ಎಸ್ ಎಸ್ ರಾಜ ಮೌಳಿ (S. S. Rajamouli) ನಿರ್ಮಾಣದ ಆರ್ ಆರ್ ಆರ್ (RRR) ಸಿನಿಮಾದ ಹಾಡಿಗೆ ಮೂಲ ಗೀತೆ ಆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದ್ದು ದೇಶವೇ ಈ ಸಾಧನೆಯನ್ನೂ ಸಂಭ್ರಮಿಸುತಿದೆ. ಹಲವು ಸೆಲೆಬ್ರಿಟಿ ನಟ ನಟಿಯರು ಕ್ರಿಕೆಟಿಗರು ಈ ಸಾಧನೆಯನ್ನು ಕೊಂಡಾಡಿದ್ದಾರೆ ಜೊತೆಗೆ ಇದಕ್ಕೆ ಸಂಬಂಧಪಟ್ಟ ಹಾಗೆ ತಮ್ಮ ಅಭಿಪ್ರಾಯಗಳನ್ನು ಸೂಚಿಸಿದ್ದಾರೆ. ನಾಟು ನಾಟು ಹಾಡು ಆರ್ ಆರ್ ಆರ್ ಸಿನಿಮಾ ಬಿಡುಗಡೆ ಆದಾಗ ಫೇಮಸ್ ಆಗಿತ್ತು. ಇಡಿಗ ಆಸ್ಕರ್ ಸಿಕ್ಕ ನಂತರ ಮತ್ತೆ ಈ ಹಾಡಿಗೆ ಸ್ಟೆಪ್ ಹಾಕುತ್ತಾ ಜನ ಆರ್ ಆರ್ ಆರ್ ಸಿನಿಮಾದ ಯಶಸ್ಸಿಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಕೂಡ ಆಸ್ಕರ್ ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಪೇಜ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ರಂಗದಿಂದ ಬಹಳ ವರ್ಷ ದೂರ ಉಳಿದಿದ್ದ ರಮ್ಯಾ ರಾಜಕೀಯ ಪ್ರವೇಶ ಮಾಡಿದರು. ಈಗ ರಾಜಕೀಯದಿಂದಲೂ ದೂರ ಉಳಿದಿದ್ದು ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ತಾನು ಮತ್ತು ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದಿದ್ದರು ರಮ್ಯ. ಆದರೆ ಅಭಿಮಾನಿಗಳ ಈ ಆಸೆ ಇನ್ನು ಈಡೇರಿಲ್ಲ.
ಆಸ್ಕರ್ ಪ್ರಶಸ್ತಿಯನ್ನು ಪಡೆದ ಆರ್ ಆರ್ ಆರ್ ಸಿನಿಮಾದ ತಂಡಕ್ಕೆ ಹಾಗೂ ದ ಎಲಿಫೆಂಟ್ ವಿಸ್ಪರ್ಸ್ ಸಿನಿಮಾಕ್ಕೆ ಸಿಕ್ಕ ಪ್ರಶಸ್ತಿ ಕುರಿತಂತೆ ನಟಿ ರಮ್ಯಾ ಮಾತನಾಡಿದ್ದಾರೆ. ತೆಲುಗಿನ ಆರ್ ಆರ್ ಆರ್ ಸಿನಿಮಾ ಹಾಗೂ ಎಲಿಫೆಂಟ್ ವಿಸ್ಪರ್ಸ್ ಕಿರುಚಿತ್ರ ಆಸ್ಕರ್ ಅವಾರ್ಡ್ ಗೆದ್ದ ದಿನ ನಟಿ ಟ್ವೀಟ್ ಮಾಡಿದ್ದರು. “ಭಾರತ ಅಂದ್ರೆ ಕೇವಲ ಹಿಂದಿ ಅಲ್ಲ ಕೇವಲ ಬಾಲಿವುಡ್ ಅಲ್ಲ” ಎಂದು ಪೋಸ್ಟ್ ಬರೆದು ಸಂತಸ ವ್ಯಕ್ತಪಡಿಸಿದ್ದರು.
ನಟಿ ರಮ್ಯಾ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಬಗ್ಗೆ ಯಾವಾಗಲೂ ಧ್ವನಿ ಎತ್ತುತ್ತಾರೆ. ಈ ಹಿಂದೆಯು ಹಿಂದೆ ಏರಿಕೆ ಬಗ್ಗೆ ಅವರು ಮಾತನಾಡಿದ್ದರು ಇದೀಗ ಬೆಂಗಳೂರಿನ ಆಟೋ ಚಾಲಕ ಹಾಗೂ ಹಿಂದಿ ಮಾತನಾಡುವ ಯುವತಿಯ ನಡುವೆ ನಡೆದ ಸಂಭಾಷಣೆ ಬಗ್ಗೆಯೂ ರಮ್ಯಾ ಟ್ವೀಟ್ ಮಾಡಿದ್ದಾರೆ.
ಆಟೋ ಚಾಲಕನ ಬಳಿ ಪ್ರಯಾಣಿಸುತ್ತಿರುವ ಯುವತಿ ಹಿಂದಿ ಮಾತನಾಡುವಂತೆ ಹೇಳಿದ್ದಾಳೆ. ಆದರೆ ಆಟೋ ಚಾಲಕ ನೀವು ನಮ್ಮ ನೆಲದಲ್ಲಿ ಇದ್ದೀರಿ ಕನ್ನಡದಲ್ಲಿ ಮೊದಲು ಮಾತನಾಡಿ ಎಂದು ಜಬರ್ದಸ್ತ್ ಆಗಿ ಇಂಗ್ಲಿಷ್ ನಲ್ಲಿ ಉತ್ತರ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಿಂದಿ ಹೇರಿಕೆಯ ಬಗ್ಗೆ ತನ್ನ ಅಭಿಪ್ರಾಯ ಸೂಚಿಸುತ್ತ ಈ ವಿಡಿಯೋವನ್ನು ರಮ್ಯಾ ಶೇರ್ ಮಾಡಿದರು ಇದಕ್ಕೆ ನಟ್ಟಿಗರ ಬೆಂಬಲ ಕೂಡ ಸಿಕ್ಕಿದೆ.
ಇನ್ನು ಆಸ್ಕರ್ ಪ್ರಶಸ್ತಿಯ ಬಗ್ಗೆ ಟ್ವೀಟ್ ಮಾಡಿದ ರಮ್ಯಾ, “ಭಾರತ ಹಲವು ಭಾಷೆ ಸಂಸ್ಕೃತಿ ವೈವಿಧ್ಯತೆ ಇರುವ ದೇಶ. ಭಾರತ ಅಂದರೆ ಕೇವಲ ಬಾಲಿವುಡ್ ಅಲ್ಲ ಹಿಂದಿ ಅಲ್ಲ ಈ ರೀತಿಯ ಚಿಂತನೆ ಸರಿಯಲ್ಲ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಇನ್ನು ಆಸ್ಕರ್ ಗೆದ್ದ ದ ಎಲಿಫೆಂಟ್ ವಿಸ್ಪರ್ಸ್ ಕಿರು ಚಿತ್ರದ ಬಗ್ಗೆಯೂ ಟ್ವೀಟ್ ಮಾಡಿರುವ ನಟಿ, ಈ ಸಾಕ್ಷ್ಯ ಚಿತ್ರದ ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವಿಸ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಪ್ರಾಣಿಗಳ ಬಗ್ಗೆ ದುರ್ಬಲ ಹೃದಯ ಹೊಂದಿದ್ದೇನೆ ಬೇಗ ಕರಗಿ ಹೋಗುತ್ತೇನೆ ಈ ಸಿನಿಮಾವನ್ನು ಇನ್ನೂ ನೋಡಿಲ್ಲ ಸದ್ಯದಲ್ಲಿಯೇ ನೋಡುತ್ತೇನೆ ಎಂದು ರಮ್ಯಾ ಹೇಳಿಕೊಂಡಿದ್ದಾರೆ.