Anchor Anushree: ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಅನುಶ್ರೀ ಬರ್ತಾರೆ ಅನ್ನೊರಿಗೆ ನಿರೂಪಕಿ ಕೊಟ್ಟ ಉತ್ತರ ಏನು?

Advertisement
ಮಾತಿನ ಮಲ್ಲಿ ಎಂದಾಗ ಎಲ್ಲರ ಮನಸ್ಸಲ್ಲಿ ಕೆಲವೊಂದು ಹೆಸರು ನೆನಪಾಗಬಹುದು ಅಂತವದ ಸಾಲಿನಲ್ಲಿ ಆ್ಯಂಕರ್ ಅನುಶ್ರೀ (Anchor Anushree) ಕೂಡ ಸೇರಿಕೊಂಡಿದ್ದಾರೆ. ಹರಳು ಹೊಡೆದಂತೆ ಮಾತನಾಡುವ ಈ ಪೊರಿ ಮೂಲತಃ ಮಂಗಳೂರಿನವರು. ನೋಡಲು ಸ್ಫುರದ್ರೂಪಿಯಾಗಿದ್ದರು ಸಿನೆಮಾ ನಾಯಕಿಯಾಗಿದ್ದಕ್ಕಿಂತ ಹೆಚ್ಚು ಗುರುತಿಸಿಕೊಂಡದ್ದು ನಿರೂಪಣೆಯಲ್ಲಿ ಅನ್ನಬಹುದು.
ಅನುಶ್ರೀ ಅವರು ಒಳ್ಳೆ ಮಾತುಗಾರಿಕೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದು ಇದೇ ಅವರಿಗೆ ಭವಿಷ್ಯತ್ತಿನ ಭದ್ರ ಬುನಾದಿಯಾಗಿದೆ ಎಂದರೂ ತಪ್ಪಾಗಲಾರದು. ಒಂದು ಕಾಲದಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಯಾರ ಸಹಾಯವೂ ಇಲ್ಲದೇ ಸ್ವ ಪ್ರತಿಭೆಯಿಂದ ಈ ಮಟ್ಟಕ್ಕೆ ಬರುವುದೆಂದರೆ ಅದು ಸುಲಭದ ವಿಚಾರವಲ್ಲ ಎನ್ನಬಹುದು. ಅವರ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಆಕೆಗೆ ಅಮ್ಮನೆ ಎಲ್ಲವಂತೆ ಇಷ್ಟೇಲ್ಲ ಜನಮಾನ್ಯತೆ ಪಡೆದ ಅನುಶ್ರೀ ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಂದರೆ ಒಳ್ಳೆದಿತ್ತು ಎಂದು ಅವರ ಅಭಿಮಾನಿಗಳು ತಮ್ಮ ಮನದಾಸೆಯನ್ನು ತೋಡಿಕೊಳ್ಳುತ್ತಿದ್ದಾರೆ. ಹಾಗಾದರೆ ಅನುಶ್ರೀ (Anushree) ಬರುತ್ತಾರ ಈ ಬಗ್ಗೆ ಅನುಶ್ರೀ ಏನಂದಿದ್ದಾರೆ ಎಂಬ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.
Advertisement
ಚೆಂದುಳ್ಳಿ ಚೆಲುವೆ ಅನುಶ್ರೀ ಏನಂದ್ರು?
ಆಗಾಗ ಲೈವ್ ನಲ್ಲಿ ಬರುವ ಅನುಶ್ರೀ ಅವರು ಈ ಬಾರಿ ಸಹ ಬಂದಿದ್ದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ಬಗ್ಗೆ ಮಾತಾಡಿದ್ದ ಅವರು, ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮಕ್ಕೆ ಸಲೆಕ್ಟ್ಆದ್ರಂತೆ ಹೌದಾ ಅಕ್ಕ ಎಂದು ಕೇಳಿದ್ದಕ್ಕೆ ನಾನು ಓ ಮೈ ಗಾಡ್ ಇದು ಸ್ವಲ್ಪ ಜಾಸ್ತಿ ಆಯ್ತು.
ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಖುಷಿ ಪಡ್ತೇನೆ ಆದರೆ ನಾನಿನ್ನು ಆ ಮಟ್ಟಕ್ಕೆ ಸಾಧನೆ ಮಾಡಿಲ್ಲ. ಅದರಲ್ಲಿ ಬಂದವರೆಲ್ಲ ದೊಡ್ಡ ದೊಡ್ಡ ಸಾಧನೆ ಮಾಡಿದವರು. ಇನ್ನು ಮಾಡಲು ತುಂಬಾ ಕೆಲಸ ಇದೆ ಇನ್ನು ಅನೇಕ ಸೇವೆ ನಾನು ಮಾಡಲಿದೆ. ಆ ಸ್ಟೇಜ್ ಹತ್ತಲು ಸಹ ಈಗ ನಾನು ಸ್ಥಾನ ಪಡಿಲಿಲ್ಲ ಎಂದಿದ್ದಾರೆ. ಬಳಿಕ ಇನ್ನೊಬ್ಬರು ಅಕ್ಕ ಈ ಸಲ ಆರ್ ಸಿಬಿ ಗೆಲ್ಲುತ್ತಾ ಎಂದು ಕೇಳಿದ್ದಕ್ಕೆ ಎಷ್ಟು ಬಾರಿ ಸೋತಾಗಲೂ ನಾವು ಸಪೋರ್ಟ್ ಮಾಡಿದ್ದೇವೆ ಗೆಲ್ಲಿ ಸೋಲಲಿ ಆರ್ ಸಿ ಬಿ ನಮ್ಮದೆ ನಮ್ಮ ಸಪೋರ್ಟ್ ಇರೊ ತನಕವು ಆರ್ ಸಿಬಿ (RCB) ಗೆಲ್ಲುತ್ತೆ ಈ ಸಲ ಕಪ್ ನಮ್ಮದೆ ಎಂದಿದ್ದಾರೆ.
Advertisement