Actor Jaggesh: ವಿಶೇಷ ಕಾರಣಕ್ಕಾಗಿ ಕುಟುಂಬ ಸಮೇತರಾಗಿ ಪ್ರಧಾನಿ ಮೋದಿ ಭೇಟಿ ಮಾಡಿದ ಜಗ್ಗೇಶ್

Advertisement
ಜಗ್ಗೇಶ್ (Jaggesh) ಅವರು ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ ಹೀರೋ ಆದವರು. ಜಗ್ಗೇಶ್ ಅವರ ಪರಿಶ್ರಮದ ಹಿಂದೆ ತಂದೆ-ತಾಯಿಯ ಆಶೀರ್ವಾದದ ಜೊತೆಗೆ ಜಗ್ಗೇಶ್ ಮೆಚ್ಚಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹವು ಇದೆ. ಪ್ರತಿಯೊಂದು ಯಶಸ್ವಿ ಹಿಂದೆಯೂ ಗುರುರಾಯರ ಆಶೀರ್ವಾದ ಇದೆ ಎಂದು ಪೂಜಿಸುವವರು, ಜಗ್ಗೇಶ್ ಅವರಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧ್ಯದೈವ ಆಗಿದ್ದಾರೆ
ರಾಜಕೀಯ ಪ್ರವೇಶ ಮಾಡಿದ ಜಗ್ಗೇಶ್
ಪಕ್ಷದ ಜೊತೆ ಸಿನಿಮಾರಂಗದಲ್ಲಿ ಆ್ಯಕ್ಟಿವ್(Active) ಆಗಿರುತ್ತಾರೆ, ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ(Social Media) ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾ ಪೂರೈಸಿರುವ ಅವರು, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ, ಮಾರ್ಚ್ 17ರಂದು ಜಗ್ಗೇಶ್ ಅವರ ಜನ್ಮದಿನ. ಆ ಪ್ರಯುಕ್ತ ನರೇಂದ್ರ ಮೋದಿ(Narendra Modi) ಅವರನ್ನು ಮುಂಚಿತವಾಗಿಯೇ ಜಗ್ಗೇಶ್ ಭೇಟಿ ಮಾಡಿದ್ದಾರೆ.
ಟ್ವೀಟ್ ಮಾಡಿದ ಜಗ್ಗೇಶ್
Advertisement
ನನ್ನ ಬದುಕಿನ ಶ್ರೇಷ್ಠದಿನ ಇಂದು. ಮಾರ್ಚ್ 17 ನನ್ನ ಹುಟ್ಟುದಿನ. ಈ ವರ್ಷ ನನಗೆ 60ನೇ ವಸಂತ. ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನ ಮನತುಂಬಿ ಹರಿಸಿದರು. ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ
ಮೋದಿಗೆ ರಾಘವೇಂದ್ರ ಸ್ವಾಮಿ ವಿಗ್ರಹ ಕೊಡುಗೆ
ಭೇಟಿಯ ಸಂದರ್ಭದಲ್ಲಿ ಜಗ್ಗೇಶ್ ಅವರು ಮೋದಿಗೆ ರಾಘವೇಂದ್ರ ಸ್ವಾಮಿಗಳ ವಿಗ್ರಹವನ್ನು ನೀಡಿದ್ದಾರೆ. ಜೊತೆಗೆ ಸ್ವಾಮಿಗಳ ಮಹಿಮೆಯನ್ನೂ ವಿವರಿಸಿದ್ದಾರೆ. ಜಗ್ಗೇಶ್ ಅವರಿಗೆ ದೇವರು ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಧಾನ ಮಂತ್ರಿಗಳು ಮನತುಂಬಿ ಆಶೀರ್ವದಿಸಿದರು. ಜಗ್ಗೇಶ್ ಅವರ ಜೊತೆಗೆ ಪತ್ನಿ ಪರಿಮಳಾ ಜಗ್ಗೇಶ್(Parimala Jaggesh) ಹಾಗೂ ಪುತ್ರ ಯತಿರಾಜ್ ಕೂಡ ಇದ್ದರು
ಜಗ್ಗೇಶ್ ಅವರು 60 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟು ಹಬ್ಬ ಹೇಗಿರಲಿದೆ ಎನ್ನುವ ಕುತೂಹಲ ಇದೆ. ಈ ಭಾರೀ ಜಗ್ಗೇಶ್ ಮಂತ್ರಾಲಯದಲ್ಲಿ ಇರುತ್ತಾರಾ? ಅಥವಾ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸುತ್ತಾರಾ ಕಾದು ನೋಡಬೇಕು
Advertisement