Vinod Raj: ಅಂದು ಕಷ್ಟದಲ್ಲಿದ್ದ ವಿನೋದ್ ರಾಜ್ ಗೆ ವಿಷ್ಣುವರ್ಧನ್ ಮಾಡಿದ ಸಹಾಯವೇ ಬೇರೆ
ನಮ್ಮ ಕನ್ನಡ ಚಿತ್ರರಂಗದಲ್ಲಿ (KFI) ಮೈಕಲ್ ಜ್ಯಾಕ್ಸನ್ (Michel Jackson) ಎಂದೇ ಜನಪ್ರಿಯತೆ ಗಳಿಸಿರುವ ನಟ ವಿನೋದ್ ರಾಜ್ (Vinod Raj) ರವರು ಹಾಗೂ ಅವರ ತಾಯಿ ಕನ್ನಡ ಚಿತ್ರರಂಗದ ದೀಮಂತ ನಾಯಕಿ ಲೀಲಾವತಿಯವರು (Leelavathi) ಜೀವನ ಸಾಗಿಸಲು ಕಷ್ಟವನ್ನು ಪಟ್ಟಿದ್ದು ಸದ್ಯಕ್ಕೆ ವ್ಯವಸಾಯವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಇನ್ನು ವ್ಯವಸಾಯದಲ್ಲಿ (Forming) ಬರುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ಸಾಮಾಜಿಕ ಕೆಲಸಗಳಿಗೆ ಬಳಸುತ್ತಿದ್ದಾರೆ ಎನ್ನುವುದು ಖುಷಿ ಪಡುವ ವಿಚಾರವಾಗಿದ್ದು ಅಂದಹಾಗೆ ಒಂದು ಕಾಲದಲ್ಲಿ ಚಿತ್ರದಲ್ಲಿ (Movies) ಗುರುತಿಸಿಕೊಂಡಿದ್ದ ವಿನೋದ್ ರಾಜ್ ರವರಿಗೆ ಚಿತ್ರರಂಗ ಕೈ ಹಿಡಿಯಲಿಲ್ಲ ಎಂದರೆ ತಪ್ಪಾಗಲಾರದು. ಹೌದು ವಿನೋದ್ ರಾಜ್ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಅದ್ಭುತ ಡ್ಯಾನ್ಸರ್ (Dancer) ಎನ್ನಬಹುದಾಗಿದ್ದು ಎಲ್ಲರಿಗೂ ಸಿಕ್ಕಂತೆ ವಿನೋದ್ ರಾಜ್ ಪಾಲಿಗೂ ಅವಕಾಶಗಳು ದೊರಕಿದ್ದರೆ ಇವತ್ತಿಗೆ ಸ್ಯಾಂಡಲ್ ವುಡ್ ನಲ್ಲಿ(Sandalwood) ಬಹುದೊಡ್ಡ ನಟನಾಗಿ ಬೆಳೆಯುತ್ತಿದ್ದರು.
ಇನ್ನು ನಟ ವಿನೋದ್ ರಾಜ್ ಅವರಿಗೆ ಪ್ರತಿಭೆ ಇದ್ದು ಆದರೆ ಆ ಕಾಲದ ನಿರ್ದೇಶಕರು (Directors) ಹಾಗೂ ನಿರ್ಮಾಪಕರು (Producers) ಸಿನಿಮಾದಲ್ಲಿ ಅವಕಾಶವನ್ನು ನೀಡುವುದಕ್ಕೆ ಹಿಂದೇಟು ಹಾಕಿದರು. ಚಿತ್ರರಂಗವು ಇವರನ್ನು ದೂರ ಇಟ್ಟಿತೋ ಅಥವಾ ಚಿತ್ರರಂಗದಿಂದ ಇವರು ದೂರ ಉಳಿದರೋ ಗೊತ್ತಿಲ್ಲ. ಆದರೆ ಅವಕಾಶಗಳು ಇವರ ಪಾಲಿಗೆ ಕೊನೆಗೂ ಸಿಗಲೇ ಇಲ್ಲ ಎನ್ನಬಹುದು.
ಹೌದು ಆ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ನಟನೆ ಮಾತ್ರವಲ್ಲದೇ ನೃತ್ಯದ ಮೂಲಕನೇ ಗಮನ ಸೆಳೆದವರು ಇವರಾಗಿದ್ದು ಇವರ ಡ್ಯಾನ್ಸ್ ಗೆ ಒಂದಷ್ಟು ಅಭಿಮಾನಿ ಬಳಗವೇ ಹುಟ್ಟಿಕೊಂಡಿತ್ತು. ಮೈಕಲ್ ಜಾಕ್ಸನ್ ಅನ್ನು ನಾಚಿಸುವಂತೆ ಡ್ಯಾನ್ಸ್ ಮಾಡುತ್ತಿದ್ದ ಅವರು ಹೀಗಾಗಿ ಕನ್ನಡ ಚಿತ್ರರಂಗದ ಮೈಕಲ್ ಜ್ಯಾಕ್ಸನ್ ಎಂದೇ ಖ್ಯಾತಿ ಗಳಿಸಿದರು. ಆದಲ್ಲದೆ ಹಿರಿಯ ನಟಿ ಲೀಲಾವತಿಯವರ ಮಗನಾಗಿರುವ ಈ ವಿನೋದ್ ರಾಜ್ ರವರು ಸದ್ಯ ಇದೀಗ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದಾರೆ.
ಇನ್ನು ಅದೊಂದು ಸಂದರ್ಭದಲ್ಲಿ ವಿನೋದ್ ರಾಜ್ ರವರಿಗೆ ಯಾರಿಂದಲೂ ಸಹ ಸಹಾಯ ಸಿಕ್ಕದಿದ್ದ ಸಂದರ್ಭದಲ್ಲಿ ಕೇವಲ ವಿಷ್ಣುವರ್ಧನ್(Dr Vishnuvardhan) ರವರಿಂದ ಮಾತ್ರ ಸಹಾಯ ಸಿಕ್ಕಿತು. ಹೌದಿ ಅದಕ್ಕೆ ತಾನೆ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗದ ಕರ್ಣ ಎನ್ನುವುದಾಗಿ ಹೇಳುವುದು.
ಅಷ್ಟಕ್ಕೂ ಆ ಸಂದರ್ಭ ಯಾವುದು ಹಾಗೂ ವಿಷ್ಣುವರ್ಧನ್ ರವರು ಮಾಡಿದಂತಹ ಸಹಾಯವಾದರೂ ಏನು ಎಂದು ನೋಡುವುದಾದರೆ ವಿನೋದ್ ರಾಜ್ ರವರು ಕನ್ನಡದ ಕಂದ(Kannadada Kanda) ಎನ್ನುವ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಯಾರಿಂದಲೂ ಕೂಡ ಸಹಾಯ ಹಾಗೂ ಪ್ರೋತ್ಸಾಹ ಸಿಗದೇ ಒಂಟಿಯಾಗಿ ಕನ್ನಡ ಚಿತ್ರರಂಗದಲ್ಲಿ ನಿಂತಿದ್ದರು. ಹೌದು ಈ ಸಂದರ್ಭದಲ್ಲಿ ವಿಷ್ಣುವರ್ಧನ ರವರು ತಾವು ಮುಂದೆ ಬಂದು ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಎಂಬುದಾಗಿ ಧೈರ್ಯವನ್ನು ತುಂಬಿದ್ದರಂತೆ.
ಇದನ್ನ ವಿನೋದ್ ರಾಜ್ ಮತ್ತು ಲೀಲಾವತಿಯವರು(Leelavathi Actress) ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಥವಾ ಯಾವುದೇ ವೇದಿಕೆಯ ಮೇಲೆ ಹೋಗಲಿ ತಾಯಿ ಮಗ ಇಬ್ಬರೂ ಕೂಡ ಈ ಸಂದರ್ಭದಲ್ಲಿ ವಿಷ್ಣುವರ್ಧನ್(Vishnudada) ರವರು ಮಾಡಿರುವ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ. ಹೌದು ಇದು ಸಾಹಸಸಿಂಹ ವಿಷ್ಣುವರ್ಧನ್ ರವರು ತಮ್ಮನ್ನು ನಂಬಿದವರ ಹಿಂದೆ ಬೆಂಬಲವಾಗಿ ನಿಲ್ಲುತ್ತಿದ್ದ ರೀತಿ ಎಂದು ಹೇಳಬಹುದಾಗಿದೆ. ಇನ್ನು ವಿಷ್ಣುವರ್ಧನ್ ಅವರ ಈ ಹೃದಯವಂತಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.