ಬಾಲವೃದ್ಧರವರೆಗೂ ಬಹುತೇಕ ಫ್ಯಾನ್ಸ್ ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Punith Rajkumar) ಅವರ ಜನ್ಮ ದಿನವಿದು. ಈ ದಿನದಂದು ಅಪ್ಪು ಅವರ ಅಭಿಮಾನಿಗಳು ರಕ್ತದಾನ , ಆಹಾರದ ಕಿಟ್ ವಿತರಣೆ, ನಿರ್ಗತಿಕರಿಗೆ ನೆರವಾಗುವುದು, ಸ್ವಚ್ಛತೆ ಇನ್ನೂ ಅನೇಕ ವಿಧವಾದ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವುದನ್ನು ನಾವು ಕಾಣಬಹುದಾಗಿದೆ. ಈ ಮೂಲಕ ಅಪ್ಪು ಅವರ ಪರಮಾತ್ಮ ಸಿನೆಮಾದಲ್ಲಿರುವ ಜೊತೆಗಿರದ ಜೀವ ಎಂದೂ ಜೀವಂತ ಎಂಬ ಮಾತನ್ನು ಸದ್ಯ ಅವರ ಅಭಿಮಾನಿಗಳು ಸತ್ಯವಾಗಿಸುವತ್ತ ನಡೆದಿದ್ದಾರೆ. ಪುನೀತ್ ಹುಟ್ಟು ಹಬ್ಬದ ಈ ಶುಭದಿನದಂದು ಅವರ ಅಣ್ಣ ರಾಘವೇಂದ್ರ ರಾಜ್ ಕುಮಾರ್ (Ragavendhra Rajkumar) ಅವರು ತಮ್ಮ ತಮ್ಮನ ಬಗ್ಗೆ ಮನದಾಳದ ಮಾತನ್ನು ಆಡಿದ್ದಾರೆ.
ಏನಂದ್ರು ರಾಘಣ್ಣ?
ಮೊದಲಿಂದಲೂ ತಮ್ಮನೆಂದರೆ ಪ್ರಾಣ ಎನ್ನುವ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಸದ್ಯ ತಮ್ಮನ ಅನುಪಸ್ಥಿತಿಯ ನಡುವೆ ಕೂಡ ಹುಟ್ಟು ಹಬ್ಬದ ಆಚರಣೆಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳನ್ನು ಉದ್ದೇಶಿಸಿ ಮಾತಾಡಿದ್ದಾರೆ. ಅಪ್ಪು ಅಭಿಮಾನಿಗಳು ಇಂದು ಅಪ್ಪು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಮೂಲಕ ಅಪ್ಪು ಅಭಿಮಾನಿಗಳು ಸೇರಿಕೊಂಡು ಅಪ್ಪು ಕಥಾಗಾನ ಹಾಗೂ ತೆಲುಗಿನಲ್ಲಿ ಅಪ್ಪು ಕಥಾಗಾನಂ ಎಂದು ಹಾಡನ್ನು ಸಿದ್ಧ ಮಾಡಿದ್ದಾರೆ ಆ ಟೀಂ ಗೆ ಒಳ್ಳೆದಾಗಲಿ. ಸಂಗೀತಕ್ಕೆ ಭಾಷೆ ಇಲ್ಲ ಅಂತಾರೆ ಇಂದು ಅಪ್ಪುಗೆ ಕನ್ನಡ, ತಮಿಳು, ತೆಲುಗು ಮುಂತಾದೆಡೆ ಅಭಿಮಾನಿಗಳಿದ್ದಾರೆ. ಈ ಹಾಡನ್ನು ಕೇಳಿ ನಿಜಕ್ಕೂ ಭಾವನಾತ್ಮಕವಾಗ್ತೀರಿ. ಅಪ್ಪು ಜೀವಂತವಾಗಿದ್ದಾರೆ ಎಂದು ಅನಿಸೊ ಹಾಡಿದು ನಿಮಗಾಗಿ ಬಿಡುಗಡೆ ಮಾಡಿದ್ದಾರೆ ಹರಸಿ ಹಾರೈಸಿ. ಅಪ್ಪು ಇದು ನಿಮಗೆ ಸಮರ್ಪಣೆ ಹಾಡು ಎಂದಿದ್ದಾರೆ.
ಪುನೀತ್ ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ಕೊಡುಗೆ ಹಾಗೂ ಅವರ ವ್ಯಕ್ತಿತ್ವ ವನ್ನು ಅವರ ಅಭಿಮಾನಿಗಳು ಅನುಸರಿಸೊ ರೀತಿ ನಿಜಕ್ಕೂ ಜನಮೆಚ್ಚುವಂತೆ ಬದುಕಿದ್ದ ಬಗೆ ಎನ್ನಬಹುದು. ನೀವು ಅಪ್ಪು ಅಭಿಮಾನಿಯಾಗಿದ್ದಲ್ಲಿ ಅವರ ಯಾವ ಸಿನೆಮಾ ನಿಮಗಿಷ್ಟ ಮತ್ತು ಯಾಕೆಂದು ಕಮೆಂಟ್ ಮಾಡಿ ತಿಳಿಸಿ.