Karnataka Times
Trending Stories, Viral News, Gossips & Everything in Kannada

Aamir khan: ಬಾಲಿವುಡ್ ಅನ್ನು ಒಂದು ಕಾಲದಲ್ಲಿ ಆಳಿದ್ದ ಅಮೀರ್ ಖಾನ್ ಅವರ ಎಜುಕೇಶನ್ ಎಷ್ಟು ? ಇಲ್ಲಿದೆ ಮಾಹಿತಿ

Advertisement

ತಮ್ಮ ನೆಚ್ಚಿನ ತಾರೆಯರನ್ನು ಎಲ್ಲಾ ರೀತಿಯಿಂದಲೂ ಅನುಕರಣೆ ಮಾಡಲು ಜನ ಬಯಸುತ್ತಾರೆ ಅವರ ಸ್ಟೈಲ್ (Style) ಇರಬಹುದು, ಉಡುಗೆ ತೊಡುಗೆ, ಮಾತು ಎಲ್ಲವನ್ನು ಸೇಮ್ ಟು ಸೇಮ್ ಕಾಫಿ (Same to Same Copy)ಮಾಡುವವರು ಇದ್ದಾರೆ. ಆದರೆ ಕೆಲವು ತಾರೆಯರನ್ನು ಇದೊಂದು ವಿಷಯದಲ್ಲಿ ನೀವು ಫಾಲೋ (Follow) ಮಾಡೋದಕ್ಕೆ ಹೋದರೆ ಫೈಲ್ (Fail)ಆಗಬಹುದು. ಯಾಕೆ ಅಂತೀರಾ? ಇಂದು ದೊಡ್ಡ ಸ್ಟಾರ್ ನಟ ನಟಿ ಎನಿಸಿಕೊಂಡಿರುವ, ಸಿನಿಮಾಗಳ ಮೂಲಕ ದೊಡ್ಡ ಯಶಸ್ಸನ್ನು ಗಳಿಸಿಕೊಂಡಿರುವ ಕೆಲವು ಬಾಲಿವುಡ್ (Bollywood)ನಟರು ಕೇವಲ ಪಿಯುಸಿ  (PUC)ಪಾಸ್ ಆಗದೇ ಇರುವವರು ಇದ್ದಾರೆ.

Rotten Tomatoes

Advertisement

ಅಮೀರ್ ಖಾನ್:

ಬಾಲಿವುಡ್ ನಲ್ಲಿ ಮಿಸ್ಟರ್ ಪರ್ಫೆಕ್ಟ್ (Mister Perfect)ಅಂತಾನೇ ಅಮೀರ್ ಖಾನ್ (Aamir khan) ಅವರನ್ನ ಕರೆಯಲಾಗುತ್ತೆ. ಅವರು ಈವರಿಗೆ ಅಭಿನಯಿಸಿದ ಸಾಕಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ (Box Office) ಕಮಾಲ್ ಮಾಡಿವೆ. ಬಾಲಿವುಡ್ ಸಿನಿಮಾಗಳಲ್ಲಿ ಬಹಳ ವಿಭಿನ್ನವಾದ ಹಾಗೂ ವಿಶೇಷವಾದ ಪಾತ್ರಗಳನ್ನು ನಿಭಾಯಿಸಿ ಗೆದ್ದ ಹೆಗ್ಗಳಿಗೆ ಅಮೀರ್ ಖಾನ್ ಅವರದ್ದು. ಅಮೀರ್ ಖಾನ್ ನೋಡುವುದಕ್ಕೂ ಸ್ಮಾರ್ಟ್ (Smart). ಅವರ ಉಡುಗೆ ತೊಡುಗೆಗಳು ಸ್ಟೈಲ್ ಎಲ್ಲವೂ ಸಕ್ಕತ್ತಾಗಿರುತ್ತೆ. ಅಷ್ಟೇ ಅಲ್ಲ ಅವರು ಬಹಳ ಸ್ಪಷ್ಟವಾಗಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿಯೂ ಕೂಡ ಮಾತನಾಡುತ್ತಾರೆ. ಕೋಟಿ ಕೋಟಿ ಆಸ್ತಿ ಹೊಂದಿರುವ ಅಮೀರ್ ಖಾನ್ ಅವರ ಎಜುಕೇಶನ್ ಎಷ್ಟಿರಬಹುದು ಎನ್ನುವ ಕುತೂಹಲ ಸಿನಿ ಪ್ರಿಯರಿಗೆ ಇದ್ದೇ ಇರುತ್ತೆ. ಹಾಗಾದ್ರೆ ಅಮೀರ್ ಖಾನ್ ಅವರು ಎಷ್ಟು ಶಿಕ್ಷಣ ಪಡೆದುಕೊಂಡಿದ್ದಾರೆ ನೋಡೋಣ.

ನಟ ಅಮೀರ್ ಖಾನ್ ಅವರು 12ನೇ ತರಗತಿ ಅಂದರೆ ಪಿಯುಸಿಯನ್ನು ಮುಂಬೈನ ನಾರ್ಸಿ ಕಾಲೇಜಿನಲ್ಲಿ ಮುಗಿಸಿದ್ದಾರೆ. ಅವರು ಶಿಕ್ಷಣವನ್ನು ಇಷ್ಟಕ್ಕೇ ಬಿಟ್ಟು ನಾಟಕ ಕಂಪನಿಗೆ ಸೇರುತ್ತಾರೆ ಅಲ್ಲಿ ನಟನೆಯ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ತಮ್ಮ 16ನೇ ವಯಸ್ಸಿನಲ್ಲಿ ವೃತ್ತಿ ಜೀವನ ಆರಂಭಿಸಿದ ಅಮೀರ್ ಖಾನ್ ಪ್ಯಾರನೋಸಿಯ ಎನುವ ಮೂಕಿ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ, ಈ ಸಿನಿಮಾವನ್ನು ಅವರ ಚಿಕ್ಕಪ್ಪ ನಾಸಿರ್ ಹುಸೇನ್ ನಿರ್ದೇಶನ ಮಾಡಿದ್ದರು. ಅದಾದ ಬಳಿಕ ಅಮೀರ್ ಖಾನ್ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಜೀವನದಲ್ಲಿ ಏನನ್ನಾದರೂ ಸಾಧಿಸುವುದಕ್ಕೆ ಕೇವಲ ಪಠ್ಯ ಓದು ಮಾತ್ರ ಬೇಕಾಗಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ.

Advertisement

Leave A Reply

Your email address will not be published.