ಸರಿಗಮಪ ಎಂದಾಗ ಹೇಗೆ ಸಂಗೀತ ಸ್ವರಾಗಮ ಹೇಗೆ ಮುಖ್ಯವೊ ಹಾಗೇ ಆ ಕಾರ್ಯಕ್ರಮದ ನಿರೂಪಣೆ ಮಾಡುವ ಅನುಶ್ರೀ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಅನುಶ್ರೀ (Anushree) ಅವರು ಈಗ ಎಲ್ಲ ಕಾರ್ಯಕ್ರಮದಲ್ಲೂ ಹೈ ಲೈಟ್ ಆಗಿದ್ದು ಎಲ್ಲಿ ಕೇಳಿದರು ಅವರ ಮದುವೆಯದ್ದೇ ಮಾತು ಕತೆ ಎನ್ನಬಹುದು.
ಆ್ಯಂಕರ್ ಅನುಶ್ರೀ (Anchor Anushree) ಅವರು ತಮ್ಮ ಸ್ವಪ್ರತಿಭೆಯ ಮೂಲಕ ಇಂದು ಎಲ್ಲೆಡೆ ಜನ ಮಾನ್ಯತೆ ಪಡೆಯುತ್ತಿದ್ದಾರೆ. ಅದೇ ರೀತಿ ಮಕ್ಕಳಿಂದ ವಯೋವೃದ್ಧರವರೆಗೂ ಅನುಶ್ರೀ ಅವರಿಗೆ ಫ್ಯಾನ್ಸ್ ಇದ್ದಾರೆ ಎಂದರೂ ತಪ್ಪಾಗಲಾರದು. ಸರಿಗಮಪ ಜನ್ಯ ಸರ್ ಜೊತೆ ಆಗಾಗ ಕಾಲೆಳೆಯುವ ಅವರ ಮಾತಿಗೆ ನಗದೆ ಇರಲು ಸಾಧ್ಯವಿಲ್ಲ. ಹಾಗಿದ್ದರು ಅವರ ಅಭಿಮಾನಿಗಳನ್ನು ಸೇರಿದಂತೆ ಬಹುತೇಕರ ಪ್ರಶ್ನೆ ಸದ್ಯ ಒಂದೇ ಆಗಿದೆ. ಅದೇನೆಂದರೆ ಅನುಶ್ರೀ ಅವರ ಮದುವೆ ಯಾವಾಗ ಎನ್ನೊ ಪ್ರಶ್ನೆ ಆಗಿದೆ.
ಏನಂದ್ರು ಅನುಶ್ರೀ:
ಅನುಶ್ರೀ ಅವರಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲೂ ಅದೆ ಪ್ರಶ್ನೆ ಎದುರಾಗಿದ್ದು ಈ ಬಗ್ಗೆ ಸ್ವತಃ ಅನುಶ್ರೀ ಅವರೇ ಮಾತನಾಡಿದ್ದಾರೆ. ಮದುವೆ ಅನ್ನೊದು ಒಂದು ರೀತಿಯ ಬಂಧ ಇದ್ದಂತೆ ಅದು ಲೈಫ್ ಲಾಂಗ್ ಉಳಿಯುತ್ತೆ ಹಾಗಾಗಿ ನಂಗೆ ವಯಸ್ಸಾಗಿದೆ ಯಾವಾಗ ಮದುವೆ ಎಂದು ಕೇಳ್ತಾರಲ್ಲ ಅಂತ ಮದುವೆ ಆಗೋಕೆ ಆಗೊಲ್ಲ. ನಾನು ಆಯ್ಕೆ ಮಾಡೊ ವ್ಯಕ್ತಿ ನಂಗೆ ತುಂಬಾ ಇಷ್ಟ ಇರಬೇಕು. ಅವರಿಂದ ಮೋಸ ಆಗೋದನ್ನೆಲ್ಲ ನಂಗೆ ಸಹಿಸಲಾಗದು ಹಾಗಾಗಿ ಲಾಯಲ್ ಆಗಿರಬೇಕು. ಅದಕ್ಕೆಲ್ಲ ಇನ್ನು ಸಮಯ ಇದೆ ಪ್ಲೀಸ್ ನನ್ನ ಅಭಿಮಾನಿಗಳು ದಯವಿಟ್ಟು ಈ ಪ್ರಶ್ನೆ ಒಂದು ಕೇಳಬೇಡಿ. ಮದುವೆಗೂ ಮೀರಿ ಇನ್ನು ಅನೇಕ ಸಾಧನೆ ನಂಗೆ ಮಾಡಲು ಇದೆ ಅದಕ್ಕೆಲ್ಲ ಅವಕಾಶ ಮಾಡಿ ಕೊಡಿ. ನಂಗೆ ಮದುವೆ ಆಗೋ ಕಾಲಕ್ಕೆ ನನ್ನ ಸ್ವಾಮಿ ಕೊರಗಜ್ಜ ಖಂಡಿತಾ ಒಳ್ಳೆ ಹುಡ್ಗನನ್ನ ಕರುಣಿಸ್ತಾನೆ ಎಂದು ಹೇಳಿಕೊಂಡಿದ್ದಾರೆ.
ಅನುಶ್ರೀ ಅವರು ಕುಣಿಯೋಣ ಬಾರ, ಡಿಕೆಡಿ, ಚಿನ್ನದ ಬೇಟೆ, ಸರಿಗಮಪ ಇನ್ನು ಅನೇಕ ಶೂ ನ ನಿರೂಪಕಿಯಾಗಿದ್ದಾರೆ ಮಾತ್ರವಲ್ಲದೆ ರಾಜಕೀಯ, ಸಿನೆಮಾ ಇನ್ನು ಅನೇಕ ರಂಗದ ಹೊರಾಂಗಣ ಮೈದಾನಕ್ಕೂ ನಿರೂಪಣೆ ಮಾಡಿ ಸೈ ಎನಿಸಿದ್ದಾರೆ . ಅನುಶ್ರೀ ಅವರು ಯಾರನ್ನ ಮದುವೆಯಾದ್ರೆ ಚೆನ್ನಾಗಿರುತ್ತೆ ಎಂದು ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.