Kabzaa: ಕಬ್ಜ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ? ಇಲ್ಲಿದೆ ಮಾಹಿತಿ

Advertisement
ಆರ್ ಚಂದ್ರು ನಿರ್ದೇಶಿಸಿ,(R Chandru). ನಿರ್ಮಿಸಿರುವ ಕಬ್ಜ (Kabzaa) ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿದೆ. ಈಗಾಗಲೇ ಎಲ್ಲಿ ನೋಡಿದ್ರು ಕಬ್ಜ ಸಿನಿಮಾದ ಮಾತುಗಳೇ ಕೇಳಿಬರುತ್ತೀವೆ, ಕಬ್ಜ ಸಿನಿಮಾದ ಮುಂಗಡ ಟಿಕೇಟ್ ಬುಕ್ಕಿಂಗ್ ದಿನದಿಂದ ದಿನಕ್ಕೆ ಡಬಲ್ ಆಗುತ್ತಲೇ ಇದೆ. ನುರಿತ ತಂತ್ರಜ್ಞರು ಕಬ್ಜ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಎ.ಜೆ. ಶೆಟ್ಟಿ (A.J, Sheety) ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ
ಬಿಡುಗಡೆಗೂ ಮುನ್ನ ದಾಖಲೆ ಬರೆಯುತ್ತಿರುವ ಕಬ್ಜ:
ಚಿತ್ರದಲ್ಲಿ ಮೂರು ಸ್ಟಾರ್ಸ್ ಇದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, (Upendra) ಕಿಚ್ಚ ಸುದೀಪ್ (Kiccha Sudeep) ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Raj Kumar) ಕುಮಾರ್ ಈ ಮೂಲಕ ಕನ್ನಡದ ಕಬ್ಜ ಚಿತ್ರ ಹೊಸ ಖದರ್ ಸೃಷ್ಟಿ ಮಾಡಲಿದೆ, ಈ ಮೂಲಕ ಸಿನಿಮಾ ಗಳಿಕೆ ಬಗ್ಗೆಯು ಎಲ್ಲರಲ್ಲೂ ಕುತೂಹಲ ಮೂಡಿದೆ, ಕನ್ನಡದಲ್ಲಂತೂ ವಿತರಕರು ನಾ ಮುಂದು ಎಂದು ಕಬ್ಜ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳ ಆಧಾರದ ಮೇಲೆ, ಕಬ್ಜ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.
Advertisement
ಕಬ್ಜದ ಮೊದಲ ದಿನದ ಕಲೆಕ್ಷನ್ ಮಾಹಿತಿ:
ಕಬ್ಜ ಸಿನಿಮಾ ಬಿಡುಗಡೆಗೂ ಮುನ್ನ ಬರೋಬ್ಬರಿ 100 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆದಿದೆಯಂತೆ. ಕಬ್ಜ ಸಿನಿಮಾವನ್ನು ಒಟಿಟಿಗೆ ಅಮೇಜಾನ್ ಪ್ರೈಂ ಖರೀದಿ ಮಾಡಿದೆ. ಸ್ಯಾಟಲೈಟ್ ರೈಟ್ಸ್ ಖರೀದಿ ಮಾಡಿರುವುದು ಕಲರ್ಸ್ ಕನ್ನಡ. ಹಿಂದಿ, ತಮಿಳು, ಮಲಯಾಳಂ, ತೆಲುಗು ರೈಟ್ಸ್ಗಳಿಗೂ ಸಖತ್ ಡಿಮ್ಯಾಂಡ್ ಬಂದಿದೆ ಯಂತೆ, ಕಬ್ಜ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಹಲವು ಕಡೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಚಿತ್ರದ ಮುಂಗಡ ಬುಕ್ಕಿಂಗ್ ಹೆಚ್ಚಾಗಿದ್ದು, ಮೊದಲ ದಿನವೇ ಚಿತ್ರವು 35 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗ್ತಿದೆ.
ಕೆಜಿಎಫ್ ಚಾಪ್ಟರ್ 2 ದಾಖಲೆ ಮೀರಿಸಲಿದೆಯಾ ಕಬ್ಜ:
ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವದ್ಯಾಂತ ಚಿತ್ರಮಂದಿರಗಳಲ್ಲಿ ಬಿಡುಡಗೆ ಆಗುವ ಮೂಲಕ ದಾಖಲೆ ಬರೆದಿತ್ತು, ಬಾಕ್ಸ್ ಆಪೀಸ್ ಕೊಳ್ಳೆ ಹೊಡೆದಿತ್ತು, ಕಬ್ಜ ಬಗ್ಗೆಯು ನಿರೀಕ್ಷೆ ಹೆಚ್ಚಾಗಿದೆ, ಇನ್ನು ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್ ಆಗಿರೋ ಕ್ರೇಜ್ ಅಷ್ಟಿಷ್ಟಲ್ಲ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದೊಂದು ವಿಶ್ವದ್ಯಾಂತ ಕಬ್ಜ ಸಿನಿಮಾ ಬಿಡುಗಡೆ ಆಗುವ ಮೂಲಕ ಕಬ್ಜ ಚಿತ್ರ ಹೊಸ ಅಧ್ಯಾಯ ಬರೆಯಲಿದೆ. ಇದರ ದಾಖಲೆ ಕೆಜಿಎಫ್ ಮೀರಿಸುತ್ತಾ ಕಾದು ನೋಡ್ಬೆಕು.
Advertisement