ಕಳೆದ ಕೆಲ ತಿಂಗಳಿನಿಂದ ಸಿನೆಮಾ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಕೇಸ್ ಎಂದರೆ ನಟಿ ಪವಿತ್ರಾ ಲೋಕೇಶ್ (Pavithra lokesh) ಹಾಗೂ ನರೇಶ್ (Naresh) ನಡುವಿನ ಸಂಬಂಧ ಎನ್ನಬಹುದು. ಈ ಬಗ್ಗೆ ನರೇಶ್ ಪತ್ನಿ ರಮ್ಯಾ (Ramya) ಹಲವು ವಿವಾಧಗಳನ್ನು ಮಾಹಿತಿಯನ್ನು ಖಾಸಗಿ ವಾಹಿನಿಗೆ ನೀಡಿ ಆ ವಿವಾಧ ಇನ್ನು ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ನರೇಶ್ ಮತ್ತು ಪವಿತ್ರಾ ಅವರು ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಹಾಗಾದರೆ ಇದು ನಿಜವೇ ಈ ಬಗ್ಗೆ ಪವಿತ್ರಾ ಅವರ ಪತಿ ಸುಚೇಂದ್ರ ಪ್ರಸಾದ್ ಏನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಮದುವೆ ವಿಚಾರ ನಿಜವೇ?
ಕೆಲ ದಿನಗಳ ಹಿಂದೆ ಪವಿತ್ರಾ ಹಾಗೂ ನರೇಶ್ ಪತ್ನಿ ರಮ್ಯಾ ನಡುವೆ ಮಾತಿನ ಚಕಾ ಮಕಿ ನಡೆದಿತ್ತು ಬಳಿಕ ಹೊಸ ವರ್ಷದಂದು ಶುಭಾಶಯ ಕೋರುವ ಒಂದು ಮೆಸೇಜ್ ನಲ್ಲಿ ಪವಿತ್ರಾ ಮತ್ತು ನರೇಶ್ ಲಿಪ್ ಕಿಸ್ ಮಾಡಿ ಸಾಕಷ್ಟು ಗೊಂದಲ ಮಾಡಿಸಿದ್ದರು. ಬಳಿಕ ಇತ್ತೀಚೆಗಷ್ಟೇ ಅವರ ಮದುವೆ ವಿಡಿಯೋ , ದುಬೈ ಹನಿಮೂನ್ ಎಂಬ ವೀಡಿಯೋ ಎಲ್ಲ ಹರಿದಾಡಿತ್ತು ಆದರೆ ಇದು ಸಿನೆಮಾ ಕುರಿತಾದ ವೀಡಿಯೋ ಎಂಬ ಮಾಹಿತಿ ಇದೀಗ ತಿಳಿದುಬಂದಿದೆ. ಇದು ಸಿನೆಮಾಕ್ಕಾಗಿ ಮದುವೆ ಹನಿಮೂನ್ ಎಂಬ ಮಾಹಿತಿ ತಿಳಿದು ಬರುತ್ತಲೇ ಈ ಬಗ್ಗೆ ಸುಚೇಂದ್ರ ಪ್ರಸಾದ್ ಅವರು ಏನೆನ್ನಬಹುದು ಎಂಬ ಮಾಹಿತಿ ಕೂಡ ಹೊರಬಂದಿದೆ.
ಸುಚೇಂದ್ರ ಪ್ರಸಾದ್ ಹೇಳಿದ್ದೇನು?
ಸುಚೇಂದ್ರ ಪ್ರಸಾದ್ (Suchendra Prasad) ಅವರು ಪವಿತ್ರಾ ಅವರ ಪತಿಯಾಗಿದ್ದು ಈ ಬಗ್ಗೆ ಪವಿತ್ರಾ ಮಾತ್ರ ನಂಗೂ ಅವರಿಗೂ ಈಗ ಯಾವುದೇ ಸಂಬಂಧ ಇಲ್ಲ ಅನ್ನುತ್ತಿದ್ದಾರೆ. ಪವಿತ್ರಾ ಅವರು ಈ ರೀತಿ ಬದಲಾಗಿದ್ದ ಬಗ್ಗೆ ಸದ್ಯ ಸುಚೇಂದ್ರ ಪ್ರಸಾದ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೊದಲಿಂದಲೂ ಪವಿತ್ರಾ ಅವರು ಅವಕಾಶವಾದಿಯಾಗಿ ಬದುಕ್ಕಿದ್ದವರು ಶ್ರೀಮಂತಿಕೆಯ ಮಂಕು ಅವರನ್ನು ಕವಿದಿದೆ. ಆ ಶ್ರೀಮಂತಿಕೆ ತನ್ನದಾಗಿ ಮಾಡಿಕೊಳ್ಳಲು ಅವರು ಯಾವ ಮಟ್ಟಕ್ಕೆ ಕೂಡ ಇಳಿಯಬಹುದು. ನರೇಶ್ ಅವರ ಆಸ್ತಿಗಾಗಿ ಅವರ ಜೊತೆ ಲವ್ ಟ್ರ್ಯಾಪ್ ಗೇಮ್ ಆಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಐಷಾರಾಮಿ ಜೀವನವನ್ನು ಆಕೆ ಇಷ್ಟ ಪಡುತ್ತಾಳೆ. ಹಣಕ್ಕಾಗಿ ನನ್ನನ್ನು ಬಿಟ್ಟು ನರೇಶ್ ಅವರ ಹಿಂದೆ ಅಲೆಯುತ್ತಿದ್ದಾರೆ ಇದು ನಂಗೆ ಅರ್ಥ ಆಗಿದೆ ಮುಂದೊಂದು ದಿನ ನರೇಶ್ ಅವರಿಗೂ ಅರ್ಥವಾಗಬಹುದು. ಐಷರಾಮಿ ಆಸೆ ಇದೆ, ಹಾಗಾಗಿ ಸುಖಿ ಜೀವನದಿಂದ ದೂರ ಉಳಿತಾರೆ ಬಿಡಿ ಎಂದಿದ್ದಾರೆ. ಸುಚೇಂದ್ರ ಪ್ರಸಾದ್ ಅವರು ಇಷ್ಟೇಲ್ಲ ಹೇಳಿಕೆ ನೀಡಿದ್ದರು ಈ ಬಗ್ಗೆ ಪವಿತ್ರಾ ಹಾಗೂ ನರೇಶ್ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮುಂದಿನದಿನದಲ್ಲಿ ನೀಡುತ್ತಾರಾ ಎಂದು ಕಾದುನೋಡಬೇಕಿದೆ.