Puneeth Rajkumar: ಕಬ್ಜದಲ್ಲಿ ಪವರ್ ಸ್ಟಾರ್ ಪುನೀತ್.. ಇಲ್ಲಿದೆ ಊಹಿಸದ ತಿರುವು

Advertisement
ಸೂಪರ್ ಸ್ಟಾರ್ ಉಪೇಂದ್ರ ನಟಿಸಿರುವ ಬಹುನಿರೀಕ್ಷಿತ ಸಿನೆಮಾ ಸೆಟ್ಟೆರಲು ಸಿದ್ದವಾಗಿದೆ. ಈಗಾಗಳೇ ಅನೇಕ ಚಿತ್ರಮಂದಿರದಲ್ಲಿ ಟಿಕೆಟ್ ಫುಲ್ ಬುಕ್ ಆಗಿದೆ. ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಈ ಸಿನೆಮಾ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಹುಟ್ಟು ಹಬ್ಬದಂದೆ ಬಿಡುಗಡೆಯಾಗಲಿದೆ.
ಸಿನೆಮಾದಲ್ಲಿ ಸುದೀಪ್ (Sudeep) ಹಾಗೂ ಶಿವಣ್ಣ (Shiva Rajkumar) ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಂಡಿದ್ದು, ಸಿನಿರಸಿಕರು ಸಿನೆಮಾ ನೋಡಲು ಕಾತುರಾಗಿದ್ದಾರೆ. ಇದರ ಜೊತೆಗೆ ಈ ಮೂವಿ ಅಪ್ಪು ಹುಟ್ಟುಹಬ್ಬದ ದಿನವೇ ರಿಲೀಸ್ ಆಗುತ್ತಿರುವುದರಿಂದ ಈ ಚಿತ್ರದಲ್ಲಿ ಪುನೀತ್ ಕೂಡಾ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಟ ಪುನೀತ್ ರಾಜ್ ಕುಮಾರ್ ನಮ್ಮನೆಲ್ಲ ಅಗಲಿ ಆಗಲೆ ಒಂದು ವರ್ಷ ಕಳೆದಿದೆ. ಆದರೆ ಅಪ್ಪು ಕಬ್ಜ ಶೂಟಿಂಗ್ ಸೆಟ್ಗೆ ಹೋಗಿದ್ದರು ಎಂದು ಕೂಡಾ ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಚಿತ್ರದ ಟ್ರೈಲರ್ನಲ್ಲಿ ಒಂದು ಮುಖ್ಯ ಪಾತ್ರ ಮುಖ ಮುಚ್ಚಕೊಂಡು ಗನ್ ಹಿಡಿದು ನಿಂತಿದ್ದು ಮುಖ ಮುಚ್ಚಿಕೊಂಡಿರುವ ಪಾತ್ರಧಾರಿ ಅಪ್ಪು ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ಸಖತ್ ವೈರಲ್ ಕೂಡಾ ಆಗಿದೆ. ನಿಜಕ್ಕೂ ಪುನೀತ್ ರಾಜ್ಕುಮಾರ್ ‘ಕಬ್ಜ’ ಚಿತ್ರದಲ್ಲಿ ನಟಿಸಿದ್ದರೆ ಸಿನಿ ಪ್ರೇಕ್ಷಕರಿಗೆ ಫುಲ್ ಖಷ್ ಆಗಲಿದೆ.
Advertisement
ಪುನೀತ್ ರಾಜ್ಕುಮಾರ್ ನಟಿಸಿದ ಕೊನೆಯ ಸಿನಿಮಾ. ‘ಲಕ್ಕಿಮ್ಯಾನ್’ ಚಿತ್ರದ ವಿಶೇಷ ಪಾತ್ರದಲ್ಲಿ ಅಂದರೆ ದೇವರ ಪಾತ್ರದಲ್ಲಿ ನಟಿಸಿದ್ದರು. ಇನ್ನು ‘ಗಂಧದಗುಡಿ’ ಎಂಬ ಸಾಕ್ಷ್ಯಾ ಚಿತ್ರದಲ್ಲಿಯೂ ಕಾಣಿಸಿಕೊಂಡಿದರು. ಆ ನಂತರ ಅಪ್ಪುವನ್ನು ತೆರೆಯ ಮೇಲೆ ನೋಡಲು ಸಾಧ್ಯವಾಗಲಿಲ್ಲ. ಪುನೀತ್ ರಾಜ್ಕುಮಾರ್ ಅಗಲಿ ವರ್ಷವಾಗಿದ್ದರು ಅಪ್ಪು ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರ ಬಂದಿಲ್ಲ. ಇನ್ನು ‘ಕಬ್ಜ’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ನಟಿಸಿರೋದು ನಿಜವೇ? ಎನ್ನುವ ಪ್ರಶ್ನೆಯನ್ನು ಚಿತ್ರದ ನಿರ್ದೇಶಕ ಆರ್. ಚಂದ್ರು ಅವರ ಬಳಿ ಕೇಳಿದಾಗ ಆರ್. ಚಂದ್ರು ಇಲ್ಲ ಎಂದು ಉತ್ತರಿಸಿದ್ದಾರೆ.
ಒಟ್ಟಾರೆ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನವೇ ‘ಕಬ್ಜ’ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷವಾಗಿದೆ. ‘ಕೆಜಿಎಫ್ ಸಿನೆಮಾದಂತೆಯೇ ಈ ಸಿನೆಮಾ ಕೂಡಾ ಪ್ಯಾನ್ ಇಂಡಿಯಾ ಮೂವಿಯಾಗಿ ಹೊರಹೊಮ್ಮಿದ್ದು, ಅಭಿಮಾನಿಗಳಖ ನಿರೀಕ್ಷೆ ಬಹಳಷ್ಟಿದೆ. ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ.
ಇತ್ತೀಚಿಗಷ್ಟೆ ಸಿನೆಮಾ ಯಶಸ್ಸಿಗಾಗಿ ಕಬ್ಜ ಚಿತ್ರತಂಡ ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ‘ಕಬ್ಜ’ ಚಿತ್ರವನ್ನು ಆರ್. ಚಂದ್ರು ನಿರ್ಮಿಸಿ, ನಿರ್ದೇಶನ ಮಾಡಿದ್ದು. 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗೆ ಬರಲಿದೆ. ವಿಶ್ವದಾದ್ಯಂತ 3000 ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ‘ಕಬ್ಜ’ ಚಿತ್ರ ಬಿಡುಗಡೆಯಾಗಲಿದೆ.
Advertisement