Honnavalli Krishna: ಕಬ್ಜದಲ್ಲಿ ಮಾಡಿರುವ ಪಾತ್ರಕ್ಕೆ ಕೊಟ್ಟ ಸಂಭಾವನೆ ಬಗ್ಗೆ ಮಾತಾಡಿದ ಹೊನ್ನವಳ್ಳಿ ಕೃಷ್ಣ.

Advertisement
ಆರ್. ಚಂದ್ರು (R Chandru) ನಿರ್ದೇಶನದಲ್ಲಿ ಉಪೇಂದ್ರ (Upendra) ಹಾಗೂ ಸುದೀಪ್ (Sudeep) ಅಭಿನಯಿಸಿರುವ ಬಹುನಿರೀಕ್ಷಿತ ಕಬ್ಜ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಇದೆ. ಈಗಾಗಲೇ ಸಖತ್ ಸುದ್ದಿ ಯಲ್ಲಿದೆ ಈ ಚಿತ್ರ, ಕನ್ನಡದ ಅನೇಕ ನಟರು ಈ ಚಿತ್ರದಲ್ಲಿದ್ದಾರೆ. ಈಗ ದೊಡ್ಡಮಟ್ಟದಲ್ಲಿ ಸದ್ದು ಮಾಡಲು ಈ ಚಿತ್ರ ರೆಡಿಯಾಗಿದೆ, ಕಬ್ಜದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ, ಚಿತ್ರದಲ್ಲಿ ಉಪೇಂದ್ರ (Upendra) ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅದರ ಜೊತೆ ಹಿರಿಯ ಕಲಾವಿದರು ಇದ್ದಾರೆ, ಹೊನ್ನವಳ್ಳಿ ಕೃಷ್ಣ (Honnavalli Krishna) ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಹೊನ್ನವಳ್ಳಿ ಕೃಷ್ಣ ಕಬ್ಜದಲ್ಲಿ ಪಾತ್ರವೇನು?
ಕನ್ನಡ ಸಿನಿರಸಿಕರನ್ನು ರಂಜಿಸಿರುವ ಅದ್ಭುತ ನಟ ಇವರು, ಸುಮಾರು 40 ಚಿತ್ರಗಳಿಗೆ ಸಹನಿರ್ದೇಶಕರಾಗಿರುವ ಹೊನ್ನವಳ್ಳಿ, ನ್ಯಾಯವೇ ದೇವರು ಚಿತ್ರದಿಂದ ಹೊನ್ನವಳ್ಳಿ ಕೃಷ್ಣ ಆದರು, ಸುಮಾರು 1004 ಚಿತ್ರಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ, ಒಂದಿಷ್ಟು ಚಿತ್ರಗಳು ಮತ್ತು ಪಾತ್ರಗಳನ್ನು ಬಿಟ್ಟರೆ, ಮಿಕ್ಕಂತೆ ಎಲ್ಲವೂ ಸಹಪಾತ್ರ ಮಾಡುತ್ತ ಬಂದಿದ್ದಾರೆ, ಕಬ್ಜದಲ್ಲಿ ಇವರು ನಟಿಸಿದ್ದಾರೆ, ಕಬ್ಜ ಬಗ್ಗೆ ಮಾತನಾಡಿದ ಇವರು ನಿರ್ದೆಶಕ ಚಂದ್ರು ಬಹಳ ಒಳ್ಳೆಯ ವ್ಯಕ್ತಿ, ಬಹಳ ಕ್ರಿಯೇಟಿವ್ ಆಗಿ ಸಿನಿಮಾ ಮಾಡಿದ್ದಾರೆ, ಉಪೇಂದ್ರ ಅವರಿಗೂ ಆರ್ ಚಂದ್ರು ಗೂ ಮುಖ್ಯವಾಗಿ ಧನ್ಯವಾದ ಹೇಳುತ್ತೇನೆ. ಇಲ್ಲಿ ನನಗೂ ಒಂದು ಸಹ ಪಾತ್ರ ಕೊಟ್ಟಿದ್ದಾರೆ ಎಂದಿದ್ದಾರೆ.
Advertisement
ಆರ್ ಚಂದ್ರು ಕೇಳಿದಕ್ಕಿಂತ ಹೆಚ್ಚು ಹಣ ಕೊಟ್ರಾ:
ಹೊನ್ನವಳ್ಳಿ ಕೃಷ್ಣ ಅವರು ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಸಾಧಾರಣ ನಟ. ಡಾ. ರಾಜ್‌ಕುಮಾರ್ ಅವರ ಮೇಲಿನ ಪ್ರೀತಿ ಮತ್ತು ಗೌರವದಿಂದ ಚಿರಪರಿಚಿತವಾಗಿ ನಟನೆಗೆ ಬಂದವರು ಇವರು, ಈಗ ಕೂಡ ಹೊಸ ಪಾತ್ರಗಳನ್ನು ಮಾಡುತ್ತಾ ಕಬ್ಜದಲ್ಲಿ ನಟಿಸ್ತಾ ಇದ್ದಾರೆ. ಆರ್ ಚಂದ್ರು ಕೇಳುವ ಮುಂಚೇಯೇ ಪೇಮೆಂಟ್ ಕೊಡುತ್ತಾರೆ,ನಾನು ನಿರೀಕ್ಷೆ ಮಾಡಿದಷ್ಟೆ ಹಣ ನೀಡಿದ್ದಾರೆ ಎಂದಿದ್ದಾರೆ.
ಡಾ ರಾಜ್ ಕುಮಾರ್ ಅವರೇ ಚಿತ್ರರಂಗಕ್ಕೆ ಪರಿಚಯಿಸಿದವರು:
ಡಾ. ರಾಜ್‌ಕುಮಾರ್, ಬಾರು ರಾಜ್‌ಕುಮಾರ್ ಸೇರಿದಂತೆ ಉದ್ಯಮದ ಅನೇಕ ದೊಡ್ಡ ಹೆಸರುಗಳೊಂದಿಗೆ ಕೆಲಸ ಮಾಡಿರುವ ಇವರು ಅಪಾರ ಅಭಿಮಾನಿಗಳನ್ನು ಗಳಿಸಿವೆ ಮತ್ತು ಅವರ ಜನಪ್ರಿಯತೆಯು ಪ್ರತಿ ದಿನವೂ ಬೆಳೆಯುತ್ತಲೇ ಇದೆ. ಡಾ ರಾಜ್ ಕುಮಾರ್ ಸಿನಿಮಾಗಳಲ್ಲಿ ನಟಿಸಲು ಅವಕಾಶ ಮಾಡಿ ಕೊಟ್ಟವರು, ಇದು ನಟನ ಪ್ರತಿಭೆ ಮತ್ತು ಅವನ ಪ್ರೇಕ್ಷಕರ ಮೇಲೆ ಶಾಶ್ವತವಾದ ಪ್ರಭಾವ ಬೀರುವಂತೆ ಮಾಡಿತು.
Advertisement