ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ’ಕಬ್ಜ’ (Kabza) ಇನ್ನೇನು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ದಿಗ್ಗಜ ನಟರಾದ ರಿಯಲ್ ಸ್ಟಾರ್ ಉಪೇಂದ್ರ (Real star upendra) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(kiccha sudeep) ಇಬ್ಬರೂ ಅಭಿನಯಿಸಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಬಹಳ ಹಿಂದಿನ ಕಾಲದ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ನಿರ್ಮಾಣ ಮಾಡಲಾಗಿದ್ದು ಕಿಚ್ಚ ಸುದೀಪ್ ಅವರು ಪೊಲೀಸ್ ರೋಲ್ ನಿಭಾಯಿಸಿದ್ದಾರೆ. ಕಜ್ಬ ಸಿನಿಮಾ ಈ ವಾರ ರಿಲೀಸ್ ಆಗಲಿದೆ. ಮಾರ್ಚ್ 17ರಂದು ರಾಜ್ಯಾದ್ಯಂತ ಥಿಯೇಟರ್ (Theater)ಗಳಲ್ಲಿ ಕಬ್ಜ ಸಿನಿಮಾವನ್ನು ನೋಡಬಹುದು.

ನಿನ್ನೆಯಷ್ಟೇ ಕಬ್ಜ ಸಿನಿಮಾದ ಪ್ರೀ- ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅವರ ನಡುವಿನ ಸಂಭಾಷಣೆ ಈ ಕಾರ್ಯಕ್ರಮದ ರಂಗನ್ನು ಹೆಚ್ಚಿಸಿತ್ತು. ವಿಕ್ರಾಂತ್ ರೋಣ (Vikrant Rona) ಸಿನಿಮಾದ ಬಳಿಕ ಸುದೀಪ್ ಅವರು ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಬ್ಜ ಪಾರ್ಟ್ 2 ಸಿನಿಮಾ ಮಾಡುವ ಸಾಧ್ಯತೆಯೂ ಇದೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಲೀಡ್ ಪಾತ್ರ ಮಾಡಿದ್ದಾರೆ. ಇನ್ನು ಕಬ್ಜ2 ಬಂದ್ರೆ ಈ ಸಿನಿಮಾದಲ್ಲಿ ಸುದೀಪ್ ಅವರೇ ಮುಖ್ಯ ಭೂಮಿಯಲ್ಲಿ ಕಾಣಿಸಿಕೊಳ್ಳಬೇಕು ಎಂದು ಉಪೇಂದ್ರ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.

’ಕಬ್ಜ ಸಿನಿಮಾ ಸೆಟ್ಟೇರಿ ಬಹಳ ದಿನ ಆಗಿತ್ತು ಅದರ ಅದ್ದೂರಿ ಮೇಕಿಂಗ್ ಗೆ ನಿರ್ದೇಶಕ ಆರ್ ಚಂದ್ರು ಹೆಚ್ಚು ಶ್ರಮ ಹಾಗೂ ಸಮಯ ತೆಗೆದುಕೊಂಡಿದ್ದಾರೆ. ಕಬ್ಜ-2 ಚಿತ್ರದಲ್ಲಿ ನನಗೆ ಅತಿಥಿಪಾತ್ರ ಕೊಟ್ಟು ಸುದೀಪ್ ಅವರೇ ಮುಖ್ಯ ಭೂಮಿಗೆ ಕಾಣಿಸಿಕೊಳ್ಳಬೇಕು’ ಎಂದು ಉಪೇಂದ್ರ ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್, ’ನಿರ್ದೇಶಕ ಆರ್ ಚಂದ್ರು ಅವರು ಈ ಸಿನಿಮಾ ಮಾಡೋದಕ್ಕೆ ನಾಲ್ಕು ವರ್ಷ ಮಾಡ್ತಾರೆ ಅಂತ ಉಪೇಂದ್ರ ಅವರಿಗೆ ಗೊತ್ತು ಹಾಗಾಗಿ ಎರಡನೇ ಪಾರ್ಟ್ ನ ಜವಾಬ್ದಾರಿ ನನಗೆ ವಹಿಸಿಬಿಟ್ರು’ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಉಪೇಂದ್ರ ’ಇವರು ಮತ್ತೆ ಇನ್ನೇನು ಐದು ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರೆ ಅಲ್ಲಿಗೆ ಸರಿ ಹೋಗುತ್ತೆ’ ಅಂತ ಕಿಚ್ಚ ಸುದೀಪ್ ಅವರ ಕಾಲು ಎಳೆದರು. ಸುದೀಪ್ ಕೂಡ ಸುಮ್ಮನೆ ಬಿಟ್ಟಿಲ್ಲ ’5 ವರ್ಷಕ್ಕೆ ಒಂದು ಸಿನಿಮಾ ಮಾಡೋದಕ್ಕೂ ಒಂದು ಸಿನಿಮಾದಲ್ಲಿ ಐದು ವರ್ಷ ಇರುವುದಕ್ಕೂ ವ್ಯತ್ಯಾಸ ಇದೆ’ ಎಂದು ಹೇಳುತ್ತಾರೆ. ’ನೀವು ಈ ರೀತಿಯ ಪ್ರಾಜೆಕ್ಟ್ (Project) ಒಪ್ಪಿಕೊಂಡ್ರೆ ಕ್ರಿಕೆಟ್ ಆಡುತ್ತಾ ಹಾಯಾಗಿ ಶೂಟಿಂಗ್ ಮಾಡಿಕೊಂಡು ಇರಬಹುದು’ ಎಂದು ಉಪ್ಪಿ, ಮತ್ತೆ ಸಜೆಶನ್ ನೀಡುತ್ತಾರೆ.
ಒಟ್ಟಿನಲ್ಲಿ ಕಬ್ಜ ಸಿನಿಮಾದ ಪ್ರಿ- ರಿಲೀಸ್ ( Release) ಕಾರ್ಯಕ್ರಮದ ಮೂಲಕ ಕಬ್ಜ- 2 ಕೂಡ ಬರುತ್ತದೆ ಎಂಬುದು ಅಭಿಮಾನಿಗಳಿಗೆ ಖುಷಿ ನೀಡಿದೆ. ವೇದಿಕೆಯ ಮೇಲೆ ಹೀಗೆ ಇಬ್ಬರು ನಟರು ನಡೆಸಿರುವ ಸಂಭಾಷಣೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತ್ತು. ಈ ಸಂದರ್ಭದಲ್ಲಿ ಡಾಲಿ ಧನಂಜಯ್, ನೆನಪಿರಲಿ ಪ್ರೇಮ್, ಕೆಪಿ ಶ್ರೀಕಾಂತ್ ಮೊದಲದವರು ಉಪಸ್ಥಿತರಿದ್ದರು. ಇನ್ನು ಕಬ್ಜ ಚಿತ್ರಕ್ಕಾಗಿ ಸುದೀಪ ಅವರಿಗೆ ಒಳ್ಳೆ ಸಂಭಾವನೆ ನೀಡಲಾಗಿದೆ ಎನ್ನುವ ಮಾಹಿತಿ ಇತ್ತು. ಇದರ ಬಗ್ಗೆ ಸುದೀಪ್ ವೇದಿಕೆಯ ಮೇಲೆ ಮಾತನಾಡಿದ್ದು ವೃತ್ತಿ ಜೀವನದಲ್ಲಿ ಆಗಾಗ ಕಬ್ಜದಂತಹ ಸಿನಿಮಾ ಬರ್ತಾ ಇರಬೇಕು. ಪಾತ್ರ ಸಣ್ಣದಾಗಿದ್ರು ಪೇಮೆಂಟ್ (Payment) ಚೆನ್ನಾಗಿ ಕೊಡುತ್ತಾರೆ ಎಂದು ಹೇಳಿದರು. ಒಟ್ಟಿನಲ್ಲಿ ಕಬ್ಜ ಎಷ್ಟರಮಟ್ಟಿಗೆ ಯಶಸ್ಸು ಸಿಗುತ್ತೆ ಎನ್ನುವ ಪ್ರಶ್ನೆಗೆ ಮಾರ್ಚ್ 17ರ ವರೆಗೂ ಕಾಯಬೇಕು