Niveditha Gowda: ಚಂದನ್ ನ ಮದುವೆಯಾಗಲು ನಿಜವಾದ ಕಾರಣ ಕೊಟ್ಟ ನಿವೇದಿತಾ ಗೌಡ

Advertisement
ಬಿಗ್ ಬಾಸ್ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ನಟಿ, ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲು ಸುದ್ದಿಯಾಲ್ಲಿರುವ ನಟಿ, ಇತ್ತೀಚೆಗೆ ಯುಟ್ಯುಬ್ ಚಾನೆಲ್ ಮಾಡಿ ತಮ್ಮ ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಹೇಳಿಕೊಳ್ಳುತ್ತಾರೆ, ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿ (Gicchi Giligili) ಯಲ್ಲಿ ಈಗ ಫೇಮಸ್ಸಾಗಿದ್ದಾರೆ, ಚಂದನ್ ಶೆಟ್ಟಿ (Chandan Sheety) ಕೂಡ ಈಗ ಸಿಕ್ಕಾಪಟ್ಟೆ ಬ್ಯುಸಿ ಯಾವಾಗಲೂ ಹೊಸದಾಗಿ ಏನಾದರೂ ಮಾಡಲು ಪ್ರಯತ್ನ ಮಾಡುತ್ತಲೇ ಇರುವ ಈ ಜೋಡಿ ಕರ್ನಾಟಕದ ಕಿರುತೆರೆಯಲ್ಲಿ ತುಂಬಾ ಫೇಮಸ್ ಆಗಿದ್ದಾರೆ, ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಚಂದನ್ ಶೆಟ್ಟಿ ಅವರು ಜಡ್ಜ್ ಆಗಿ ಮತ್ತು ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ.
ಫ್ರೀಡಂ ಸಿಗಲಿ ಅಂತಾ ಮದುವೆಯಾದೆ ಎಂದ ನಿವೇದಿತಾ:
ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ನಟಿ ನಿವೇದಿತಾ ಗೌಡ ಅವರನ್ನು ಅವರ ತಾಯಿ ಮಗಳನ್ನು ಹೊರಗಡೆ ಕಳುಹಿಸುತ್ತಿರಲಿಲ್ಲ, ಕಳುಹಿಸಿದರೆ ಯಾರಾದರೂ ಎತ್ತುಕೊಂಡು ಹೋಗಬಹುದು ಎನ್ನುವ ಭಯದಿಂದ ಆಚೆ ಕಳುಹಿಸುತ್ತಿರಲಿಲ್ಲ ಎಂದು ನಿವೇದಿತಾ ಹೇಳಿಕೊಂಡಿದ್ದಾರೆ, ಎಲ್ಲಿಗಾದರೂ ಟ್ರಿಪ್ ಹೋಗಬೇಕು ಅಮ್ಮನ್ನ ಕೇಳಬೇಕು, ಅವರ ಬಳಿ ಕೇಳಿದಾಗ ನೀನು ಮದುವೆ ಆದ ಮೇಲೆ ಗಂಡನ ಜೊತೆಗೆ ಹೋಗು ಎಂದು ಹೇಳುತ್ತಿದ್ದರು. ಹಾಗಾಗಿ ಫ್ರೀಡಂ ಬೇಕು ಅಂತ ಮದುವೆಯಾದೆ. ಆದರೆ ತಂದೆ ತಾಯಿಯ ಮೌಲ್ಯ ನನಗೆ ಅರ್ಥ ವಾಗಿದೆ, ಅವರನ್ನು ಬಿಟ್ಟು ಇರಲು ಕಷ್ಟವಾಗುತ್ತಿದೆ ಅಂದಿದ್ದಾರೆ.
Advertisement
ತಾಯಿಯನ್ನ ಹೊಗಳಿದ Niveditha Gowda:
ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಅದರಲ್ಲಿ ನಿವೇದಿತಾ ಗೌಡ ತನ್ನ ತಾಯಿಯ ಜೊತೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ತಾಯಿಯ ಬಗ್ಗೆ ಮಾತನಾಡಿದ ನಿವಿ ನನಗೆ ತಾಯಿ ಅಂದ್ರೆ ತುಂಬಾನೇ ಇಷ್ಟ. ಅವರು ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದಾರೆ, ಇಷ್ಟೇ ಅಲ್ಲದೆ ಚಂದನ್ ಹಾಗೂ ನಿವೇದಿತಾ ಅವರ ಎರಡು ಕುಟುಂಬದವರಿಂದ ನಿವೇದಿತಾ ಅವರ ಎಲ್ಲಾ ಕೆಲಸಗಳಿಗೂ ಸಪೋರ್ಟ್ ಇದೆ, ಅದರಲ್ಲೂ ನಿವೇದಿತಾ ಅವರ ಅಮ್ಮನೇ ಅವರನ್ನು ಯಾವಾಗಲು ಆಕ್ಟಿವ್ ಆಗಿರುವಂತೆ ಮಾಡುತ್ತಾರಂತೆ ಎಂದಿದ್ದಾರೆ.
ಯುಟ್ಯುಬ್ ಚಾನೆಲ್ ಆರಂಭಿಸಿದ ನಿವೀ:
ನಿವೇದಿತಾ ಯುಟ್ಯೂಬ್ ಚಾನೆಲ್ ನಡೆಸಿದ್ದಾರೆ, ಇದರ ಮೂಲಕ ಇಷ್ಟೊಂದು ನನಗೆ ಉತ್ತಮವಾದ ಪ್ರೀತಿ ಹಾಗೂ ಇಷ್ಟೊಂದು ಪ್ರೋತ್ಸಾಹ ಸಿಗುತ್ತದೆ ಎಂದು ಭಾವಿಸೇ ಇರಲಿಲ್ಲ. ಮದುವೆಯ ನಂತರ ಕಿರುತೆರೆಯ ಕೆಲವು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ನಟಿ ನಿವೇದಿತಾ ಗೌಡ ಅವರು ಕಳೆದ ತಿಂಗಳು ಮಿಸಸ್ ಇಂಡಿಯಾ ವಿನ್ ಆಗುವುದರ ಮೂಲಕ ಇನ್ನಷ್ಟು ಫೇಮ್ ಕ್ರಿಯೆಟ್ ಮಾಡಿಕೊಂಡಿದ್ದಾರೆ.
Advertisement