Kiccha Sudeep: ಸುದೀಪ್ ಮಾಡಬೇಕಿದ್ದ ಈ ಸಿನೆಮಾವನ್ನು ರಮೇಶ್ ಮಾಡಿ ಸೂಪರ್ ಹಿಟ್ ಆದ ಸ್ಟೋರಿ ಇಲ್ಲಿದೆ

Advertisement
ನಮ್ಮ ಚೆಂದವನದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರ ನಟನೆ (Acting) ಅವರ ಸ್ಥಾನದ ತೂಕದ ಬಗ್ಗೆ ರಮಗೆಲ್ಲರಿಗೂ ತಿಳಿದಿದೆ. ಹೌದು ನಿಜಕ್ಕೂ ಕೂಡ ಕಿಚ್ಚ ಸುದೀಪ್ ರವರ ನಟನೆಯನ್ನು ಕೇವಲ ಕನ್ನಡ ಚಿತ್ರರಂಗ (Kannada Filim Industry) ಮಾತ್ರವಲ್ಲದೆ ಪರಭಾಷೆಯ ಸಿನಿಮಾರಂಗಗಳು ಕೂಡ ಮನಸ್ಸು ತುಂಬಿ ಹೊಗಳುತ್ತವೆ. ಹೌದು ಅಷ್ಟರ ಮಟ್ಟಿಗೆ ತಮ್ಮ ನಟನೆಯ ಛಾಪನ್ನು ಕಿಚ್ಚ ಸುದೀಪ್ ರವರು ಇಡೀ ಭಾರತೀಯ ಚಿತ್ರರಂಗದಲ್ಲಿ(Indiam Filim Industry) ಅಚ್ಚೊತ್ತಿದ್ದಾರೆ.
ಇನ್ನು ನಟ ಕಿಚ್ಚ ಸುದೀಪ್ ರವರು ಮಾಡಬೇಕಾಗಿದ್ದ ಆ ಒಂದು ಸಿನಿಮಾ ಅವರ ಕೈತಪ್ಪಿ ಎವರ್ಗೀನ್ ಹೀರೋ ರಮೇಶ್ ಅರವಿಂದ್ (Ramesh Aravind) ರವರು ಮಾಡಿ ಬಳಿಕ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ? ಯಾಕೆ ಆ ಅವಕಾಶ ತಪ್ಪಿ ಹೋಯಿತು ಗೊತ್ತಾ? ಮುಂದೆ ಓದಿ..
Advertisement
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekar) ರವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಅಮೆರಿಕ ಅಮೆರಿಕ (America America) ಸಿನಿಮಾದಲ್ಲಿ ಪ್ರಕಾಶ್ ರಾಜ್ (Prakash Raj) ಜೊತೆಗೆ ನಾಯಕ ನಟನಾಗಿ ಅಭಿನಯ ಚಕ್ರವರ್ತಿ ನಮ್ಮ ಕಿಚ್ಚ ಸುದೀಪ್ ರವರು ನಟಿಸಬೇಕಾಗಿತ್ತು ಆದರೆ ಕೆಲವೊಂದು ವಯಕ್ತಿಕ ಕಾರಣಗಳಿಂದಾಗಿ ಸುದೀಪ್ ರವರು ಈ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಹೌದು ಆ ಸಂದರ್ಭದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಅದ್ಭುತ ಸಿನಿಮಾಗೆ ನಾಯಕನಾಗಿದ್ದೆ ರಮೇಶ್ ಅರವಿಂದ್.
ಇನ್ನು ರಮೇಶ್ ಅರವಿಂದ್ (Ramesh Aravind) ರವರು ನಾಯಕನಾದ ಬಳಿಕ ಈ ಚಿತ್ರದ ಚಿತ್ರೀಕರಣ ಪೂರೈಸಿ ಬಿಡುಗಡೆಯಾದ ಬಳಿಕ ಯಾವ ರೀತಿಯಲ್ಲಿ ಯಶಸ್ಸನ್ನು ಪಡೆದುಕೊಂಡಿದೆ ಎಂದರೆ ಈಗಲೂ ಕೂಡ ಅದೆಷ್ಟೋ ಜನರ ಫೇವರಿಟ್ ಸಿನಿಮಾ ಇದಾಗಿದೆ. ಅಮೆರಿಕ ಅಮೆರಿಕ(America America) ಸಿನಿಮಾದ ನೂರಾರು ಜನ್ಮಕು ನೂರಾರು ಹಾಡು ಎಂದಿಗೂ ಕೂಡ ಎವರ್ಗ್ರೀನ್ ಸಾಂಗ್ ಆಗಿದ್ದು ಇನ್ನು ಇಂದಿಗೂ ಕೂಡ ಕಿಚ್ಚ ಸುದೀಪ್ ರವರು ಕೈಗೆ ಬಂದ ಆ ಅವಕಾಶವನ್ನು ಮಿಸ್ ಮಾಡಿಕೊಂಡರೆ ಎನ್ನುವ ಅಭಿಪ್ರಾಯ ಎಂದಿಗೂ ಕೂಡ ಮೂಡಿಬರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಅಲ್ಲವೇ?
ಇನ್ನು 1996 ಜೂನ್ 16 ರಂದು ಚಿತ್ರದ ಮುಹೂರ್ತ ನಡೆದಿದ್ದು ಚಿತ್ರತಂಡ ಅಮೆರಿಕನ್ನಡಿಗರು ಉದ್ಯಮ ಮತ್ತು ಎಲ್ಲ ಪ್ರೇಕ್ಷಕರಿಗೆ ಕಾಲು ಶತಮಾನದಾದ್ಯಂತ ಕೃತಜ್ಞತೆಗಳು ಎಂದು ಅಮೆರಿಕಾ ಅಮೆರಿಕಾ ಸಿನಿಮಾ 25 ವರ್ಷ ಪೂರೈಸಿದ ಹಿನ್ನೆಲೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರು ಹೇಳಿದ್ದರು. ಇನ್ನು ಅಮೆರಿಕಾಗೆ ಹೋಗಿ ಸಿನಿಮಾ ಚಿತ್ರೀಕರಣ ಮಾಡಿ ಬಂದಿದ್ದರೂ ಈ ಚಿತ್ರದ ಬಜೆಟ್ ಆಗಿನ ಸಮಯಕ್ಕೆ ಸುಮಾರು 70 ರಿಂದ 75 ಲಕ್ಷ. ಈ ಚಿತ್ರ 5 ಕೋಟಿವರೆಗೂ ಬಿಸಿನೆಸ್ ಮಾಡಿದೆ ಎಂದು ವರದಿಗಳು ಹೇಳಿವೆ. ಇನ್ನು ಹಲವು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿತ್ತು. ಅಮೆರಿಕಾದಲ್ಲಿ ರಿಲೀಸ್ ಆದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆಯೂ ಈ ಚಿತ್ರದ ಹೆಸರಿನಲ್ಲಿದೆ. ಇನ್ನು ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಕನ್ನಡ ಸಿನಿಮಾ ಎಂದು ನ್ಯಾಷನಲ್ ಅವಾರ್ಡ್ ಮತ್ತು ಅತ್ಯುತ್ತಮ ನಟ ಅತ್ಯುತ್ತಮ ಕಥೆ ಅತ್ಯುತ್ತಮ ಸಿನಿಮಾ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ.
Advertisement