ಕೆಲವೊಂದು ಹಾಡೇ ಹಾಗೆ ಸದಾ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಲೇ ಇರುತ್ತದೆ. ಅದೇ ರೀತಿ ಹಿಂದಿಯ ದಿಲ್ ದೇದಿಯಾ ಹೇ (Dil dedia He) ಈ ಹಾಡು ಈಗಾಗಲೇ ಫೇಮಸ್ ಆಗಿದ್ದು ಅನೇಕರು ಟಿಕ್ ಟಾಕ್ ಕೂಡ ಮಾಡಿದ್ದಾರೆ ಆದರೆ ಇಲ್ಲೊಬ್ಬ ಯುವಕ ಮಾತ್ರ ಈ ಹಾಡಿನೊಂದಿಗೆ ಫೇಮಸ್ ಆಗುತ್ತಿದ್ದು ಒಂದೊಳ್ಳೆ ಅವಕಾಶವನ್ನು ಸಹ ಆತ ಪಡೆದಿದ್ದಾನೆ.
ಯಾರು ಆ ಯುವಕ?
ಈ ಹಾಡು ಅನೇಕರು ಹಾಡಿದ್ದರೂ ಫೇಮಸ್ ಆದದ್ದು ಮಾತ್ರ ಕೆಲವೇ ಮಂದಿ ಅಂತವರಲ್ಲಿ ಒಬ್ಬರಾಗಿ ಬಿಹಾರ ಮೂಲದ ಅಮರಜಿತ್ ಜೈಕರ್ (Amarjith jaikar) ಅವರನ್ನು ನಾವು ಕಾಣಬಹುದು. ಈ ಹಾಡನ್ನು ಹಾಡಿದ್ದ ಅಮರಜಿತ್ ಅವರು ಯಾವುದೇ ಹಿನ್ನೆಲೆ ಇಲ್ಲದೆ ಬಂದವರಾಗಿದ್ದು ಸಾಮಾಜಿಕ ಜಾಲತಾಣವೇ ಇವರಿಗೆ ದೊಡ್ಡ ಅವಕಾಶ ಕಲ್ಪಿಸಿದ್ದ ವೇದಿಕೆಯಾಗಿದೆ.
ಈ ಮೂಲಕ ಅವರು ಸೋನು ಸೂದ್ (Sonu sodh) ಅವರ ಫತೇಹ್ ಸಿನೆಮಾದಲ್ಲಿ ಹಾಡೊಂದನ್ನು ಹಾಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಒಂದು ಆಲ್ಬಂ ಹಾಡಿಗೂ ಇವರು ಭಾಜಿನರಾಗಿದ್ದಾರೆ. ಹಿಮೇಶ್ ರೇಶಮಿಯಾ ಅವರು ಹಿಮೇಶ್ ಕೆ ದಿಲ್ ಸೇ ಎಂಬ ಅವರ ಆಲ್ಬಂನಲ್ಲಿ ತೇರಿ ಆಶಿಕಿ ನೆ ಮಾರಾ 2.0 (Theri ashikine mara) ಎಂಬ ಟ್ರ್ಯಾಕ್ ಅನ್ನು ಹಾಡಲು ಅವಕಾಶ ನೀಡಿದ್ದು ಈ ಹಾಡು ಟ್ರೆಂಡ್ ಆಗಲು ಅಮರಜಿತ್ ಅವರ ಫ್ಯಾನ್ಸ್ ಫಾಲೋವರ್ಸ್ ಕಾರಣ ಎನ್ನಲಾಗಿದೆ.
ಗಮನ ಸೆಳೆದ ಟ್ವಿಟ್ಟರ್ ಪೋಸ್ಟರ್
ಇತ್ತೀಚೆಗೆ ಬಹುತೇಕ ವಿಚಾರಗಳು ಫೇಮಸ್ ಆಗುವುದು ಟ್ವಿಟ್ಟರ್ (Twitter) ನಿಂದಾಗಿದ್ದು ಈಗ ಅಮರಜಿತ್ ಜೈಕರ್ ಕೂಡ ತಮ್ಮ ಖುಷಿಯನ್ನು ಪೋಸ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ನಂಗೆ ನಿಜಕ್ಕೂ ಖುಷಿಯಾಗುತ್ತದೆ. ಈ ವಿಚಾರವನ್ನು ನಾನು ಮೊದಲು ನನ್ನ ತಾಯಿಗೆ ತಿಳಿಸುವೆ. ನಿಜಕ್ಕೂ ಒಂದು ಒಳ್ಳೆ ಅವಕಾಶವನ್ನು ನಾನು ಪಡೆದೆ. ನನ್ನ ಈ ಎರಡು ಹಾಡನ್ನು ಆಲಿಸಿದ ಎಲ್ಲರಿಗೂ ಮನಃ ಪೂರ್ವಕ ಧನ್ಯವಾದ. ನಿಮ್ಮ ಪ್ರೋತ್ಸಾಹ , ನನ್ನ ಪ್ರತಿಭೆಗೆ ನೀಡುವ ಬೆಂಬಲ ಹಾರೈಕೆ ಎಲ್ಲ ಸದಾ ಹೀಗೆ ಇರಲಿ Thank u ಎಂದು ಪೋಸ್ಟ್ ಹಾಕಿದ್ದಾರೆ.