ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರಗಳಿಲ್ಲ ಎಂಬ ಮಾತು ಡಾ ರಾಜಕುಮಾರ್ (Dr. Rajkumar) ರವರ ಪಾಲಿಗೆ ಬಹಳ ಸೂಕ್ತ ಎನ್ನಬಹುದು. ಹೌದು ಪೌರಾಣಿಕ (Legendary) ಐತಿಹಾಸಿಕ (Historical) ಸಾಮಾಜಿಕ (Social) ಬಾಂಡ್(Bond) ಅಂಥ ಪಾತ್ರಗಳನ್ನು ನಿರ್ವಹಿಸಿರುವ ರಾಜ್ ಕುಮಾರ್ ರವರು ಕನ್ನಡ ಚಿತ್ರರಂಗಕ್ಕೆ (Kannada Filim Industry) ನಿಜವಾದ ನಟ ಸಾರ್ವಭೌಮ ಎನ್ನಬಹುದು.
ನನಗೆ ಇಂತಹದ್ದೇ ಸಿನಿಮಾ ಮಾಡಬೇಕು ಇಂತಹದ್ದೇ ಪಾತ್ರ ಮಾಡಬೇಕು ಎಂಬ ಯಾವುದೇ ಆಸೆ ಇರಲಿಲ್ಲ ಚಿತ್ರರಂಗದವರು ಇದನ್ನು ಮಾಡಿ ಚೆನ್ನಾಗಿರುತ್ತೇ ಅನ್ನುತ್ತಿದ್ದರು. ನಾನು ಮಾಡ್ತಿದ್ದೆ ಅದನ್ನು ನೀವು ಇಷ್ಟ ಪಡ್ತಿದ್ರಿ ಎಂದು ರಾಜ್ ಕುಮಾರ್ ಅವರೇ ಅನೇಕ ವೇದಿಕೆಗಳಲ್ಲಿ ಹೇಳಿದ್ದರು. ಹೌದು ಆದರೆ ಅಣ್ಣಾವ್ರಿಂದ ಈ ಸಿನಿಮಾ ಮಾಡಿಸಬೇಕು ಎಂದು ಕೈಬಿಟ್ಟಿರುವ ಅನೇಕ ಪ್ರಾಜೆಕ್ಟ್‌ಗಳೂ ಕೂಡ ಇವೆ. ಅದರಲ್ಲಿ ಒಂದು ಕುಮಾರರಾಮನ (Kumararaama) ಕಥೆ. ಹೌದು ಕಂಪ್ಲಿ ರಾಜ್ಯದ ರಾಜಕುಮಾರನಾದ ಕುಮಾರರಾಮನ ಕಥೆಯನ್ನು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿ ಎಲ್ಲ ತಯಾರಿ ಕೂಡ ನಡೆದಿತ್ತು. ಪೂಜೆಯೂ ಕೂಡ ಆಗಿತ್ತು. ಆಮೇಲೆ ಕೆಲವು ಕಾರಣಗಳಿಂದ ಬೇಡ ಎಂದು ನಿಲ್ಲಿಸಲಾಯಿತಂತೆ.
ಇದಕ್ಜೆ ಕಾರಣ ಕೂಡ ಇದೆ. ಚಿಕ್ಕಮ್ಮನೇ ಮಗನನ್ನು ಪ್ರೀತಿಸುವ ವ್ಯಾಮೋಹಿಸುವ ಸನ್ನಿವೇಶಗಳು ಈ ಚಿತ್ರದಲ್ಲಿದ್ದು ಕುಮಾರರಾಮ ಮತ್ತು ರತ್ನಾಜಿ ಪ್ರೀತಿಸುತ್ತಾರೆ. ಆದರೆ ಕುಮಾರರಾಮನ ತಂದೆ ರತ್ನಾಜಿಯನ್ನು ಮದುವೆ ಆಗಿಬಿಟ್ಟಿದ್ದು ಈ ಮದುವೆ ಬಳಿಕ ವರಸೆಯಲ್ಲಿ ಕುಮಾರರಾಮ ರತ್ನಾಜಿಗೆ ಮಗ ಆಗುತ್ತಾನೆ. ಇನ್ನು ಪರನಾರಿ ಸಹೋದರನೆಂಬ ಖ್ಯಾತಿ ಹೊಂದಿದ್ದ ಕುಮಾರರಾಮ ರತ್ನಾಜಿಯನ್ನು ಚಿಕ್ಕಮ್ಮನಂತೆ ಕಾಣುತ್ತಾನೆ. ಇನ್ನು ಮದುವೆ ನಂತರವೂ ರತ್ನಾಜಿ ಕುಮಾರರಾಮನನ್ನು ಪೀಡಿಸುತ್ತಾಳೆ.
ಇನ್ನು ಚಿಕ್ಕಮ್ಮನನ್ನು ಪ್ರೀತಿಸುವ ಕುಮಾರರಾಮನ ಪಾತ್ರದಲ್ಲಿ ರಾಜ್ ಕುಮಾರ್ ರವರನ್ನು ನೋಡಲು ಅಭಿಮಾನಿಗಳು ಒಪ್ಪುತ್ತಾರೆಯೇ ಎಂಬ ಚರ್ಚೆಯೊಂದು ಎದುರಾಯಿತು. ಹೌದು ಅಣ್ಣಾವ್ರು ಸಕಾರಾತ್ಮಕವಾಗಿ ನೋಡಿಯೇ ಹೆಚ್ಚು ಇಷ್ಟಪಡ್ತಿದ್ದವರು ಇಂತಹ ಪಾತ್ರ ಹೇಗೆ ಸ್ವೀಕರಿಸಬಹುದು ಎಂಬ ಆತಂಕ ಕಾಡಿದ್ದು ಇದರಿಂದಾಗಿ ಅಭಿಮಾನಿಗಳು ತಿರುಗಿಬೀಳಬಹುದೇ ಎಂಬ ಆಲೋಚನೆಯಿಂದ ಈ ಸಿನಿಮಾವನ್ನ ಕೈಬಿಡಬೇಕಾಯಿತು ಎನ್ನಲಾಗಿದೆ.
ಇನ್ನು ಒಂದು ಕಡೆ ಚಿಕ್ಕಮ್ಮನ ಪ್ರೀತಿಸುವ ಪಾತ್ರದಲ್ಲಿ ರಾಜ್ ಕುಮಾರ್ ಮತ್ತೊಂದೆಡೆ ಹಿಂದೂ-ಮುಸ್ಲಿಂ ನಡುವೆ ವಿವಾದಕ್ಕೆ ಕಾರಣವಾಗಬಹುದು ಎಂಬ ಅಂಶವೂ ಕೂಡ ಕಥೆಯಲ್ಲಿತ್ತು. ಹೌದು ದೆಹಲಿ ಸುಲ್ತಾನ ಮತ್ತು ಕುಮಾರರಾಮನ ನಡುವಿನ ಸನ್ನಿವೇಶಗಳಲ್ಲಿ ಸುಲ್ತಾನರಿಗೆ ಅಗೌರವ ತೋರಿಸುವ ದೃಶ್ಯಗಳಿದ್ದು ಆ ಸಮಯಕ್ಕೆ ಅದು ಸೂಕ್ಷ್ಮವಾಗಿತ್ತು. ಈ ಕಾರಣಗಳಿಂದ ಕುಮಾರರಾಮ ಆ ಸಮಯದಲ್ಲಿ ಸಕ್ಸಸ್ ಆಗಲಿಲ್ಲ ಹಲವರು ಹೇಳುತ್ತಾರೆ. ಇನ್ನು 2006ರಲ್ಲಿ ಅದೇ ಕಥೆಯನ್ನು ರಾಜ್ ಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ (Shiva Rajkumar) ಮಾಡಿದರು. ಗಂಡುಗಲಿ ಕುಮಾರರಾಮ ಎಂಬ ಹೆಸರಿನಲ್ಲಿ ಈ ಸಿನಿಮಾ ತಯಾರಾಗಿ ಬಿಡುಗಡೆ ಆಯಿತು. ಕುಮಾರರಾಮನ ಪಾತ್ರದಲ್ಲಿ ಶಿವಣ್ಣ ನಟಿಸಿ ಸೈ ಎನಿಸಿಕೊಂಡರು. ಆದ್ರೆ, ಸಿನಿಮಾ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ.