Actor Darshan: ಕ್ರಾಂತಿ ನಿಜವಾಗ್ಲು 100 ಕೋಟಿ ಆಯ್ತಾ ಕೇಳಿದ್ದಕ್ಕೆ ದರ್ಶನ್ ಉತ್ತರ ಹೀಗಿತ್ತು
ನಟ ದರ್ಶನ್ (Darshan) ಕ್ರಾಂತಿ ಸಿನಿಮಾ(Kranti Cinema) ಬಿಡುಗಡೆಗೂ ಮುನ್ನ ಸಖತ್ ಸುದ್ದಿಯಲ್ಲಿತ್ತು, ವಿ ಹರಿಕೃಷ್ಣ (V Harikristana) ಬರೆದು ನಿರ್ದೇಶಿಸಿರುವ ಕ್ರಾಂತಿಯು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಸರ್ಕಾರಿ ಶಾಲೆಗಳನ್ನು ರಕ್ಷಿಸುವ ಸಂದೇಶವನ್ನು ಹೊಂದಿರುವ ಮಾಸ್ ಮಿಶ್ರಣದ ಸಿನಿಮಾವಾಗಿತ್ತು, ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದ ದರ್ಶನ್ ಅಭಿನಯದ ಕ್ರಾಂತಿ, ಬಿಡುಗಡೆಯ ನಂತರವೂ ಹವಾ ಕ್ರಿಯೇಟ್ ಮಾಡಿದೆ.
ಕ್ರಾಂತಿ ಸಕ್ಸಸ್ ಬಗ್ಗೆ ಮಾತನಾಡಿದ ಡಿ ಬಾಸ್
ಕ್ರಾಂತಿ ಚಿತ್ರದ ಸಕ್ಸಸ್ ಅನ್ನು ಚಿತ್ರತಂಡ ಸಂಭ್ರಮಿಸುತ್ತಿದೆ. ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ದಚ್ಚು ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ, ಚಿತ್ರ ಸಕ್ಸಸ್ ಆಗಿಲ್ಲ ಎಂದವರಿಗೆ ಟಾಂಗ್ ನೀಡಿದ ದಾಸ, ಸಿನಿಮಾ ಗೆದ್ದರೆ ಮಾತ್ರ ಸೆಲೆಬ್ರೇಷನ್ ಮಾಡ್ತಾರೆ.. ಸುಮ್ನೆ ದುಡ್ಡು ಖರ್ಚು ಮಾಡಿ, ಹೊಗಳಿಕೊಳ್ಳೋಕೆ ನಮಗೇನು ಎಂದು ಟಾಂಗ್ ನೀಡಿದ್ದಾರೆ, ಈ ಮೂಲಕ ಕ್ರಾಂತಿ (Kranti) ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಗೆ ಸೇರಿದೆ ಎಂದು ಹೇಳಬಹುದಾಗಿದೆ.
ನೆಗೆಟಿವ್ ಪ್ರಚಾರ ಬಗ್ಗೆ ದರ್ಶನ್ ಕಿಡಿ
ಕ್ರಾಂತಿ ಸಿನಿಮಾದ ಬಗ್ಗೆ ನೆಗೆಟಿವ್ ಪ್ರಚಾರ ಮಾಡಿದ್ದವರಿಗೆ ನಾನು ಧನ್ಯವಾದಗಳನ್ನು ಹೇಳ್ತೇನೆ. ಅವರೇ ನನ್ನ ಸಿನಿಮಾ ಗೆಲ್ಲಿಸಿದ್ದು, ಅವರೇ ನನ್ನ ಸಿನಿಮಾಗೆ ಬಿಟ್ಟಿ ಪ್ರಚಾರ ಕೊಟ್ಟವರು. ಇನ್ನೂ ಕೆಲವರು ಹಣ ಖರ್ಚು ಮಾಡಿಕೊಂಡು ಟಿಕೆಟ್ ತಗೊಂಡು , ನೆಗೆಟಿವ್ ಕಾಮೆಂಟ್ ಮೂಲಕ ನಮ್ಮ ಸಿನಿಮಾಗೆ ಬೆಂಬಲ ಕೊಟ್ರು, ಅವರಿಗೆ ಒಳ್ಳೆಯದಾಗಲಿ ಅಂತ ಕ್ರಾಂತಿ ವಿರುದ್ಧ ಕಾಮೆಂಟ್ ಹಾಗೂ ಟ್ರೊಲ್(Troll) ಮಾಡಿದ್ದ ನೆಟ್ಟಿಗರಿಗೆ ದರ್ಶನ್ ಟಾಂಗ್ ನೀಡಿದ್ದಾರೆ, ಕೊನೆಯಲ್ಲಿ ಹೇಗದ್ರು ಮಾಡಿ ಅವರೇ ಕ್ರಾಂತಿ ಗೆಲ್ಲುವಂತೆ ಮಾಡಿದ್ರು ಅಂದರು.