Actress Meghana Raj: ನಟಿ ಮೇಘನಾ ರಾಜ್ ಭವಿಷ್ಯದ ಕುರಿತು ಮಹತ್ತರ ನಿರ್ಧಾರ ಏನು ಗೊತ್ತಾ?

Advertisement
ನಟಿ ಮೇಘನಾ ರಾಜ್ (Megana Raj) ಅವರು ಸಿನೆಮಾ ರಂಗದಲ್ಲಿ ತನ್ನದೇ ಆದ ಪ್ರತಿಭೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಮದುವೆಗೂ ಮುಂಚೆಯೆ ಪರಭಾಷೆಯಲ್ಲಿ ಸಹ ಅಪಾರ ಸಂಖ್ಯೆ ಅಭಿಮಾನಿಗಳನ್ನು ಪಡೆದ ಇವರು ಮದುವೆಯಾದ ಬಳಿಕ ಸಿನೆಮಾ ಕ್ಷೇತ್ರದಿಂದ ದೂರ ಉಳಿದು ಪತಿಯ ಅಗಲಿಕೆ ನೋವಿನ ನಡುವೆ ಮಗನ ಆರೈಕೆಯಲ್ಲಿ ದಿನ ಕಳೆಯುತ್ತಿದ್ದಾರೆ. ಇದರ ನಡುವೆ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ(Social Media) ಸಕ್ರಿಯರಾಗಿದ್ದಾರೆ.
ಮದುವೆಯಾದ ಬಳಿಕ ಮಗುವಿನ ಜನನದ ಬಳಿಕ ಮೇಘನಾ ಈಗ ಮಹತ್ತರ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ಮತ್ತೆ ಸಿನೆಮಾ ರಂಗಕ್ಕೆ ಬರಬೇಕೆಂದು ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಮೇಘನಾ ಅವರೇ ಮಾತನಾಡಿದ್ದು ಸದ್ಯ ಅವರ ಅಭಿಮಾನಿಗಳಿಗೆ ಈ ವಿಚಾರ ಖುಷಿತಂದಿದೆ.
ಏನಂದ್ರು ಚಿರು ಪತ್ನಿ ಮೇಘನಾ?
Advertisement
ನನ್ನ ಹೆತ್ತವರು ಕಲಾವಿದರಾದ ಕಾರಣ ನನಗೆ ಚಿಕ್ಕವಯಸ್ಸಿನಲ್ಲೇ ಕಲೆಯ ಮೇಲೆ ಅಪಾರ ಆಸಕ್ತಿ ಬೆಳೆಯಿತು. ನನ್ನ ಅಪ್ಪ ಅಮ್ಮ ಕೂಡ ಇದಕ್ಕೆ ಬೆಂಬಲರಾದರು ಇದರ ನಡುವೆ ಎರಡು ಪ್ರೀತಿ ಜೊತೆಯಾಗೇ ಸಿಕ್ಕಿತು ಅದರಲ್ಲೊಂದು ಚಿರು ಮತ್ತೊಂದು ಸಿನೆಮಾ. ಚಿರು (Chiru) ಜೊತೆ ಮದುವೆಯ ಬಳಿಕ ತುಂಬಾ ಖುಷಿಯಲ್ಲಿದ್ದೆ ಆದರೆ ಬಳಿಕ ಅವರ ಅಗಲುವಿಕೆ ನನಗೆ ಬರಸಿಡಿಲಿನಂತಾಗಿ ಆ ಚೇತರಿಕೆ ಪಡೆಯಲು ನನ್ನ ಕಂದಮ್ಮ ರಾಯನ್ ಬರಬೇಕಾಯಿತು. ಚಿರು ನಂಗಾಗಿ ಇನ್ನೊಂದು ಆಸ್ತಿ ಮಾಡಿದ್ದಾರೆ ಅದೇ ಅವರ ಹಾಗೂ ನನ್ನ ಸ್ನೇಹಿತರು.
ನನ್ನ ಎಲ್ಲ ಕಷ್ಟ ಸುಖಗಳಿಗೆ ಜೊತೆಯಾಗಿ ಸಾತ್ ನೀಡೋರು. ಬಳಿಕ ಸಿನೆಮಾ ರಂಗದಿಂದ ದೂರ ಉಳಿದಿದ್ದೆ ಆದರೆ ನನ್ನನ್ನು ಸಿನೆಮಾ ಬಿಡಲಿಲ್ಲ. ಹಾಗಾಗಿ ಪನ್ನ ಪ್ರೊಡಕ್ಷನ್ ಹೌಸ್ ನನಗೆ ಅವಕಾಶ ನೀಡಿದೆ. ವಿಶಾಲ್ ಎಂಬುವವರನ್ನು ಮನೆಗೆ ಕಳಿಸಿ ಕಥೆ ಹೇಳಿಸಿದರು. ಕಥೆ ಇಷ್ಟವಾಯ್ತು ಬಳಿಕ ಸಿನಿಮಾ ನೀನೇ ಮಾಡಬೇಕು ಎಂದರು ಆವತ್ತೇ ಸಿನಿಮಾ ಮಾಡಲೇಬೇಕು ಎಂದು ನಿರ್ಧಾರ ಮಾಡಿದೆ ಅದಕ್ಕಾಗಿ ತುಂಬಾ ಪರಿಶ್ರಮ ಪಟ್ಟಿದ್ದೇನೆ.
ಎಷ್ಟೇ ಅಡೆತಡೆ ಬರಲಿ, ಫುಲ್‌ಸ್ಟಾಪ್ ಹಾಕಲು ಜೀವನ ಟ್ರೈ ಮಾಡಿದರೆ, ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿ ಸಲ ನನ್ನ ಬದುಕೆಂಬ ಪುಸ್ತಕಕ್ಕೆ ಫುಲ್‌ಸ್ಟಾಪ್ ಹಾಕಿದಾಗ, ನಾನು ಅಲ್ಲಿಂದ ಹೊಸ ವಾಕ್ಯ ಬರೆಯುತ್ತೇನೆ. ತತ್ಸಮ ತದ್ಬವ ಸಿನಿಮಾ ಇದೀಗ ಶುರುವಾಗಿದೆ ಎಂದು ಮೇಘನಾ ಅವರು ತಮ್ಮ ಸಿನೆಮಾ ಬಗ್ಗೆ ಮಾಹಿತಿ ನೀಡಿದ್ದಾರೆ.
Advertisement