Upendra: ಹಾಲಿವುಡ್ ಡೈರೆಕ್ಟರ್ ಗಿಂತ ನೀವು ಗ್ರೇಟ್ ಎಂದಿದ್ದಕ್ಕೆ ಉಪ್ಪಿ ಕೊಟ್ಟ ಉತ್ತರ ಏನು?

Advertisement
ಈಗಂತೂ ಸಿನೆಮಾ ರಂಗದಲ್ಲಿ ಎಲ್ಲಿ ನೋಡಿದರೂ ಯಾರ ಬಾಯಲ್ಲಿ ಕೇಳಿದರು ಕಬ್ಜ ಸಿನೆಮಾದ್ದೆ ಮಾತು ಕಬ್ಜ (Kabzaa) ತೆಲುಗಿನಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರೇ ತೆರಳಿ ಬರ್ಜರಿ ಪ್ರಚಾರ ನೀಡಿದ್ದಾರೆ. ಈ ಸಂದರ್ಭ ಕೆಲವು ಪತ್ರಕರ್ತರು ಪ್ರಶ್ನೆ ಕೇಳಿದ್ದು ಸದ್ಯ ಈ ವೀಡಿಯೋ ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ಏನಂದ್ರು ಉಪ್ಪಿ?
Advertisement
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪತ್ರಕರ್ತರೊಬ್ಬರು ಸರ್ ನೀವು ತೆಲುಗಿನಲ್ಲಿ ರೀ ಎಂಟ್ರಿ ಕೊಡ್ತಿದ್ದೀರಿ ಏನನಿಸುತ್ತದೆ ಎಂದು ಕೇಳಿದ್ದಕ್ಕೆ ಸರ್ ಈ ಮಾತು ಯಾರಾದರೂ ದೊಡ್ಡ ವ್ಯಕ್ತಿಗಳಿಗೆ ಕೇಳಿದ್ದರೆ ತುಂಬಾ ಒಳ್ಳೆದಿತ್ತು ಎಂದರು. ಬಳಿಕ ಇನ್ನೊಬ್ಬ ಯೂಟ್ಯೂಬರ್ ಸರ್ ನಂಗೆ ನೀವು ತುಂಬಾ ಇಷ್ಟ, ನನ್ನ ಸಿನೆಮಾ ದೇವರು, ಇಂದು ಟೈಟಾನಿಕ್, ಅವತಾರ್ ಎಲ್ಲ ಸಿನೆಮಾ ನಿಮ್ಮ ಮುಂದೆ ಏನು ಅಲ್ಲ ಎಂದಿದ್ದಕ್ಕೆ ಸರ್ ಹಾಗೆಲ್ಲ ಹೋಲಿಸಬೇಡಿ ನಾನು ಮಾಡಿದ ಸಾಧನೆ ಏನು ಅಲ್ಲ, ಅವರೆಲ್ಲ ನಿಜಕ್ಕೂ ಗ್ರೇಟ್ ಬಿಡಿ ಎಂದರು.
ಬಳಿಕ ಪತ್ರಕರ್ತರೊಬ್ಬರು ಸರ್ ಮುಂದಿನ ದಿನದಲ್ಲಿ ಯಾವುದು ಪ್ಯಾನ್ ಇಂಡಿಯಾ ಸಿನೆಮಾ ನಿಮ್ಮ ಅಭಿನಯದಲ್ಲಿ ಮೂಡಿ ಬರುತ್ತದೆ ಎಂದು ಕೇಳಿದ್ದಕ್ಕೆ ಒಂದು ನಾಮ ಬರ್ಲಿಕ್ಕೆ ಇದೆ ಸರ್ ಅದರ ಸಿಂಬಲ್ U and I ಎಂದು ಯುಐ ಎಂದು ಬರುತ್ತದೆ. ಈ U I ಎನ್ನುವುದನ್ನು ನೀವು ಯಾವ ರೀತಿ ಸಹ ಅರ್ಥ ಮಾಡಿಕೊಳ್ಳಬಹುದು. ಅದು ನೀನು ನಾನು, ನಾವು ಹೀಗೆ ಬೇರೆ ಬೇರೆ ಅರ್ಥ ಕೊಡುತ್ತದೆ. ಅದು ಕೂಡ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬರಲಿದೆ ಎಂಬ ನಿರೀಕ್ಷೆ ಇದೆ.
ಸದ್ಯ ಕಬ್ಜ ಸಿನೆಮಾದಲ್ಲಿ ಸುದೀಪ್ (Sudeep) , ಶಿವರಾಜ್ ಕುಮಾರ್ (Shivarajkumar) ಸೇರಿದಂತೆ ಬಹುತೇಕ ತಾರಾಗಣ ಹೊಂದಿದೆ. ಈ ಮೂಲಕ ಬಹುತೇಕ ಸಿನಿ ಪ್ರಿಯರ ಮನಗೆಲ್ಲಲು ಬಹಳ ಕಸರತ್ತನ್ನು ಸಿನೆಮಾ ತಂಡ ಪ್ರಯತ್ನಿಸುತ್ತಿದೆ. ಈ ಮೂಲಕ ಸಿನೆಮಾ ಶೀಘ್ರ ಬಿಡುಗಡೆಯಾಗುತ್ತಿದೆ. ಆರ್. ಚಂದ್ರು ಜೊತೆಗೆ ಮೂರನೇ ಬಾರಿಗೆ ಉಪ್ಪಿ ಕೈಜೋಡಿಸಿದ್ದು, ಸದ್ಯದ ‘ಕಬ್ಜ’ ಟೀಸರ್ ಸಾಕಷ್ಟು ಸದ್ದು ಮಾಡುತ್ತಿದ್ದು ಎಲ್ಲರ ಕಣ್ಣು ಸದ್ಯ ಕಬ್ಜ ಸಿನೆಮಾ ಮೇಲೆ ಇದೆ ಎನ್ನಬಹುದು.
Advertisement