರಿಸಲು 400 ಡಾಲರ್ ಅಂದರೆ 32 ಸಾವಿರ ಹಣವನ್ನು ಖರ್ಚು ಮಾಡಲಾಗುತ್ತದೆ. ಹೌದು ಇದರ ಮೇಲೆ ಗೋಲ್ಡ್ ಕೋಟಿಂಗ್ (ಇದ್ದು ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಪ್ರಶಸ್ತಿ ಎಂದು ಇದನ್ನು ಗುರುತಿಸಲಾಗಿದೆ. ಇನ್ನು ಯಾವುದೇ ಕಾರಣಕ್ಕೂ ಪ್ರಶಸ್ತಿಯನ್ನು ಪಡೆದವರು ಬೇರೆ ಎಲ್ಲಿಯೂ ಕೂಡ ಇದನ್ನು ಮಾರುವಂತಿಲ್ಲ ಹಾಗೂ ಅಪ್ಪಿ ತಪ್ಪಿ ಮಾಡಿದರು 80 ರೂಪಾಯಿ ಗಿಂತ ಹೆಚ್ಚಿನ ದರಕ್ಕೆ ಇದು ಹೋಗುವುದಿಲ್ಲ.
ಇನ್ನು ಅದ್ಧೂರಿಯಾಗಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದ್ದು ಭಾರತಕ್ಕೆ ಈ ಬಾರಿ 2 ಆಸ್ಕರ್ ಪ್ರಶಸ್ತಿ ಲಭಿಸಿರೋದು ವಿಶೇಷ. ಅದರಲ್ಲೂ RRR ಚಿತ್ರದ ನಾಟು ನಾಟು ಗೀತೆ ಮತ್ತೊಮ್ಮೆ ವಿಶ್ವದ ಪ್ರತಿಷ್ಠಿತ ವೇದಿಕೆಯಲ್ಲಿ ಸದ್ದು ಮಾಡಿದ್ದು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಚಿತ್ರಕ್ಕೆ ಆಸ್ಕರ್ ಗೌರವ ಧಕ್ಕಿದೆ. RRR ಚಿತ್ರತಂಡ ಡಾಲ್ಬಿ ಹಾಲ್‌ನಲ್ಲಿ ಕುಣಿದು ಕುಪ್ಪಳಿಸಿದ್ದು ರಾಜಮೌಳಿ (Rajmouli)ನಿರ್ದೇಶನದ RRR ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಇನ್ಜು ವರ್ಷ ಕಳೆದರೂ ರಾಮ್-ಭೀಮ್ ಆರ್ಭಟ ನಿಂತಿಲ್ಲ. ಅಂತರಾಷ್ಟ್ರೀಯ ಸಿನಿಮಾ ವೇದಿಕೆಗಳಲ್ಲಿ ತೆಲುಗು ಸಿನಿಮಾ ಸದ್ದು ಮಾಡ್ತಾ ಬರ್ತಿದೆ. ಸದ್ಯ ಇದೀಗ ಆಸ್ಕರ್ ವೇದಿಕೆಯಲ್ಲೂ ಪ್ರಶಸ್ತಿ ಗೆದ್ದು ಮತ್ತೊಮ್ಮೆ ಟಾಕ್ ಆಫ್ ದ ಟೌನ್ ಆಗಿದ್ದು ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಮತ್ತು ಹಾಡು ಬರೆದ ಚಂದ್ರಬೋಸ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಇನ್ನು ನಿರ್ದೇಶಕ ರಾಜಮೌಳಿ ರಾಮ್‌ಚರಣ್ ಎಂ. ಎಂ ಕೀರವಾಣಿ ದಂಪತಿ ಸಮೇತರಾಗಿ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿ ಆಗಿದ್ದು ಇನ್ನು ಗಾಯಕರಾದ ರಾಹುಲ್ ಸಿಪ್ಲಿಗಂಜ್ ಕಾಲಭೈರವ ವೇದಿಕೆಯಲ್ಲಿ ನಾಟು ನಾಟು ಲೈವ್ ಪರ್ಫಾರ್ಮೆನ್ಸ್ ನೀಡಿದರು. ಎಂ. ಎಂ ಕೀರವಾಣಿ ಚಂದ್ರಬೋಸ್ ವೇದಿಕೆ ಏರಿ ಪ್ರಶಸ್ತಿ ಸ್ವೀಕರಿಸಿದ್ದು ಕೊನೆಯ ಸಾಲಿನಲ್ಲಿ ಕುಂತಿದ್ದ ರಾಜಮೌಳಿ ಪ್ರಶಸ್ತಿ ಘೋಷಣೆ ಆಗುತ್ತಿದಂತೆ ಕುಣಿದು ಸಂಭ್ರಮಿಸಿದರು.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಕೆಲವೊತ್ತು ಕಾರ್ಯಕ್ರಮದ ನಿರೂಪಕಿಯಾಗಿ RRR ತಂಡವನ್ನು ಪರಿಚಯಿಸಿದರು.
ಇನ್ನು ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಗೌರವ ಸಿಕ್ಕಿರುವುದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ದಾನಯ್ಯ ಸಂತಸ ಹಂಚಿಕೊಂಡಿದ್ದು ನಾನು ಮಾತ್ರವಲ್ಲ ಇಡೀ ದೇಶವೇ ಇದಕ್ಕಾಗಿ ಹೆಮ್ಮೆ ಪಡುತ್ತಿದೆ. ನಾವು ಮತ್ತಷ್ಟು ಪ್ರಶಸ್ತಿಗಾಗಿ ಶ್ರಮಿಸುತ್ತೇವೆ ಎಂದಿದ್ದಾರೆ.