ಸಾಧಕರ ಬೆನ್ನರಿಸಿ ಈಡಿ ಕರ್ನಾಟಕಕ್ಕೆ ಅವರ ಸಾಧನೆ ಪಸರಿಸುವ ನಿಟ್ಟಿನಲ್ಲಿ ಜೀ ವಾಹಿನಿಯ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮ ಸದಾ ಮುಂಚುಣಿಯಲ್ಲಿದೆ ಎನ್ನಬಹುದು. ಅದೇ ರೀತಿ ಈ ಬಾರಿ ಯಾರು ಆ ಶೋನಲ್ಲಿ ಬರಬಹುದು ಯಾರು ಬಂದರೆ ಉತ್ತಮ ಎಂಬ ಕುರಿತು ಸಹ ಹಲವಾರು ಚರ್ಚೆ ಏರ್ಪಟ್ಟಿತ್ತು. ಈಗ ಆ ಸಾಧಕರ ಸೀಟ್ ನಲ್ಲಿ ಈ ಕ್ರಿಕೇಟಿಗ ಬರಬಹುದು ಎಂಬ ಮಾತು ಸಹ ಕೇಳಿ ಬರುತ್ತಿದೆ. ಹಾಗಾದರೆ ಆ ವ್ಯಕ್ತಿಯಾರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಅದ್ಧೂರಿ ಶೋ:
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವೂ ಮೊದಲಿಂದಲೂ ಸಾಧಕರ ಭೇಟಿ ಎಂದು ಫೇಮಸ್ ಆಗಿದೆ. ಈಗಾಗಲೇ ಯಶ್ , ರಾಧಿಕಾ ಪಂಡಿತ್, ಪುನೀತ್ ರಾಜ್ ಕುಮಾರ್, ಸಿದ್ಧರಾಮಯ್ಯ, ನಾರಾಯಣ ಮೂರ್ತಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ, ದರ್ಶನ್ ಸೇರಿದಂತೆ ಇನ್ನು ಅನೇಕರು ಈ ಕಾರ್ಯಕ್ರಮಕ್ಕೆ ಬಂದಿದ್ದು ಫೇಮಸ್ ಆಗಿದ್ದಾರೆ. ಅದೇ ರೀತಿ ಈ ಬಾರಿ ಕರಾವಳಿಯ ಪ್ರತಿಭೆ ಮೊದಲ ಸಾಧಕರಾಗಿ ಬರುತ್ತಾರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಅದು ಯಾರಿರಬಹುದೆಂದಾಗ ಬಂದ ಉತ್ತರವೇ ಕಾಂತಾರ (Kanthara Rishabh shetty) ಖ್ಯಾತಿಯ ರಿಷಭ್ ಶೆಟ್ಟಿ ಅವರು. ಅದೇ ರೀತಿ ಇನ್ನೊಬ್ಬರು ಕ್ರಿಕೇಟಿಗ ಬರಬಹುದೆಂಬ ಮಾತು ಸಹ ಕೇಳಿಬರುತ್ತಿದೆ.
ಯಾರು ಈ ಕ್ರಿಕೆಟಿಗ?
ಈ ಕ್ರಿಕೆಟಿಗ ಯಾರಿರಬಹುದು ಎಂಬ ಮಾತು ಬಂದಾಗ ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ ಅನೇಕರ ಹೆಸರು ಕೇಳಿ ಬಂದಿದೆ ಇದೀಗ ಕ್ರಿಕೇಟಿಗ ಕೆಎಲ್ ರಾಹುಲ್ (KL Rahul) ಅವರ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಯಾರು ಖಚಿತ ಮಾಹಿತಿ ನೀಡದೆ ವಾಹಿನಿ ತನ್ನ ಗೌಪ್ಯತೆಯ ವಿಚಾರವನ್ನು ಕಾಪಾಡಿಕೊಂಡಿದೆ. ಅದೇ ರೀತಿ ರಾಹುಲ್ ಬಂದರೆ ಉತ್ತಮ ಎಂಬ ಅಭಿಪ್ರಾಯ ಸಹ ಕೇಳಿಬರುತ್ತಿದ್ದು ಬಹುತೇಕ ಕೆಎಲ್ ರಾಹುಲ್ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ ಎನ್ನಬಹುದು. ನಿಮ್ಮ ಪ್ರಕಾರ ಯಾರನ್ನು ಸಾಧಕರ ಸೀಟ್ ನಲ್ಲಿ ನೋಡಲು ಕಾಯುತ್ತಿದ್ದಾರೆ ಎಂಬ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.