ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ಉತ್ತಮ ಸಿನಿಮಾಗಳು ತೆರೆಗೆ ಬರುತ್ತಿವೆ. ಒಂದಕ್ಕಿಂತ ಒಂದು ಸಿನಿಮಾಗಳು ಸಾಧನೆಯತ್ತ, ದಾಖಲೆ ನಿರ್ಮಿಸುವತ್ತ ಮುನ್ನುಗುತ್ತಿವೆ. ಸದ್ಯ ಇದೇ ತಿಂಗಳ 17ಕ್ಕೆ ರಿಲೀಸ್ ಆಗಲಿರುವ ಕಬ್ಜ ಸಿನಿಮಾ ಕೂಡ ನಿಟ್ಟಿನಲ್ಲಿ ಸಾಗಿದೆ. ನಿನ್ನೆಯಷ್ಟೇ ಕಬ್ಜ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿತ್ತು.
ಕಬ್ಜ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ನಲ್ಲಿ ಕನ್ನಡ ಚಿತ್ರರಂಗದ ಹಲವಾರು ಗಣ್ಯ ವ್ಯಕ್ತಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಬ್ಜ ಸಿನಿಮಾದಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡಿರುವ ಕಿಚ್ಚ ಸುದೀಪ್ (Kiccha Sudeep) ಹಾಗೂ ರಿಯಲ್ ಸ್ಟಾರ್ ಉಪೇಂದ್ರ (Upendra) ಇಬ್ಬರ ಸಂಭಾಷಣೆ ಅಭಿಮಾನಿಗಳಿಗೆ ಕಚಗುಳಿ ಇಟ್ಟಿತ್ತು. ಇನ್ನು ಈ ಸಂದರ್ಭದಲ್ಲಿ ನಿರ್ಮಾಪಕ ಕೆಪಿ ಶ್ರೀಕಾಂತ್ (KP Srikanth), ನಿರ್ದೇಶಕ ಆರ್ ಚಂದ್ರು (R Chandru), ಡಾಲಿ ಧನಂಜಯ್ (Dhananjaya) ನೆನಪಿರಲಿ ಪ್ರೇಮ್ ಮೊದಲಾದವರು ವೇದಿಕೆಯ ಮೇಲೆ ಇದ್ದರು.
ಇನ್ನು ಕಬ್ಜ ಸಿನಿಮಾದ ರಿಲೀಸಿಂಗ್ ಡೇಟ್ ರಿವಿಲ್ ಮಾಡುವುದರ ಜೊತೆಗೆ ಕಬ್ಜ ಸಿನಿಮಾದ ಸಿಕ್ವೇಲ್ ಕೂಡ ಬರಲಿದೆ ಎಂಬುದನ್ನು ಉಪೇಂದ್ರ ಬಹಿರಂಗಪಡಿಸಿದ್ದಾರೆ. ಮುಂಬರುವ ಕಬ್ಜ 2 ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಬೇಕು ನನಗೆ ಗೆಸ್ಟ್ ರೋಲ್ ಕೊಟ್ಟರೆ ಸಾಕು ಅಂತ ಉಪೇಂದ್ರ ಅವರು ಹೇಳಿದ್ದಾರೆ.
ಇನ್ನು ಸಿನಿಮಾ ನಟ ನಟಿಯರು ವೇದಿಕೆಯ ಮೇಲೆ ಬಂದರೆ ಅವರ ಬಳಿ ಒಂದು ಸ್ಟೆಪ್ಸ್ ಹಾಕಿಸುವುದು ಸಹಜ. ಅದೇ ರೀತಿ ಕಬ್ಜ ಸಿನಿಮಾ ಪ್ರಿ ರಿಲೀಸ್ ವೇಳೆ ನಿರೂಪಕಿ, ಕಿಚ್ಚ ಸುದೀಪ್ ಅವರ ಬಳಿ ನೃತ್ಯ ಮಾಡುವಂತೆ ಹೇಳಿದ್ದರು. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ ನಾನು ನನ್ನ ಸಿನಿಮಾದಲ್ಲಿ ಡ್ಯಾನ್ಸ್ ಮಾಡಲ್ಲ ಅಂದಮೇಲೆ ಇವರ ಸಿನಿಮಾಕ್ಕೆ ಯಾಕೆ ಮಾಡ್ಲಿ ಎಂದು ತಮಾಷೆಯಾಗಿಯೇ ಉತ್ತರಿಸಿದರು. ಸದ್ಯ ಕಬ್ಜ್ ಸಿನಿಮಾದ ರಿಲೀಸ್ ಗೆ ಕೇವಲ ಎರಡು ದಿನ ಬಾಕಿ ಇದೆ. ಈ ಸಿನಿಮಾದ ಸಕ್ಸೆಸ್ ನೋಡೋದಕ್ಕೆ ಸ್ಯಾಂಡಲ್ವುಡ್ ಮಾತ್ರವಲ್ಲದೇ ಇಡೀ ಕರುನಾಡ ಜನತೆ ಕಾಯುತ್ತಿದ್ದಾರೆ.