ಬಹಳಷ್ಟು ಸಮಯದ ನಂತರ ಬಾಲಿವುಡ್ಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಣ ಚಿತ್ರ ಸುಧೀರ್ಘ 50 ದಿನಗಳನ್ನು ಪೂರೈಸಿದೆ. ಅರ್ಧ ಶತಕ ಬಾರಿಸಿರುವ ಪಠಾಣ್ ಸಿನಿಮಾ ಇನ್ನೂ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ ಪಠಾಣ್ ಸಿನಿಮಾ ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ಮಾಡಿದೆ. ಕೇವಲ ಏಳು ವಾರಗಳಲ್ಲಿ ಹಿಂದಿನ ಎಲ್ಲಾ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯನ್ನು ಮುರಿದಿದೆ. ಹಾಗಾದ್ರೆ ಪಠಾಣ್ ನಿಜಕ್ಕೂ ಎಷ್ಟು ಹಣ ಗಳಿಸಿದೆ ಗೊತ್ತಾ!
ಶಾರುಖ್ ಕಮ್ ಬ್ಯಾಕ್ ಸಿನಿಮಾ:
ಕೆಲವು ಸಮಯದ ನಂತರ ಶಾರುಖ್ ಖಾನ್ ಪಠಾಣ್ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಶಾರುಖ್ ಖಾನ್ ಅಂದ್ರೆ ಬಾಲಿವುಡ್ ಮಾತ್ರವಲ್ಲ ದೇಶಾದ್ಯಂತ ಕ್ರೇಜ್ ಇದೆ. ಹಾಗಾಗಿ ನಾಲ್ಕು ವರ್ಷದ ನಂತರ ಅವರ ಪಠಾಣ್ ಸಿನಿಮಾ ಬಿಡುಗಡೆ ಆಗಿದ್ದಕ್ಕೆ ಸಿನಿಪ್ರಿಯರು ಖುಷಿಯಾಗಿದ್ದರು. ಇದಕ್ಕೆ ಸಾಕ್ಷಿಯಾಗಿ ಪಠಾಣ್ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ 100, 200 ಅಲ್ಲ 300 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿತ್ತು. ಇದಾದ ನಂತರವೂ ಪಠಾಣ್ ರೇಸ್ ನಲ್ಲಿ ಹಿಂದೆ ಬಿದ್ದಿಲ್ಲ. 500 ಕೋಟಿ ಕ್ಲಬ್ ಹೌಸ್ ಕೂಡ ಸೇರಿಕೊಂಡಿತು. ಕನ್ನಡದ ಕೆಜಿಎಫ್ 2 ಹಾಗೂ ತೆಲಗುವಿನ ಬಾಹುಬಲಿ 2 ಎರಡು ಸಿನಿಮಾದ ಹಿಂದಿ ಡಬ್ಬಿಂಗ್ ಆವೃತ್ತಿಯ ದಾಖಲೆಯನ್ನು ಮುರಿದು ಅತಿ ಹೆಚ್ಚು ಕಲೆಕ್ಷನ್ ಮಾಡಿದೆ ಪಠಾಣ್.
ದಾಖಲೆಯ ಮೊತ್ತ ಗಳಿಸಿದ ಪಠಾಣ್:
Sacnilk ವರದಿಯ ಪ್ರಕಾರ ಪಠಾಣ್ ಸಿನಿಮಾ 540.39 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಈಗಲೂ ಥಿಯೇಟರ್ ಗಳಲ್ಲಿ ಈ ಸಿನಿಮಾ ಜನರನ್ನು ರಂಜಿಸುತ್ತಿದ್ದು, ಸಿನಿಮಾ ಕಲೆಕ್ಷನ್ ಮುಂದುವರೆದಿದೆ. ಅಜಯ್ ದೇವಗನ್ ಅಭಿನಯದ ಬೋಲಾ ಚಿತ್ರದ ಬಿಡುಗಡೆಯ ಸಮಯದಲ್ಲಿ ಪಠಾಣ್ ಸಿನಿಮಾ 545 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ಬರುವ ಮಾರ್ಚ್ 30ರಂದು ಅಜಯ್ ದೇವಗನ್ ಅವರ ಭೋಲಾ ಸಿನಿಮಾ ಥಿಯೇಟರ್ ಗಳಿಗೆ ಅಪ್ಪಳಿಸಲಿದೆ.
ಏಳು ವಾರದ ಪಠಾಣ್ ಸಿನಿಮಾದ ಕಲೆಕ್ಷನ್ ಹೀಗಿದೆ:
- ಮೊದಲ ವಾರ – 364.15 ಕೋಟಿ ರೂ,
- ಎರಡನೇ ವಾರ – 94.75 ಕೋಟಿ ರೂ,
- ಮೂರನೇ ವಾರ – 46.95 ಕೋಟಿ ರೂ,
- ನಾಲ್ಕನೇ ವಾರ – 14.33 ಕೋಟಿ ರೂ,
- 5ನೇ ವಾರ – 8.63 ಕೋಟಿ ರೂ,
- 6ನೇ ವಾರ – 9.12 ಕೋಟಿ ರೂ,
- ಏಳನೇ ವಾರ – ರೂ 2.46 ಕೋಟಿ ರೂಪಾಯಿ ಮೊತ್ತ ಗಳಿಸಿದೆ.