R Chandru: ಅಪ್ಪು ಸರ್ ಕಬ್ಜ ಚಿತ್ರದ ಬಗ್ಗೆ ಏನು ಹೇಳಿದ್ದರು ಎಂದು ತಿಳಿಸಿದ ಆರ್ ಚಂದ್ರು.

Advertisement
ಆರ್. ಚಂದ್ರು (R Chandru) ನಿರ್ದೇಶನದಲ್ಲಿ ಉಪೇಂದ್ರ (Upendra) ಹಾಗೂ ಸುದೀಪ್ (Sudeep) ಅಭಿನಯಿಸಿರುವ ಬಹುನಿರೀಕ್ಷಿತ ಕಬ್ಜ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಇದೆ. ಈಗಾಗಲೇ ಸಖತ್ ಸುದ್ದಿ ಯಲ್ಲಿದೆ ಈ ಚಿತ್ರ, ಚಿತ್ರದ ರಿಲೀಸ್ ಗೆ ಸಿನಿಪ್ರೀಯರು ಮೋಸ್ಟ್ ಥ್ರಿಲ್ ಆಗಿದ್ದಾರೆ, ಕನ್ನಡದ ಅನೇಕ ಸಿನಿಮಾಗಳು ಈಗ ದೊಡ್ಡಮಟ್ಟದಲ್ಲಿ ಸದ್ದು ಮಾಡಿವೆ, ಅದರಲ್ಲೂ ಕಬ್ಜದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ, ಚಿತ್ರದಲ್ಲಿ ಉಪೇಂದ್ರ (Upendra) ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಕಬ್ಜ ಬಗ್ಗೆ ಅಪ್ಪು ಹೇಳಿದ್ದೇನು?
ಅಪ್ಪು ಹುಟ್ಟುಹಬ್ಬದ ದಿನವೇ ಕಬ್ಜ ರಿಲೀಸ್ ಆಗುತ್ತಿದೆ, ಈ ವಿಶೇಷ ದಿನದಂದು ಕಬ್ಜ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕಬ್ಜ ಚಿತ್ರದ ಪೋಸ್ಟರ್ ನೋಡಿ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಲ್ ಮಾಡಿ ಮಸ್ತ್ ಮಾಡಿದ್ದಿರಾ ಎಂದು ಹೊಗಳಿದ್ದರು ಎಂದು ಚಂದ್ರು ವೇದಿಕೆ ಮೇಲೆ ಹೇಳಿದ್ದಾರೆ, ಜೊತೆಗೆ ಶೂಟಿಂಗ್ ಸೆಟ್‌ಗೆ ಕೂಡಾ ಭೇಟಿ ನೀಡಿದ್ದರು. ಚಿತ್ರದ ಕೆಲವೊಂದು ತುಣುಕುಗಳನ್ನು ನೋಡಿ ಹಾಲಿವುಡ್ ಸಿನಿಮಾದಂತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ , ಚಿತ್ರಕ್ಕೆ ಬೆಂಬಲ ನೀಡುವುದಾಗಿ ಕೂಡಾ ಅಪ್ಪು ಹೇಳಿದ್ದರು. ಪುನೀತ್ ಹುಟ್ಟುಹಬ್ಬದಂದು ನಾವು ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ನಿರ್ದೇಶಕ ಆರ್. ಚಂದ್ರು ಹೇಳಿದ್ದಾರೆ
Advertisement
ಮುವರು ಸ್ಟಾರ್ ನಟರ ಪ್ರೋತ್ಸಾಹ ಇತ್ತು:
ಬರೀ ಬೆಂಗಳೂರಿನಲ್ಲಷ್ಟೇ ಅಲ್ಲ, ದೂರದ ಮುಂಬೈನಲ್ಲೂ ಕಬ್ಜ ಆರ್ಭಟ ಜೋರಾಗಿದೆ, ಕಬ್ಜದಲ್ಲಿ ನಟ ಶಿವರಾಜ್ ಕುಮಾರ್ (Shiva Rajkumar) ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್, ಆ್ಯಕ್ಟ್ ಮಾಡುತ್ತಿದ್ದಾರೆ, ಕಬ್ಜ ಸಿನಿಮಾದಲ್ಲಿ ಮೂವರ ರೋಲ್ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದೆ. ಈ ಮೂರು ನಟರ ಪ್ರೋತ್ಸಾಹ ಇತ್ತು ಎಂದು ಆರ್ ಚಂದ್ರು ಹೇಳಿದ್ದಾರೆ.
ಈ ಚಿತ್ರ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಮಾರ್ಚ್ 17ಕ್ಕೆ ಕಬ್ಜ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ ಭರ್ಜರಿ ಪ್ರಚಾರ ಕೂಡ ನಡೆಯುತ್ತಿದೆ. ಚಿತ್ರದ ಪಾತ್ರಗಳು, ಗ್ರಾಫಿಕ್ಸ್, ಮೇಕಿಂಗ್ ಎಲ್ಲವೂ ಅದ್ಭುತವಾಗಿದೆ ಎನ್ನಬಹುದು.
Advertisement