Karnataka Times
Trending Stories, Viral News, Gossips & Everything in Kannada

Salman Khan: ಇಷ್ಟು ದೊಡ್ದ ಸ್ಟಾರ್ ಆಗಿದ್ರೂ ಸಲ್ಮಾನ್ ಖಾನ್ ಮಾತ್ರ ಇನ್ನೋ ಬಂಗಲೆ ಖರೀದಿಸದೇ ಸಣ್ಣ ಫ್ಲಾಟ್ ನಲ್ಲಿಯೇ ವಾಸಿಸುತ್ತಾರೆ ಯಾಕೆ ಗೊತ್ತಾ?

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಂದು ಬಾಲಿವುಡ್ ಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಭಾರತದ ಸಿನಿಮಾದಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಗೂ ಪಾದರ್ಪಣೆ ಮಾಡಿರುವ ಸಲ್ಮಾನ್ ಖಾನ್ (Salman Khan) ಕಿಚ್ಚ ಸುದೀಪ್ (Kichcha Sudeepa) ಅವರ ಜೊತೆಗೆ ದಬಾಂಗ್ ಸಿನಿಮಾದಲ್ಲಿಯೂ ಕಮಾಲ್ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರು 1988 ರಲ್ಲಿ ಬಿವಿ ಹೋ ತೊ ಎಸಿ ಎನ್ನುವ ಸಿನಿಮಾದಲ್ಲಿ ಸೈಡ್ ರೋಲ್ ಒಂದನ್ನು ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 1989 ರಲ್ಲಿ ಸಲ್ಮಾನ್ ಖಾನ್ ಮೇಲೆ ಯಾರು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಅಲ್ಲಿಂದ ಸಲ್ಮಾನ್ ಖಾನ್ ಅವರ ಸಿನಿಮಾ ವೃತ್ತಿ ಜೀವನದಲ್ಲಿ ಏರಿಳಿತಗಳು ಇದ್ದರೂ ಕೂಡ ಅವರು ಒಬ್ಬ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯುತ್ತಮ ಸಂಭಾವನೆ ಪಡೆಯುವ ಹೀರೋಗಳಲ್ಲಿ ಒಬ್ಬರು. ಪ್ರತಿಯೊಂದು ಸಿನಿಮಾಕ್ಕಾಗಿ ಉತ್ತಮ ಹಾಗೂ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಸಲ್ಮಾನ್ ಭಾಯ್ ಮುಂಬೈನಲ್ಲಿ ಒಂದು ಕೋಣೆಯ ಫ್ಲ್ಯಾಟ್ ನಲ್ಲಿ ವಾಸಿಸುತ್ತಾರೆ ಅಂದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು. ಯಾಕೆಂದ್ರೆ ಕೋಟಿಗಟ್ಟಲೆ ಹಣ ಮಾಡುವ ಸಲ್ಮಾನ್ ಅವರಿಗೆ ಒಂದು ಬಂಗಲೆ ಖರೀದಿಸುವುದು ದೊಡ್ಡ ವಿಚಾರವೇನು ಅಲ್ಲ. ಅದಾಗಿಯೂ ಸಲ್ಮಾನ್ ಖಾನ್ ಯಾಕೆ ಇನ್ನು ಬಂಗಲೆ ಖರೀದಿಸಿ ಅದರಲ್ಲಿ ವಾಸವಾಗಿಲ್ಲ? ಇದಕ್ಕೆ ಅವರೇ ಉತ್ತರ ನೀಡಿದ್ದಾರೆ ನೋಡಿ.

Join WhatsApp
Google News
Join Telegram
Join Instagram

ವಾಹಿನಿ ಒಂದರ ಸಂವಾದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ. 2009ರಲ್ಲಿ ನಡೆದ ಸಂದರ್ಶನ ಒಂದರಲ್ಲಿ ಸಲ್ಮಾನ್ ಖಾನ್ “ಸುಮಾರು 10- 12 ವರ್ಷದ ಹಿಂದೆ ಇರಬಹುದು ನಾವು ಒಂದು ಬಂಗಲೆಯನ್ನು ನೋಡಿದ್ವಿ. ನಾನು ನನ್ನ ಅಪ್ಪ (ಸಲೀಂ ಖಾನ್) ಒಂದು ಉತ್ತಮವಾದ ಸ್ಥಳ ಸೇಲ್ ಗೆ ಇದೆ ಅದರ ಬೆಲೆ ಸುಮಾರು 22 ಕೋಟಿ ಇರಬಹುದು ಎಂದು ಹೇಳಿದೆ. ಅದಕ್ಕೆ ನಮ್ಮ ತಂದೆ ಮಾತನಾಡಿ ನೋಡು ಚೆನ್ನಾಗಿದ್ದರೆ ಅದನ್ನು ಖರೀದಿ ಮಾಡೋಣ ಎಂದಿದ್ದರು.

ನಂತರ ನನ್ನ ತಂದೆ ಆ ಬಂಗಲೆಯ ಓನರ್ ಅನ್ನು ಭೇಟಿ ಮಾಡುತ್ತಾರೆ ಅವರ ಮುಂದೆ ಕುಳಿತು ಈ ಜಾಗ ತುಂಬಾ ಚೆನ್ನಾಗಿದೆ ಸಲ್ಮಾನ್ ಗೆ ಇಷ್ಟ ಆಯ್ತು ಆದರೆ ಇದರಲ್ಲಿ ಒಂದು ಸಮಸ್ಯೆ ಇದೆ ಎಂದು ಹೇಳುತ್ತಾರೆ. ಅದಕ್ಕೆ ಆ ಮನೆಯ ಮಾಲೀಕ ಸಲೀಂ ಸಾಬ್ ನೀವು ಪರಿಹರಿಸದೆ ಇರುವಂತಹ ಸಮಸ್ಯೆಗಳು ಯಾವುದಿದೆ? ಯಾವುದೇ ಸಮಸ್ಯೆಗಾದರೂ ಮಾರ್ಗ ಇದ್ದೇ ಇರುತ್ತೆ ಅದನ್ನ ಸಾರ್ಟ್ ಔಟ್ ಮಾಡೋಣ ಎಂದು ಹೇಳುತ್ತಾರೆ.

ಮುಂದುವರಿಸಿದ ಸಲ್ಮಾನ್ “ಸರಿ ಹಾಗಾದರೆ ಇದನ್ನು ಪಕ್ಕ ಮಾಡೋಣ ಎಂದು ಅಪ್ಪ ಹೇಳುತ್ತಾರೆ ಮಾಲೀಕರು ನನ್ನ ತಂದೆಯ ಜೊತೆಗೆ ಇನ್ನೇನು ಕೈ ಕುಲುಕಲು ಮುಂದಾಗಬೇಕು ಅಷ್ಟರಲ್ಲಿ ನಿಮ್ಮ ಸಮಸ್ಯೆ ಏನು ಎಂದು ಕೇಳುತ್ತಾರೆ ಅದಕ್ಕೆ ಅಪ್ಪ ನಿಮ್ಮ ಈ ಬಂಗಲೆಯ ಬೆಲೆ 22 ಕೋಟಿ ಆದರೆ ನಮ್ಮಲ್ಲಿ 20 ಕೋಟಿ ಶಾರ್ಟೇಜ್ ಇದೆ ಎಂದು ಅಪ್ಪ ಹೇಳುತ್ತಾರೆ”. ಹೀಗೆ ಅಪ್ಪನ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, “ನಾವು ಮೊದಲು ಸಾವಿರದಲ್ಲಿ ಕಡಿಮೆ ಇದ್ದವು ನಂತರ ಲಕ್ಷಗಳು ಕಡಿಮೆ ಆದವು ಈಗ ಕೋಟಿಗಳಲ್ಲಿ ಕಡಿಮೆ ಇದ್ದೇವೆ” ಎಂದು ಹೇಳುತ್ತಾರೆ ಅಂದರೆ ನಾವು ಎಷ್ಟೇ ಬೆಳೆದರೂ ಹಣದ ಕೊರತೆ ಇದ್ದೇ ಇರುತ್ತದೆ ಎಂಬುದು ಸಲ್ಮಾನ್ ಭಾಯಿ ಅವರ ಮಾತಿನ ಅರ್ಥ.

Leave A Reply

Your email address will not be published.