Karnataka Times
Trending Stories, Viral News, Gossips & Everything in Kannada

Actor Pawan Kalyan: ಸಿನಿಮಾಗಳಿಗೆ ತನ್ನ ಸಂಭಾವನೆ ಎಷ್ಟು ಎಂದು ತಿಳಿಸಿದ ಪವನ್ ಕಲ್ಯಾಣ್

ತೆಲುಗು ಚಿತ್ರರಂಗದ (Telugu Filim Industry) ಪವರ್ ಸ್ಟಾರ್‌ ಪವನ್‌ ಕಲ್ಯಾಣ್‌ (Pawan Kalyan) ರವರಿಗೆ ಯಾವ ರೀತಿಯ ಅಭಿಮಾನಿ ಬಳಗವಿದೆ (Fan Following) ಎಂಬುದು ಸಾಮಾನ್ಯವಾಗಿ ತಮಗೆ ತಿಳಿದಿರುತ್ತದೆ. ಅಷ್ಟು ಮಾತ್ರವಲ್ಲದೇ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತೆಲುಗಿನ ಏಕೈಕ ನಟ ಎಂಬ ಮಾತು ಕೂಡ ಇದೆ. ಇನ್ನು ಈ ನಡುವೆ ಅವರು ರಾಜಕೀಯದಲ್ಲೂ (Politics) ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಜನಸೇನಾ(Jana Sena) ಪಕ್ಷವನ್ನು ಸ್ಥಾಪಿಸಿ ಅದರ ಪ್ರಚಾರಕಾರ್ಯಗಳಲ್ಲೂ ಕೂಡ ನಟ ಪವನ್ ಬ್ಯುಸಿ ಇರುತ್ತಾರೆ.

ಇನ್ನು ಸಿನಿಮಾ ಹಾಗೂ ರಾಜಕೀಯ (Movie & Politics) ಎರಡನ್ನೂ ಕೂಡ ಅವರು ಬ್ಯಾಲೆನ್ಸ್ ಮಾಡುತ್ತಿದ್ದು ಆದರೆ ಅವರು ಜನಸೇನಾ ಪಕ್ಷ ಕಟ್ಟಿದಾಗಿನಿಂದ ಅವರ ಸಂಭಾವನೆ ವಿಚಾರವಾಗಿ ವಿರೋಧಿಗಳು ಒಂದಲ್ಲಾ ಒಂದು ರೀತಿ ಟೀಕಿಸುತ್ತಲೇ ಇದ್ದಾರೆ. ಹೌದು ಅವರು ಅಭಿಮಾನಿಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷ ಕಟ್ಟುತ್ತಿದ್ದು ಆ ಪಕ್ಷದ ಹಿಂದೆ ಹಣ ಮಾಡುವ ಉದ್ದೇಶವಿದೆ ಎಂದೆಲ್ಲಾ ದೂರುತ್ತಿದ್ದಾರೆ. ಆದರೆ ಇದೀಗ ವಿರೋಧಿಗಳ ಮಾತಿಗೆ ತಕ್ಕ ಉತ್ತರ (Answer) ನೀಡಿದ್ದಾರೆ ನಟ ಪವನ್ ಕಲ್ಯಾಣ್‌.

Join WhatsApp
Google News
Join Telegram
Join Instagram

ಸದ್ಯ ಇದೀಗ ತಮ್ಮ ಪಕ್ಷದ 10ನೇ ವರ್ಷದ ವಾರ್ಷಿಕೋತ್ಸವದಲ್ಲಿ (10 Year Anniversary) ಈ ರೀತಿಯಾದಂತಹ ಟೀಕೆಗಳಿಗೆ ತಿರುಗೇಟು ನೀಡಿರುವ ಪವನ್‌ ಕಲ್ಯಾಣ್‌ ರವರು ನನಗೆ ದುಡ್ಡಿನ ಚಿಂತೆ ಇಲ್ಲ. ನಾನು ದುಡ್ಡು ಮಾಡುವುದಕ್ಕೂ ಬಂದಿಲ್ಲ. ಹೌದು ನಾನು ಸಿನಿಮಾ ಒಪ್ಪಿಕೊಂಡರೆ ದಿನಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತೇನೆ. ಇನ್ನು ಒಂದು ಚಿತ್ರಕ್ಕೆ 22 ದಿನಗಳ ಕಾಲ್‌ಶೀಟ್‌ ಕೊಡುತ್ತೆನೆ. ಇದಕ್ಕೆ 44 ಕೋಟಿ ರೂ. ಬರುತ್ತದೆ. ನಾನು ಊಟ ಮಾಡುವುದೇ ದಿನಕ್ಕೆ ಒಂದು ಸಲ ಎಂದಿದ್ದಾರೆ. ಇನ್ನು ಸಿನಿಮಾದಲ್ಲಿಯೇ ಕೋಟಿ ಕೋಟಿ ಸಂಪಾದಿಸುವ ನನಗೆ ರಾಜಕೀಯ ಪಕ್ಷದಿಂದ ಹಣ ಮಾಡುವ ಅಗತ್ಯ ಇಲ್ಲ ಜನಸೇವೆಗೆ ತಾವು ಜನಸೇನಾ ಪಕ್ಷ ಕಟ್ಟಿರುವುದಾಗಿ ಪವನ್‌ ಕಲ್ಯಾಣ್‌ ರವರು ಇದೀಗ ಸ್ಪಷ್ಟಪಡಿಸಿದ್ದಾರೆ.

ಸದ್ಯ ಇದೀಗ ನಟ ಹಾಗೂ ನಿರ್ದೇಶಕ (Actor & Director) ಸಮುದ್ರಖನಿ (Samudrakhani) ಅವರ ತಮಿಳಿನ ವಿನೋದಯಾ ಸೀತಂ (Vinodayaa Seetam) ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ. ಹೌದು ಮೂಲ ಚಿತ್ರ ನಿರ್ದೇಸಿದ್ದ ಸಮುದ್ರಖನಿ ಅವರೇ ಇದರ ನಿರ್ದೇಶನ ಮಾಡುತ್ತಿದ್ದು ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ಇನ್ನು ಅವರ ಸೋದರಳಿಯ ನಟ ಸಾಯಿ ಧರಮ್ ತೇಜ್ (Sai Dharm Teej) ಇದರಲ್ಲಿ ನಟಿಸುತ್ತಿದ್ದಾರೆ. ಇನ್ನು ಸಿನಿಮಾಕ್ಕಾಗಿ ಪವನ್ ಕಲ್ಯಾಣ್ ಅವರು ಬರೋಬ್ಬರಿ 75 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದಂದು ಜೊತೆಗೆ ಅವರು ಸಿನಿಮಾಗಾಗಿ 30ರಿಂದ 35 ದಿನ ಕಾಲ್‌ಶೀಟ್ ನೀಡಿದ್ದಾರಂತೆ. ಸದ್ಯ ಇದೀಗ ಚಿತ್ರೀಕರಣ ಕೂಡ ಆರಂಭವಾಗಿದ್ದು ಕೆಲಸಗಳು ಬಿರುಸಿನಿಂದ ಸಾಗಿವೆ ಎನ್ನಾಲಗಿದೆ.

Leave A Reply

Your email address will not be published.