Karnataka Times
Trending Stories, Viral News, Gossips & Everything in Kannada

Vishnuvardhan: ವಿಷ್ಣುವರ್ಧನ್ ಅವರೇ ಬರೆದ ಕಥೆಯಲ್ಲಿ ಅವರಿಗೆ ನಟಿಸಲು ಅವಕಾಶ ಸಿಗದ ಹಿಟ್ ಸಿನೆಮಾ ಇಲ್ಲಿದೆ.

ಸ್ಯಾಂಡಲ್ ವುಡ್ (Sandalwood) ಚಿತ್ರರಂಗದ ದಿಗ್ಗಜ ನಟರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಕೂಡಾ ಪ್ರಮುಖ ನಟರು. ‌ ಕನ್ನಡ ಸಿನಿಮಾರಂಗ ಕಂಡ ಅಪ್ರತಿಮ ನಟ ಇವರು, ನಾಗರಹಾವು ಸಿನಿಮಾದ ಮೂಲಕ ನಾಯಕ ನಟನಾಗಿ ಸಿನಿಮಾರಂಗಕ್ಕೆ ಪ್ರವೇಶವನ್ನು ಪಡೆದ ವಿಷ್ಣುವರ್ಧನ್ ಕೇವಲ ಕನ್ನಡದ ಪ್ರೇಕ್ಷಕರ ಮನಸ್ಸನ್ನು ಮಾತ್ರ ಗೆದ್ದಿಲ್ಲ, ಚಲನಚಿತ್ರರಂಗದ ಎಲ್ಲ‌ ಪ್ರೇಕ್ಷಕರನ್ನು ಗಮನಸೆಳೆದ ನಟ ಇವರು, ಸಾಹಸಸಿಂಹ ಎಂಬ ಬಿರುದು ಪಡೆದ ವಿಷ್ಣುವರ್ಧನ್ ಚಂದನವನದ ಅತ್ಯದ್ಭುತ ನಟರಾಗಿದ್ದು, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದಿಗೂ, ಇವರ ಅನೇಕ ಚಲನಚಿತ್ರಗಳು ಪ್ರೇಕ್ಷಕರಿಗೆ ಸ್ಫೂರ್ತಿ, ತಮ್ಮದೇ ನಟನಾ ಶೈಲಿ ಮೂಲಕ ಎಲ್ಲರ ಮನಸ್ಸಿನಲ್ಲಿ ಇಂದಿಗೂ ಅಮರವಾಗಿದ್ದಾರೆ. ‌‌‌ ಎಲ್ಲಾ ತರಹದ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡು , ಅಭಿಮಾನಿಗಳ ಪಾಲಿಗೆ ಪ್ರೀತಿಯ ಹೀರೋ ಎನಿಸಿಕೊಂಡಿದ್ದಾರೆ.

ತಾವೇ ಬರೆದ ಕಥೆಯಲ್ಲಿ ನಟಿಸಲು ಅವಕಾಶ ಕೂಡಿ ಬರಲಿಲ್ಲ:

ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ‌‌ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಅಭಿನಯ ಮೇರು ನಟರಾಗಿದ್ದವರು ಡಾ. ವಿಷ್ಣುವರ್ಧನ್,ವಿಷ್ಣು ಸಿನಿಮಾದಲ್ಲಿ ವಿಶೇಷ ಪಾತ್ರಗಳನ್ನು ಮಾಡಿ, ‌‌ ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರ್ ನನ್ನು ವಿಷ್ಣುವರ್ಧನ್ ಆಗಿ ಬದಲಾಯಿಸಿದ್ರು. ಅಲ್ಲಿಂದ ಹೊಸ ನಟ ವಿಷ್ಣುವರ್ಧನ್ ಆದರು, ವಿಷ್ಣುವರ್ಧನ್ ಅವರೇ ಸಿನಿಮಾದ ಕಥೆಯೊಂದನ್ನು‌ ಬರೆದಿದ್ದು ಅದೆಷ್ಟು ಬಾರಿ ಈ ಸಿನಿಮಾದಲ್ಲಿ ತಾನೇ ಅಭಿನಯಿಸಬೇಕು ಎಂದು ಆಸೆ ಪಟ್ಟರಂತೆ. ಆದರೆ ಸಮಯದ ಅಭಾವದಿಂದಾಗಿ ಅವರಿಗೆ ತಮ್ಮ ಸಿನಿಮಾದಲ್ಲಿ ತಾವೇ ಅಭಿನಯಿಸಲು ಸಾಧ್ಯವಾಗಲಿಲ್ಲವಂತೆ.

Join WhatsApp
Google News
Join Telegram
Join Instagram

ಯಾವ ಸಿನಿಮಾ:

ಗಣೇಶ ಐ ಲವ್ ಯು ಸಿನಿಮಾದಲ್ಲಿ‌ ಅನಂತನಾಗ್ ಅವರ ಅಭಿನಯದಲ್ಲಿ ಪಣಿರಾಮಚಂದ್ರನವರ ನಿರ್ದೇಶನದಲ್ಲಿ ಬಂದಿತ್ತು, ಆದರೆ ಈ ಸಿನಿಮಾದಲ್ಲಿ ಅನಂತನಾಗ್ ಅವರು ನಟಿಸಿದ್ದಾರೆ, ಆ ಮೂಲಕ ವಿಷ್ಣುವರ್ಧನ್ ಅವರನ್ನು ಬಹುಮುಖ ಪ್ರತಿಭೆ ಎನ್ನಬಹುದು. ಆ ಕಾಲದ ಆಂಗ್ರಿ ಯಂಗ್ ಮ್ಯಾನ್ ಎಂದೇ ಕರೆಸಿಕೊಂಡ ಸ್ಪುರದ್ರೂಪಿ ಯುವಕರಾಗಿದ್ದ ಇವರ ನಟನೆಯನ್ನು ಜನ ಮೆಚ್ಚಿ ಅವರ ಸಿನಿಮಾ ಅಷ್ಟು ಇಷ್ಟ ಪಡುತ್ತಿದ್ದರು, ವಯಕ್ತಿಕವಾಗಿಯೂ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದ ವ್ಯಕ್ತಿ ಇವರು

Leave A Reply

Your email address will not be published.