ನಮ್ಮ ಕನ್ನಡ ಚಿತ್ರರಂಗದ (KFI) ಕುಚುಕುಗಳು ಎಂದರೆ ಅಂಬಿ (Ambreesh) ಹಾಗೂ ವಿಷ್ಣು (Vishnuvardhan) ಅವರು ಎಂಬ ವಿಚಾರ ತಮಗೆ ತಿಳಿದಿದೆ. ಹೌದು ಇವರಿಬ್ಬರ ಸ್ನೇಹ (Friendship) ಹಾಲಿನಂತೆ ಪವಿತ್ರವಾದದ್ದು. ಹೌದು ಸ್ನೇಹ ಎಂದರೆ ಹೇಗಿರಬೇಕು? ಸ್ನೇಹಿತರ ಜೊತೆ ಹೇಗಿರಬೇಕು? ಸ್ನೇಹ ಎಂದರೆ ಏನು? ಎಂದು ತೊರಿಸಿಕೊಟ್ಟು ಮಿಂಚಿ ಮರೆಯಾದವರು ಈ ಕಲಿಯುಗ ಕರ್ಣ(Kaliyuga Karna) ಹಾಗೂ ಅಭಿನಯ ಭಾರ್ಗವ. ಈ ದಿಗ್ಗಜ ನಟರು ಕನ್ನಡ ಚಿತ್ರರಂಗಕ್ಕೆ ಮರೆಯಾಲಾರದ ನೆನಪುಗಳು ಅಳಿಸಲಾರದ ಸಿನಿಮಾಗಳು (Movies) ಮತ್ತು ಕನ್ನಡಿಗರಲ್ಲಿ ವಿಶೇಷವಾದ ಭಾವನೆ ಮೂಡಿಸಿ ಇಹ ಲೋಕದತ್ತ ಪ್ರಯಾಣ ಮಾಡಿದ್ದಾರೆ. ಆದರೂ ಅದೆಷ್ಟೋ ಅಭಿಮಾನಿಗಳು ಈ ದಿಗ್ಗಜ ನಟರು ನಮ್ಮನ್ನು ತ್ಯಜಿಸಿ ಹೋಗಿಲ್ಲ ಪ್ರತಿಯೊಬ್ಬ ನಿಸ್ವಾರ್ಥ ಸ್ನೇಹಿತರ ಸ್ನೇಹದ ರೂಪದಲ್ಲಿ ಉಳಿದ್ದಿದ್ದಾರೆ ಎಂದೇ ನಂಬಿದ್ದಾರೆ. ಇನ್ನು ಯುಗ ಯುಗ ಕಳೆದರು ಇವರಿಬ್ಬರ ಸ್ನೇಹ ಮತ್ತು ಸಿನಿಮಾಗಳನ್ನು ಮರೆಯಲು ಹಾಗೂ ಅಳಿಸಲು ಸಾಧ್ಯವಿಲ್ಲ. ಇವರ ಸ್ನೇಹದ ರೂಪವಾಗಿ ತೆರೆಯ ಮೇಲೆ ಬಂದಿದ್ದ ಸಿನಿಮಾವೇ ದಿಗ್ಗಜರು (Diggajaru)
ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಸ್ನೇಹಕ್ಕೆ ಹೆಸರಾಗಿದ್ದ ಕುಚಿಕು ಗೆಳೆಯರು ಎಂದರೆ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಎನ್ನುತ್ತಿತ್ತು. ಹೌದು ಇವರಿಬ್ಬರ ನಡುವಿನ ಸ್ನೇಹ ಬಾಂಧವ್ಯ ಎಂಥದ್ದು ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತು. ಇವರಿಬ್ಬರು ಸ್ಯಾಂಡಲ್ ವುಡ್ ನ (Sandalwood) ಮೇರು ನಟರಾದರು ಆ ಗರ್ವ ಇಲ್ಲದೆ ಇಬ್ಬರು ಬಹಳ ಸ್ನೇಹದಿಂದ ಸರಳತೆಯಿಂದ ಇದ್ದರು. ಹೌದು ಇವರಿಬ್ಬರ ಸ್ನೇಹಕ್ಕೆ ಇಡೀ ಸ್ಯಾಂಡಲ್ ವುಡ್ ಹೆಮ್ಮೆ ಪಡುತ್ತಿತ್ತು.
ಸದ್ಯ ಇಂದು ಕುಚಿಕು ಗೆಳೆಯರು ಇಬ್ಬರು ಸ್ವರ್ಗದಲ್ಲಿ ಜೊತೆಯಾಗಿ ಸಂತೋಷವಾಗಿ ಇರಬಹುದು. ವಿಷ್ಣುವರ್ಧನ್ ಅವರು ಇದ್ದಾಗ ಒಂದು ಸಂದರ್ಶನದಲ್ಲಿ ತಮ್ಮ ಮತ್ತು ಅಂಬರೀಶ್ ಅವರ ಸ್ನೇಹದ ಬಗ್ಗೆ ಮಾತನಾಡಿದ್ದು ನನ್ನ ಮತ್ತು ಅಂಬಿ ಸ್ನೇಹದಲ್ಲಿ 30 ವರ್ಷಗಳಿಂದ ಇಂದಿನವರಿಗು ಒಂದು ಚಿಕ್ಕ ಬಿರುಕು ಕೂಡ ಮೂಡಿಲ್ಲ. ನಮ್ಮ ನಡುವೆ ಯಾವುದೇ ಮನಸ್ತಾಪ ಬಂದಿಲ್ಲ. ಇಡೀ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಇಷ್ಟು ಅನ್ಯೋನ್ಯತೆ ಮತ್ತು ಪ್ರೀತಿಯಿಂದ ಇರುವುದು ನಾನು ಮತ್ತು ಅಂಬಿ ಮಾತ್ರ ಎಂದು ವಿಷ್ಣುವರ್ಧನ್ ಅವರು ಹೇಳಿದ್ದರು.
ಇನ್ನು ಕನ್ನಡ ಚಿತ್ರರಂಗದಲ್ಲಿ ದಿಗ್ಗಜರು ಸಿನಿಮಾ ಬರುವುದಕ್ಕೂ ಮುನ್ನವೇ ಇವರಿಬ್ಬರು ಹಲವಾರು ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ ಅವೆಲ್ಲ ಒಂದು ಕಡೆಯಾದರೆ ದಿಗ್ಗಜರು ಸಿನಿಮಾ (Diggajaru Cinema) ಒಂದು ತೂಕ ಎಂದು ಹೇಳಬಹುದಾಗಿದೆ. ಹೌದು ಅಷ್ಟರ ಮಟ್ಟಿಗೆ ಇವರಿಬ್ಬರ ಸಿನಿಮಾ ಜೀವನದಲ್ಲಿ ಹಾಗೂ ಸ್ನೇಹ ಜೀವನದಲ್ಲಿ ದಿಗ್ಗಜರು ಸಿನಿಮಾ ದೊಡ್ಡ ಮಟ್ಟದ ಪ್ರಭಾವವನ್ನು ಬೀರಿದೆ. ಇನ್ನು ಇದಕ್ಕಾಗಿಯೇ ಒಂದು ವೇದಿಕೆಯ ಮೇಲೆ ದಿಗ್ಗಜರು ಸಿನಿಮಾದ ಕುರಿತಂತೆ ಒಂದು ದೊಡ್ಡ ಹೇಳಿಕೆಯನ್ನು ರೆಬೆಲ್ ಸ್ಟಾರ್ ಅಂಬರೀಶ್ ನೀಡಿದ್ದರು.
ಬೇರೆಲ್ಲ ಸಿನಿಮಾಗಳಿಗಿಂತ ದಿಗ್ಗಜರು ಸಿನಿಮಾ ನನ್ನ ಹಾಗೂ ವಿಷ್ಣುವಿನ ಸ್ನೇಹ ಸಂಬಂಧಕ್ಕೆ ಇರುವಂತಹ ಹೆಗ್ಗುರುತಾಗಿದೆ ಎಂಬುದಾಗಿ ಹೇಳಿದ್ದಾರೆ. ಹೌದು ಅಷ್ಟರ ಮಟ್ಟಿಗೆ ಇದು ಸ್ಪೆಷಲ್ ಆಗಿದ್ದು ಇದಾದ ನಂತರ ಯಾವ ಸಿನಿಮಾವನ್ನು ಕೂಡ ಒಟ್ಟಿಗೆ ಮಾಡಬೇಕೆಂದು ಅನಿಸುತ್ತಿಲ್ಲ. ಈ ಸಿನಿಮಾವೇ ನಮ್ಮ ಸ್ನೇಹಕ್ಕೆ ದೊಡ್ಡ ಗುರುತಾಗಿರಲಿ ಎಂಬುದಾಗಿ ಅಂಬರೀಶ್(Ambareesh) ಹೇಳಿದ್ದರು. ಹೌದು ಆಶ್ಚರ್ಯ ಎನ್ನುವಂತೆ ಅದಾದ ನಂತರ ಇಬ್ಬರೂ ಕೂಡ ಯಾವುದೇ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಂದಿಗೂ ವಿಷ್ಣು(Vishnu) ಹಾಗೂ ಅಂಬಿಯ ಸ್ನೇಹವನ್ನು ನೆನೆದಾಗ ಮೊದಲಿಗೆ ಪ್ರತಿಯೊಬ್ಬರಿಗೂ ನೆನಪಾಗುವುದು ದಿಗ್ಗಜರು ಸಿನಿಮಾ.