ಕನ್ನಡ ಸಿನೆಮಾರಂಗದಲ್ಲಿ ಕಾಮಿಡಿ ಸ್ಟಾರ್ ಗಳು ಹೀರೋ ಆಗೋದು ಈಗಿನ ಜಾಯಮಾನಕ್ಕೆ ಕಾಮನ್ ಆಗಿದೆ. ಅದೇ ರೀತಿ ಕೋಮಲ್ (Komal), ಚರಣ್ (Charan), ಸಾಧುಕೋಕಿಲ (Sadhu Kokila) ಎಲ್ಲರೂ ಒಂದು ಮಟ್ಟಕ್ಕೆ ಹೀರೋ ಆದವರೇ ಈಗ ಅಂತವರ ಸಾಲಿನಲ್ಲಿ ನಟ ಧರ್ಮಣ್ಣ ಕಡೂರು (Dharamanna Kadur) ಅವರು ಸೇರಿದ್ದಾರೆ. ಅವರು ಈಗಾಗಲೇ ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆಗಿ ಬಳಿಕ ಅನೇಕ ಸಿನೆಮಾದಲ್ಲಿ ಪೋಷಕ ಹಾಗೂ ಹಾಸ್ಯನಟನಾಗಿ ಅಭಿನಯಿಸಿದ್ದರು. ಈಗ ಇವರ ಸಿನೆಮಾ ಎಲ್ಲೆಡೆ ಪ್ರಚಾರದ ಅಬ್ಬರಕ್ಕೆ ಬರುತ್ತಿದ್ದು ಈ ಸಿನೆಮಾ ಯಾವುದು, ನಾಯಕಿ ಯಾರೆಂಬ ಕುರಿತು ಇಲ್ಲಿದೆ ಮಾಹಿತಿ.
ಸಿನೆಮಾ ಹೆಸರೇನು?
ದರ್ಶನ್ (Dharshan), ಸುದೀಪ್ (Sudeep), ಇನ್ನು ಅನೇಕ ನಟರೊಂದಿಗೆ ಕಾಮಿಡಿ ನಟ ಧರ್ಮಣ್ಣ ಅವರು ಅಭಿನಯಿಸಿದ್ದು ಈ ಮೂಲಕ ಅವರು ಫೇಮಸ್ ಆಗಿದ್ದು ಈಗ ಅವರಿಗೆ ರಾಜಯೋಗ (Rajayoga) ಎಂಬ ಶೀರ್ಷಿಕೆ ಅಡಿಯಲ್ಲಿ ಸಿನೆಮಾ ಆಫರ್ ಬಂದಿದೆ. ಈ ಮೂಲಕ ಮನುಷ್ಯನಿಗೆ ಯೋಗ ಚೆನ್ನಾಗಿದ್ದರೆ ಎಲ್ಲವೂ ಸಾಧ್ಯ ಎಂಬರ್ಥದಲ್ಲಿ ಈ ಸಿನೆಮಾ ಲಾಂಚ್ ಆಗಲಿದೆ.
ಹೀರೋಯಿನ್ ಯಾರು?
ಲಿಂಗರಾಜ ಉಚ್ಚಂಗಿದುರ್ಗ ಅವರು ಈ ಸಿನೆಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಇತ್ತೀಚೆಗೆ ಸಿನೆಮಾದ ಫಸ್ಟ್ ಲುಕ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು. ಕನ್ನಡದ ಯುವ ಪ್ರತಿಭೆ ನಿರೀಕ್ಷಾರಾವ್ ಅವರು ಈ ಸಿನೆಮಾಕ್ಕೆ ನಾಯಕಿಯಾಗಿ ಆಯ್ಕೆ ಯಾಗಿದ್ದು ನೋಡಲು ಮಿಲ್ಕಿ ಬ್ಯೂಟಿಯಂತೆ ಕಾಣುವ ಈಕೆ ಧರ್ಮಣ್ಣಂಗೆ ಜೋಡಿಯಾಗಿ ತೆರೆ ಮೇಲೆ ಬರಲಿದ್ದಾರೆ. ಈ ಬಗ್ಗೆ ಮಾತಾಡಿದ್ದ ಅವರು ಈ ಸಿನೆಮಾ ನನ್ನ ಬದುಕಿಗೆ ತುಂಬಾ ಪ್ರಾಮುಖ್ಯತೆ ಪಡೆದಿದೆ. ಈ ಸಿನೆಮಾವೊಂದು ಮೂಢನಂಬಿಕೆ, ನಂಬಿಕೆಗಳ ಮಧ್ಯೆ ನಡೆಯುವ ಕಥೆ ಎಂದು ಹೇಳಿದ್ದಾರೆ. ಈ ಮೂಲಕ ಸಿನೆಮಾ ಬಹುತೇಕ ಶೂಟಿಂಗ್ ಕಾರ್ಯ ಮುಗಿದಿದ್ದು ಮುಂದಿನ ದಿನದಲ್ಲಿ ತೆರೆಕಾಣಲಿದೆ ಎನ್ನಬಹುದು.