Karnataka Times
Trending Stories, Viral News, Gossips & Everything in Kannada

Kabzaa Review: ಕಬ್ಜ ಸಿನೆಮಾ ಹೇಗಿದೆ ಇಲ್ಲಿದೆ ಸುಂದರ ವಿಮರ್ಶೆ

ಭಾರತ ಚಿತ್ರರಂಗದ (Indian Filim Industry) ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ಕಬ್ಜ (Kabzaa) ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ ಎನ್ನಬಹುದು. ಹೌದು ವಿಶ್ವದಾದ್ಯಂತ (World Wide) ಸಿನಿಮಾ ತೆರೆಕಂಡಿದ್ದು ಭಾರಿ ನಿರೀಕ್ಷೆ ಹಾಹೂ ಕುತೂಹಲ ಮೂಡಿಸಿದ್ದ ಕನ್ನಡದ (Kannada) ಕಬ್ಜ ಹೇಗಿದೆ ಎಂದು ನೋಡಲು ಅಭಿಮಾನಿಗಳು (Fans) ಕಾತರರಾಗಿದ್ದರು. ಸದ್ಯ ಇದೀಗ ಎಲ್ಲಾ ಕಾತರ ಹಾಗೂ ಕುತೂಹಲಕ್ಕೆ ತೆರೆ ಬಿದ್ದಿದ್ದು ಅಭಿಮಾನಿಗಳು ಬೆಳಗ್ಗೆಯೇ ಕಬ್ಜ ನೋಡಿ ಆನಂದಿಸುತ್ತಿದ್ದಾರೆ ಮತ್ತು ಸಂಭ್ರಮಿಸುತ್ತಿದ್ದಾರೆ ಎನ್ನಬಹುದು. ಇನ್ನು ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದೆ.

ಆರ್.ಚಂದ್ರು (R Chandru) ನಿರ್ದೇಶನದಲ್ಲಿ ಬಂದಿರುವ ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಕಾಣಿಸಿಕೊಂಡಿದ್ದು ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ (Kiccha Sudeep & shiva rajkumar) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಮೂವರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಂಡಿರುವ ಕಬ್ಜ ಅಭಿಮಾನಿಗಳ ಕಣ್ಣಿಗೆ ದೊಡ್ಡ ಹಬ್ಬವಾಗಿದ್ದು ಅಂದಹಾಗೆ ಕಬ್ಜ ಸಿನಿಮಾ ಬರೋಬ್ವರಿ 7 ಭಾಷೆಗಳಲ್ಲಿ ರಿಲೀಸ್ ಆಗಿದೆ. ಸುಮಾರು 50ಕ್ಕೂ ಅಧಿಕ ದೇಶಗಳಲ್ಲಿ ಕಬ್ಜ ಬಿಡುಗಡೆಯಾಗಿದ್ದು ವಿಶೇಷ ಎಂದರೆ 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ತೆರೆಗೆ ಬರುತ್ತಿದೆ.

Join WhatsApp
Google News
Join Telegram
Join Instagram

ಇನ್ಮು ಕರ್ನಾಟಕದಲ್ಲೂ ಕಬ್ಜ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಕರ್ನಾಟಕದಲ್ಲಿ ಕಬ್ಜ ಬರೋಬ್ಬರಿ 450 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಇಂದು ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ (Power star Puneeth Rajkumar) ಅವರ ಜನ್ಮ ದಿನವಾಗಿದ್ದು ಈ ವಿಶೇಷ ದಿನದಂದು ಕಬ್ಜ ಸಿನಿಮಾ ತೆರೆಗೆ ಬರುತ್ತಿದೆ. ಹೌದು ಅನೇಕ ಚಿತ್ರಮಂದಿರಗಳಲ್ಲಿ ಅಪ್ಪು ಕಟೌಟ್ ಕೂಡ ರಾರಾಜಿಸುತ್ತಿದ್ದು ಈ ಬಗ್ಗೆ ರಿಯಲ್ ಸ್ಟಾರ್ ಪುಣ್ಯಾತ್ಮನ ಹುಟ್ಟುಹಬ್ಬದ ದಿನ ನಮ್ಮ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ ಎಂದು ಹೇಳಿದ್ದಾರೆ.

ಸದ್ಯ ಸಿನಿಮಾದ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ (Twitter) ತಮ್ಮ ವಿಮರ್ಶೆ ತಿಳಿಸುತ್ತಿದ್ದು ಕಬ್ಜ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೌದು ಕೆಲವರಿಗೆ ತುಂಬಾ ಇಷ್ಟವಾದರೆ ಇನ್ನೂ ಕೆಲಸವರಿಗೆ ಕೊಂಚ ಅಸಮಾಧಾನ ಮೂಡಿಸಿದೆ ಎನ್ನಬಹುದು. ತಮಿಳಿನ ಓರ್ವ ಅಭಿಮಾನಿ ಕನ್ನಡದ ಮತ್ತೊಂದು ಸಿನಿಮಾ ಕಬ್ಜ ಪಾಸಿಟಿವ್ (Positive) ವಿಮರ್ಶೆ. ಅದ್ಭುತ ರೀಚ್‌ಗಾಗಿ ಕಾಯುತ್ತಿದ್ದೇವೆ. ಸುದೀಪ್ ಮತ್ತು ಶಿವಣ್ಣ ಅವರಿಗೆ ಹಾಗೂ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ. ಇನ್ನು ಮತ್ತೋರ್ವ ಕಾಮೆಂಟ್ ಮಾಡಿ ಈ ಸಿನಿಮಾದ ಬಗ್ಗೆ ಹೇಗೆ ಬರೆಯಲಿ. ತುಂಬಾ ನಿರಾಸೆ ಮೂಡಿಸಿದೆ. ಈ ಸಿನಿಮಾದ ಮೇಲೆ ಉಪ್ಪಿ ಸರ್ ಮತ್ತು ಇತರರಿಗೆ ಹೇಗೆ ನಂಬಿಕೆ ಬಂತು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಾರೆ ಸಿನಿಮಾಗೆ ಮಿಶ್ರಣ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.