ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಹುಟ್ಟುಹಬ್ಬವನ್ನು (Birthday) ಅಭಿಮಾನಿಗಳು ರಾಜ್ಯಾದ್ಯಂತ ಆಚರಿಸುತ್ತಿದ್ದಾರೆ. ಬಹುತೇಕ ಫ್ಯಾನ್ಸ್ ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ದಿನದಂದು ಅಪ್ಪು ಅವರ ಅಭಿಮಾನಿಗಳು ರಕ್ತದಾನ , ಸ್ವಚ್ಛತೆ ಇನ್ನೂ ಅನೇಕ ವಿಧವಾದ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಪುನೀತ್ ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ಕೊಡುಗೆ ಹಾಗೂ ಅವರ ವ್ಯಕ್ತಿತ್ವ ವನ್ನು ಅವರ ಅಭಿಮಾನಿಗಳು ಅನುದಿನವು ನೆನಪಿಸುತ್ತಾರೆ. ಹಲವಾರು ನಟರು ಅಪ್ಪು ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ.
ನಟ ದುನಿಯಾ ವಿಜಯ್ ಟ್ವೀಟ್ ವೈರಲ್
ಅಪ್ಪು, ದುನಿಯಾ ವಿಜಯ್ ಸ್ನೇಹಿತರಾಗಿ ಇದ್ದವರು, ಎಲ್ಲ ನಟರೊಂದಿಗೆ ಪುನೀತ್ ಸುಲಭವಾಗಿ ಬೆರೆಯುತ್ತಿದ್ದರು , ಈ ಮೂಲಕ ಪುನೀತ್ ಅವರ ಬರ್ತ್ ಡೇ ನಿಮಿತ್ತ ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ದುನಿಯಾ ವಿಜಯ್ ಪೋಸ್ಟ್(Post) ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟರ್‌ನಲ್ಲಿ ಕನ್ನಡದ ಪಠ್ಯ ಪುಸ್ತಕದಲ್ಲಿ ಅ ಎಂದರೆ ಅಪ್ಪು ಎಂದಾಗಲಿ ಎನ್ನುವ ಆಸೆ ಅಂದಿದ್ದಾರೆ, ಹೀಗೆ ಹಲವಾರು ನಟ ನಟಿಯರು ಶುಭಾಶಯ ಹೇಳಿದ್ದಾರೆ,ವಿಜಯ್ ಹೇಳಿಕೆಗೆ ಅಪ್ಪು ಫ್ಯಾನ್ಸ್(Fans) ಖುಷಿಯಾಗಿದ್ದಾರೆ.
ಭಾವನಾತ್ಮಕ ಪತ್ರದ ಮೂಲಕ ಅಪ್ಪುವಿಗೆ ಶುಭಾಶಯ
ಅಪ್ಪು ಹುಟ್ಟು ಹಬ್ಬಕ್ಕೆ ಭಾವನಾತ್ಮಕ ಪತ್ರದ ಮೂಲಕ ಶಿವಣ್ಣ ,ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಶುಭಕೋರಿದ್ದಾರೆ, ಒಬ್ಬೊಬ್ಬರು ಒಂದೊಂದು ರೀತಿಯಾಗಿ ಅವರ ಮೇಲಿನ ಪ್ರೀತಿ ಅಭಿಮಾನ ವ್ಯಕ್ತ ಪಡಿಸುತ್ತಿರುವುವುದನ್ನು ಕಾಣಬಹುದು. ಹುಟ್ಟು ಹಬ್ಬ ಹಿನ್ನೆಲೆ ಅಭಿಮಾನಿಗಳು ಮಧ್ಯರಾತ್ರಿ ಕೇಕ್ ಕತ್ತರಿಸಿ ಬರ್ತಡೇ ಸೆಲಬ್ರೇಟ್ ಮಾಡಿದ್ದಾರೆ. ಪಟಾಕಿ ಸಿಡಿಸಿ ಹುಟ್ಟುಹಬ್ಬ ಆಚರಣೆ ಮಾಡಿದ ಅಭಿಮಾನಿಗಳು ಪವರ್ಸ್ಟಾರ್ನ್ನು(Powerstar) ನೆನಪಿಸಿಕೊಂಡಿದ್ದಾರೆ.
ಅಪ್ಪು ಮರೆಯಲಾಗದ ಮುತ್ತು
ಭೌತಿಕವಾಗಿ ನಮ್ಮ ಜೊತೆಯಲ್ಲಿ ಅಪ್ಪು ಇಲ್ಲದಿದ್ದರೂ ಅವರು ಸಮಾಜಕ್ಕೆ ಕೊಟ್ಟಿರುವ ಅಪಾರ ಕೊಡುಗೆಗಳು , ಸಮಾಜಮುಖಿ ಕೆಲಸಗಳು ಎಲ್ಲರನ್ನು ಸ್ಮರಿಸುವಂತೆ ಮಾಡುತ್ತವೆ. ಅಭಿಮಾನಿಗಳೆಂದರೆ ಪುನೀತ್‌ಗೆ ಪಂಚಪ್ರಾಣ, ಪುನೀತ್ ಮತ್ತು ಅಭಿಮಾನಿಗಳ ನಡುವೆ ಅನನ್ಯ ವಾದ ಪ್ರೀತಿಯು ಇತ್ತು.