S. S. Rajamouli: ಆಸ್ಕರ್ ಸಕ್ಸಸ್ ಪಾರ್ಟಿಯಲ್ಲಿ ಆರ್ ಆರ್ ಆರ್ 2 ಸಿನಿಮಾದ ಬಗ್ಗೆ ವಿಶೇಷ ಮಾಹಿತಿ ಬಹಿರಂಗಪಡಿಸಿದ ರಾಜಮೌಳಿ!

ದೇಶಾದ್ಯಂತ ಆರ್ ಆರ್ ಆರ್ (RRR) ಸಿನಿಮಾದ ನಾಟು ನಾಟು (Naatu Naatu) ಎನ್ನುವ ಹಾಡಿಗೆ ಮೂಲ ಗಾಯನಕ್ಕಾಗಿ ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿದೆ ದೇಶದ ಪ್ರತಿಯೊಬ್ಬ ಸಿನಿ ಪ್ರಿಯರು ಕೂಡ ಈ ಪ್ರಶಸ್ತಿಯನ್ನು ಸಂಭ್ರಮಿಸಿದ್ದಾರೆ. ಇದು 95ನೇ ಆವೃತ್ತಿಯ ಅಕಾಡೆಮಿ ಅವಾರ್ಡ್ ಆಗಿತ್ತು. ಇನ್ನು ಆರ್ ಆರ್ ಆರ್ (RRR) ಸಿನಿಮಾ ಎಸ್ ಎಸ್ ರಾಜಮೌಳಿ (S. S. Rajamouli) ನಿರ್ದೇಶನದ ಸಿನಿಮಾ ಆಗಿದ್ದು ವಿಶ್ವದ್ಯಂತ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿದೆ.
ಆರ್ ಆರ್ ಆರ್ ಸಿನಿಮಾ ಯಾವಾಗ ಬಿಡುಗಡೆ ಆಯಿತು ಆಗಿನಿಂದ ಈ ಸಿನಿಮಾದ ಸೀಕ್ವೆಲ್ ಯಾವಾಗ ಬರುತ್ತೆ ಅಂತ ಜನ ರಾಜ ಮೌಳಿ ಅವರನ್ನು ಆಗಾಗ ಕೇಳುತ್ತಲೇ ಇರುತ್ತಾರೆ. ಈ ಚಿತ್ರದ ಮುಂದುವರಿದ ಭಾಗಕ್ಕಾಗಿ ಜನ ಕಾತುರದಿಂದ ಕಾದು ಕುಳಿತಿದ್ದಾರೆ. ಆರ್ ಆರ್ ಆರ್2 ಸಿನಿಮಾ ಯಾವಾಗ ಬರುತ್ತೆ ಅನ್ನೋದು ಹಲವರ ಪ್ರಶ್ನೆ. ಆದರೆ ಈ ಸಿನಿಮಾದ ಬಗ್ಗೆ ಇನ್ನೂ ಸರಿಯಾಗಿ ಪ್ಲಾನ್ ಆಗಿಲ್ಲ ಎಂದು ರಾಜ ಮೌಳಿ ತಿಳಿಸಿದ್ದರು.
ಆಸ್ಕರ್ ಪ್ರಶಸ್ತಿ ಪಡೆದ ನಂತರ ಎಸ್ ಎಸ್ ರಾಜಮೌಳಿ ಅವರು ಈ ಸಿನಿಮಾದ ಎರಡನೇ ಭಾಗದ ಬಗ್ಗೆ ಮಾತನಾಡಿದ್ದಾರೆ. ಹೌದು ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಲಾಸ್ ಏಂಜಲಿಸ್ ನಲ್ಲಿ ಚಿತ್ರತಂಡ ಸಂಭ್ರಮಾಚರಣೆ ನಡೆಸಿತ್ತು. ಚಿತ್ರದ ಎರಡನೇ ಭಾಗದ ಬಗ್ಗೆ ರಾಜ ಮೌಳಿ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಆಸ್ಕರ್ ಗೆದ್ದ ನಂತರ ಚಿತ್ರದ ಕೆಲಸ ಎರಡು ಪಟ್ಟು ಹೆಚ್ಚು ವೇಗವಾಗಿ ಪ್ರಾರಂಭವಾಗಲಿದೆ ಎಂದು ರಾಜಮೌಳಿ ತಿಳಿಸಿದ್ದಾರೆ. ಜೊತೆಗೆ ಚಿತ್ರದ ಸ್ಕ್ರಿಪ್ಟ್ ಮೇಲೆ ತನ್ನ ತಂದೆ ವಿಜಯೇಂದ್ರ ಪ್ರಸಾದ್ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿಯೂ ರಾಜ ಮೌಳಿ ಹೇಳಿದ್ದಾರೆ.
ಆಸ್ಕರ್ ಪ್ರಶಸ್ತಿಯ ನಂತರದ ಪಾರ್ಟಿಯಲ್ಲಿ ಮಾಧ್ಯಮ ಸಂಸ್ಥೆಯೊಂದಿಗೆ ರಾಜ ಮೌಳಿ ಮಾತನಾಡಿದರು ನೀವು ಈಗಾಗಲೇ ಆಸ್ಕರ್ ಪ್ರಶಸ್ತಿ ಗೆದ್ದಿದ್ದೀರಿ ಈ ಚಿತ್ರದ ಮುಂದಿನ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಹೌದು ಎಂದು ಉತ್ತರಿಸಿದ ರಾಜ ಮೌಳಿ, ಸ್ಕ್ರಿಪ್ಟ್ ಕೆಲಸದ ಬೇಗ ಹೆಚ್ಚಿಸಲು ಈ ಪ್ರಶಸ್ತಿ ಸಹಾಯಕವಾಗಿದೆ. ಚಿತ್ರೀಕರಣ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂಬುದನ್ನು ಕೂಡ ತಿಳಿಸಿದ್ದಾರೆ. ಕಳೆದ ವರ್ಷ ಸಿನಿಮಾದ ಸೀಕ್ವೆಲ್ ಮಾಡುವ ಯೋಜನೆ ಇಲ್ಲ ಎಂದಿದ್ದ ರಾಜಮೌಳಿ ಇದೀಗ ಇನ್ನೇನು ಚಿತ್ರೀಕರಣ ಆರಂಭವಾಗಬಹುದು ಎಂದು ಹೇಳಿದ್ದು ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.
ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಈ ಗೆಲುವು ಚಿತ್ರಕಥೆಯ ಕೆಲಸವನ್ನು ವೇಗಗೊಳಿಸುವುದಕ್ಕೆ ಸಹಾಯ ಮಾಡುತ್ತಿದೆ ಎಂದು ರಾಜ ಮೌಳಿ ಹೇಳಿದ್ದಾರೆ ರಾಮ್ ಚರಣ್, ಜೂನಿಯರ್ ಎನ್ಟಿಆರ್, ಅಜಯ್ ದೇವಗನ್ ಆಲಿಯಾ ಭಟ್ ಮೊದಲಾದ ಅದ್ಭುತ ನಟರು ಆರ್ ಆರ್ ಆರ್ ಸಿನಿಮಾದ ಯಶಸ್ಸಿಗೆ ಕಾರಣವಾಗಿದ್ದಾರೆ ವಿಶ್ವಾದ್ಯಂತ 1200 ಕೋಟಿ ಕಮಾಯಿ ಮಾಡಿದ ದಾಖಲೆ ಈ ಸಿನಿಮಾದ್ದು.