R. Chandru: ಉಪೇಂದ್ರ ಬಗ್ಗೆ ಬೆರೆಯದನ್ನೇ ಹೇಳಿದ ಕಬ್ಜ ನಿರ್ಮಾಪಕ

Advertisement
ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ಕಬ್ಜ (Kabzaa) ಸಿನಿಮಾ ಚಿತ್ರರಂಗದಲ್ಲಿ ಮೋಸ್ಟ್ ಥ್ರಿಲ್ ಮುಡಿಸಿದೆ, 1945 ರಿಂದ 1987 ರ ಕಾಲಘಟ್ಟದಲ್ಲಿ ನಡೆಯೋ ಕಥೆ , ಒಂದು ಕಡೆ ಸ್ವತಂತ್ರ ಪೂರ್ವ ಮತ್ತೊಂದು ಕಡೆ ಸ್ವತಂತ್ರದ ನಂತರ ಭಾರತ ಹೇಗಿತ್ತು ಅನ್ನುವುದು ಚಿತ್ರದಲ್ಲಿದೆ. ಕಬ್ಜ ಸಿನಿಮಾ ಮಾರ್ಚ್ 17ರಂದು ತೆರೆಗೆ ಬರಲಿದೆ ಸಿನಿಮಾದ ಟ್ರೈಲರ್ , ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಉಪ್ಪಿ (Uppi) ಶಿವಣ್ಣ (Shivanna) ಹಾಗೂ ಕಿಚ್ಚ (Kiccha) ನಟನೆಯ ಕಬ್ಜ ಸಿನಿಮಾ ಕ್ರಿಯೇಟಿವ್ ಆಗೇ ಇದೆ, ಚಿತ್ರದಲ್ಲಿ ಮಾಸ್ ಮತ್ತು ಕ್ಲಾಸ್ ಟಚ್ ಇದೆ ಎನ್ನಬಹುದು.
ಉಪ್ಪಿ ಸರ್ ಬುದ್ದಿವಂತ ಅನ್ಕೊಂಡಿದ್ದರಲ್ಲ?
ಕಬ್ಜ ಚಿತ್ರ ಮಾ.17ಕ್ಕೆ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಮೂಡಿದೆ. ಚಿತ್ರದ ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಜಿದೆ, ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ, ಕಬ್ಜ ಚಿತ್ರದ ಬಗ್ಗೆ ಉಪೇಂದ್ರ ಅವರು ಸಂದರ್ಶನ ನೀಡುತ್ತಲೆ ಬಂದಿದ್ದಾರೆ, ವೇದಿಕೆಯಲ್ಲಿ ಉಪೇಂದ್ರ ಬಗ್ಗೆ ಮಾತನಾಡಿದ ಆರ್ ಚಂದ್ರು ಉಪೇಂದ್ರ ಬರೀ ಬುದ್ದಿವಂತರಲ್ಲ, ಜ್ಞಾನ ವಂತರು, ಕರುಣವಂತರು ಕೂಡ,ಪ್ರಜಾಕೀಯ ಮೂಲಕ ಜನ ಸಾಮಾನ್ಯರಿಗೆ ಅರಿವು ಮೂಡಿಸಲು ಬಂದಿದ್ದಾರೆ ಎಂದರು.
Advertisement
ಉಪೇಂದ್ರ ಏನಂದ್ರು?
ಪ್ರಜಾಕೀಯದಲ್ಲಿ ನೀವೆ ನಾಯಕರು ಎಂದು ಹೇಳಿದ ಉಪ್ಪಿ, ರಾಜಕೀಯ ವಿಚಾರ ಅಲ್ಲೆ ಮಾತನಾಡುವ ಇದು ಸಿನಿಮಾ,ಅದಕ್ಕೆ ಆಯಾ ಸಂದರ್ಭ ಇದೆ. ಕಬ್ಜ ವನ್ನು ನೋಡಿ ಗೆಲ್ಲಿಸಿ ಎಂದರು, ಉಪೇಂದ್ರ ಅವರ ಬದುಕಿನಲ್ಲಿ ಬಹು ದೊಡ್ಡ ಬಜೆಟ್‌ನ ಸಿನಿಮಾ ಕಬ್ಜ ಎನ್ನಲಾಗಿದ್ದು, ಉಪ್ಪಿಯವರ ಪಾತ್ರ ಸಿನಿಮಾದ ಹೈಲೈಟ್ ಅಗಿದೆ. ನಾನು ನಿರ್ದೇಶಕನಾದರೂ ಚಂದ್ರು ಅವರೇ ಮೈನ್ ಎಂದಿದ್ದಾರೆ, ಚಂದ್ರು ನನಗೆ ಹೇಳಿದ ರೀತಿಯಲ್ಲಿಯೇ ಅದ್ಭುತವಾಗಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಎಂದಿದ್ದಾರೆ.
ಕಬ್ಜದಲ್ಲಿ ನಟ ಶಿವರಾಜ್ ಕುಮಾರ್ (Shiva Raj Kumar) ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯ ಚಕ್ರವರ್ತಿ ಸುದೀಪ್ (Sudeep) ಆ್ಯಕ್ಟ್ ಮಾಡುತ್ತಿದ್ದಾರೆ, ಕಬ್ಜ ಸಿನಿಮಾದಲ್ಲಿ ಮೂವರ ರೋಲ್ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದೆ. ಈ ಮೂರು ನಟರ ಪ್ರೋತ್ಸಾಹ ಇತ್ತು ಎಂದು ಆರ್ ಚಂದ್ರು ಹೇಳಿದ್ದಾರೆ. ಈ ಚಿತ್ರ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಮಾರ್ಚ್ 17ಕ್ಕೆ ಕಬ್ಜ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ.
Advertisement