Upendra: ಕಬ್ಜ ಸಿನೆಮಾದಲ್ಲಿ ಅಭಿನಯಿಸಲು ಸುದೀಪ್, ಶಿವಣ್ಣ ಒಪ್ಪಿಕೊಂಡ ಸತ್ಯ ಏನೆಂದು ತಿಳಿಸಿದ ಸೂಪರ್ ಸ್ಟಾರ್ ಉಪೇಂದ್ರ

Advertisement
ಉಪೇಂದ್ರ ಅವರು ಯಾವುದಾದರು ಸಿನೆಮಾ ಮಾಡ್ತಿದ್ದಾರೆ ಎಂದಾಗ ಅದರಲ್ಲೇನೊ ಇದೆ ಎಂಬ ಮೈಂಡ್ ಸೆಟ್ ಗೆ ಜನ ಬಂದು ಬಿಡುತ್ತಾರೆ. ಈಗ ಅದೇ ನಿಟ್ಟಿನಲ್ಲಿ ಕಬ್ಜ (Kabzaa) ಸಿನೆಮಾದ ಪ್ರಚಾರದ ಅಲೇ ಸಹ ಭರ್ಜರಿಯಾಗೆ ಸಾಗುತ್ತಿದೆ. ಈ ಸಿನೆಮಾದಲ್ಲಿ ಉಪೇಂದ್ರ ಅವರ ಆ್ಯಕ್ಷನ್ ಅಂತೂ ಮಸ್ತಾಗೆ ಇದೆ ಎನ್ನಬಹುದು ಮೂರು ದಿಗ್ಗಜರು ಈ ಸಿನೆಮಾಕ್ಕೆ ಬಣ್ಣ ಹಚ್ಚಿದ್ದು ಶಿವರಾಜ್ ಕುಮಾರ್ (Shiva Rajkumar) ಹಾಗೂ ಸುದೀಪ್ (Sudeep) ಅವರು ಈ ಸಿನೆಮಾದಲ್ಲಿ ಜೊತೆಯಾಗಿ ಉಪ್ಪಿಗೆ (Upendra) ಸಾತ್ ನೀಡಲು ಸಿನೆಮಾದಲ್ಲಿ ಯಾವ ಅಂಶ ಕಾರಣವಾಯ್ತು ಎಂಬ ಸತ್ಯ ಇದೀಗ ಹೊರ ಬಿದ್ದಿದೆ.
ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಈ ಹಿಂದೆ ಒಟ್ಟಾಗಿ ಸಿನೆಮಾ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಓಂ ಸಿನೆಮಾವನ್ನು ನಿರ್ದೇಶನ ಮಾಡಿದ್ದು ಕೂಡ ಉಪೇಂದ್ರ ಅವರು ಎಂದು ಹೇಳಬಹುದು. ಅದೇ ರೀತಿ ಮುಕುಂದ ಮುರಾರಿ ಸಿನೆಮಾದಲ್ಲಿ ಕಿಚ್ಚ ಸುದೀಪ್ ಜೊತೆ ಉಪೇಂದ್ರ ನಟಿಸಿದ್ದರೂ ಈಗ ಈ ಇಬ್ಬರು ದಿಗ್ಗಜರನ್ನು ಸಿನೆಮಾ ಒಪ್ಪಿಸಲು ಕಾರಣವಾದ ಅಂಶವನ್ನು ಸ್ವತಃ ಉಪ್ಪಿ ಅವರೇ ಹೇಳಿದ್ದಾರೆ.
Advertisement
ಏನಂತಾರೆ ಉಪ್ಪಿಬಾಸ್?
ಈ ಬಗ್ಗೆ ಖಾಸಗಿ ವಾಹಿನಿಯಲ್ಲಿ ಸರ್ ನೀವು ಈಗ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸಿನೆಮಾ ಮಾಡ್ತಿದ್ದೀರಿ ಅದರಲ್ಲೂ ಇಬ್ಬರು ದಿಗ್ಗಜರು ಬೇರೆ ಇದ್ದಾರೆ ಅವರು ಸಿನೆಮಾ ಬಗ್ಗೆ ಹೇಳಿದಾಗ ಒಪ್ಪಿಕೊಂಡ್ರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದ ಉಪೇಂದ್ರ ಅವರು ಸರ್ ನಿಜಕ್ಕೂ ಖುಷಿಯಾಗುತ್ತೆ ಹಿಂದಿಲೆಲ್ಲ ಪ್ರಚಾರಕ್ಕೆ ಹೋಗ್ತಿರೊದು ಇದೆ ಫಸ್ಟ್ ಸಿನೆಮಾದಲ್ಲಿ ಮೇಕಿಂಗ್ ಬಗ್ಗೆ ಹೇಳಿದಾಗ ಸುದೀಪ್ (Sudeep) ಅವರಿಗೆ ತುಂಬಾ ಖುಷಿಯಾಯಿತು ಓ ನೀವು ಈ ರೀತಿ ಹೊಸ ಪ್ರಯೋಗ ಮಾಡೋದ ತುಂಬಾ ಚೆನ್ನಾಗಿದೆ ಎಂದು ಖುಷಿಯಲ್ಲಿ ಅಭಿನಯಿಸಲು ಒಪ್ಪಿಕೊಂಡ್ರು , ಬಳಿಕ ಶಿವರಾಜ್ ಕುಮಾರ್ ಅವರಿಗೆ ಮೇಕಿಂಗ್ ತೋರ್ಸಿದ್ದೇವೆ ಆಗ ಅವರು ನಾನು ಕೂಡ ನಿಮ್ಮ ಜೊತೆ ಸೇರ್ತೆನೆ ಎಂದ್ರು ಅಂದತೂ ನಿಜಕ್ಕೂ ಆಶ್ಚರ್ಯ ಆಯ್ತು ಬಳಿಕ ಒಂದು ಕಂಪ್ಲೀಟ್ ಕಬ್ಜ ಸಿನೆಮಾ ರೆಡಿಯಾಗಿದೆ. ಇದೀಗ ಚಂದ್ರು ಅವರಿಗೆ ಪಾರ್ಟ್ 2 (Part2) ಯೋಚನೆ ಕೂಡ ಬಂದಿದೆ ಅದೇ ಖುಷಿ ಮತ್ತೊಂದು ಸಿನೆಮಾ ಕೂಡ ಬರುತ್ತೆ ಮೊದಲು ಈ ಸಿನೆಮಾವನ್ನು ಖುಷಿಯಿಂದ ಅಪ್ಪಿಕೊಳ್ಳಿ ಎಂದಿದ್ದಾರೆ.
Advertisement