Girija Lokesh: ದರ್ಶನ್ ಬಗ್ಗೆ ಮಾತಾಡಿದವರಿಗೆ ಸ್ರಜನ್ ತಾಯಿ ಗಿರಿಜಾ ಲೋಕೇಶ್ ಹೇಳಿದ್ದೇ ಬೇರೆ
ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ (Box Office Sulthan) ನಟನೆಯ ಕ್ರಾಂತಿ (Kranti) ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಇನ್ನು ನೆಗೆಟಿವ್ (Negetive) ಪ್ರಚಾರದ ನಡುವೆ ಕೂಡ ಕ್ರಾಂತಿ ಗೆದ್ದ ರೀತಿ ನಿಜಕ್ಕೂ ಕೂಡ ದರ್ಶನ್(Darshan) ಅಭಿಮಾನಿಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾ ರಸಿಕರಿಗೆ ಸಮಾಧಾನವನ್ನು ತಂದಿದೆ ಎನ್ನಬಹುದು. ಇನ್ನು ಸರಿ ಸುಮಾರು 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕವಾಗಿ ಹೊಸ ವರುಷವನ್ನು ಕನ್ನಡ ಚಿತ್ರರಂಗ ಅದ್ದೂರಿಯಾಗಿಯೇ ಪ್ರಾರಂಭಿಸಿದೆ ಎಂದು ಹೇಳಬಹುದು.
ಇನ್ನು ಕಳೆದ ತಿಂಗಳು ಕ್ರಾಂತಿ ಚಿತ್ರತಂಡ ಖಾಸಗಿ ಹೋಟೆಲ್ ವೊಂದರಲ್ಲಿ ಸೇರಿ ಸಿನಿಮಾದ ಯಶಸ್ಸಿನ (Movie Success) ಸಂಭ್ರಮಾಚರಣೆಯನ್ನು ಕೂಡ ಆಚರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸಿನಿಮಾದಲ್ಲಿ ನಟಿಸಿರುವಂತಹ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರು ಕೂಡ ಹಾಜರಿದ್ದರು. ಕ್ರಾಂತಿ ಚಿತ್ರ ತೆರೆಕಂಡ ಸಂದರ್ಭದಲ್ಲಿ ಎದುರಿಸಿದಂತಹ ನೆಗೆಟಿವ್ ಪ್ರಚಾರಗಳನ್ನು ಹಾಗೂ ಅಭಿಮಾನಿಗಳು ತೋರಿದಂತಹ ಬೆಂಬಲವನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಲಾಯಿತು.
ಇನ್ನು ಕ್ರಾಂತಿ ಚಿತ್ರದ ಹಾಡು ಬಿಡುಗಡೆ ಸಂದರ್ಭದಲ್ಲಿ ನಟ ದರ್ಶನ್ ಅವರು ಎದುರಿಸಿದಂತಹ ಅವಮಾನಗಳು ಸಹ ತಮಗೆಲ್ಲರಿಗೂ ನೆನಪಿರಬಹುದು. ಇನ್ನು ಕ್ರಾಂತಿ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ (Success Meet) ಸೃಜನ್ ಲೋಕೇಶ್ (Srujan Lokesh) ಅವರ ತಾಯಿ ಆಗಿರುವ ಗಿರಿಜಾ ಲೋಕೇಶ್ ರವರು ದರ್ಶನ್ ಅವರನ್ನು ತಮ್ಮ ದೊಡ್ಡ ಮಗ ಎಂಬುದಾಗಿ ಪ್ರೀತಿಯಿಂದ ಕರೆದಿದ್ದು ಮುಂದುವರೆದು ಮಾತನಾಡಿರುವ ಅವರ ಮಾತುಗಳು ಕೂಡ ಈಗಾಗಲೇ ಡಿ ಬಾಸ್ ಅಭಿಮಾನಿಗಳ(Dboss Fans) ಪಾಲಿಗೆ ಖುಷಿಯನ್ನು ನೀಡಿದೆ ಎನ್ನಬಹುದು.
ಇತ್ತೀಚಿಗೆ ನಡೆದಿರುವಂತಹ ನಟ ದರ್ಶನ್ ರವರ ಕುರಿತಾದ ಅಹಿತಕರ ಘಟನೆಗಳನ್ನು ನೆನಪಿಸಿಕೊಂಡಿರುವ ಹಿರಿಯ ನಟಿ ಗಿರಿಜಾ ಲೋಕೇಶ್ ರವರು ನನ್ನ ದೊಡ್ಡ ಮಗನಿಗೆ ತೊಂದರೆಯನ್ನು ನೀಡಬೇಡಿ ಎಂಬುದಾಗಿ ಹೇಳಿದ್ದಾರೆ. ಹೌದು ಮೊದಲಿನಿಂದಲೂ ಕೂಡ ತೂಗುದೀಪ (Togudeepa) ಹಾಗೂ ಲೋಕೇಶ್ (Lokesh) ಕುಟುಂಬ ಉತ್ತಮವಾದ ಸಂಬಂಧವನ್ನು ಹೊಂದಿದೆ. ಇದು ಈಗ ದರ್ಶನ್ ಮತ್ತು ಸೃಜನ್ ಲೋಕೇಶ್(Srujan Lokesh) ಅವರ ಜೊತೆಗೆ ಉತ್ತಮವಾಗಿ ಮುಂದುವರಿದುಕೊಂಡು ಬಂದಿದೆ ಎಂದು ಹೇಳಬಹುದಾಗಿದೆ. ಸದ್ಯ ಹಿರಿಯ ನಟಿ ಗಿರಿಜಾ ಲೋಕೇಶ್(Girija Lokesh) ಅವರ ಈ ಮಾತಿನ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.