Raghavendra Rajkumar: ಅಪ್ಪು ಸಮಾಧಿ ಬಳಿ ಪವಾಡ ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್

Advertisement
ಕನ್ನಡ ಚಿತ್ರರಂಗದ (KFI) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ರವರು ಅಗಲಿ ಒಂದೂವರೆ ವರುಷ ಕಳೆದಿದ್ದು ಅಭಿಮಾನಿಗಳು ಇಂದಿಗೂ ಕೂಡ ಅಪ್ಪು (Appu) ನೆನಪಿನಲ್ಲೇ ದಿನ ದೂಡುತ್ತಿದ್ದಾರೆ ಎನ್ನಬಹುದು. ಇಂದು ವಿಶ್ವ ಮಾನವನ ದಿನವಾಗಿದ್ದು ಪುನೀತ್ ರವರ ಜನ್ಮದಿನೋತ್ಸವ. ಇನ್ನು ಕಂಠೀರವ ಸ್ಟುಡಿಯೋದಲ್ಲಿರುವ (Kanteerava Stadium)ಪುನೀತ್ ರಾಜ್ ಕುಮಾರ್ ರವರ ಸಮಾಧಿಗೆ ಅಭಿಮಾನಿಗಳು(Fans) ಭೇಟಿ ನೀಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ (Social Media) ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ. ಹೌದು ಸ್ಯಾಂಡಲ್‌ವುಡ್ (Sandalwood) ತಾರೆಯರು ರಾಜಕೀಯ (Politics) ಮುಖಂಡರು ಕೂಡ ದೊಡ್ಮನೆ ಹುಡುಗನನ್ನು ನೆನೆಯುತ್ತಿದ್ದಾರೆ.
Advertisement
ಇನ್ನು ಅಪ್ಪು ಸಮಾಧಿ ಮುಂದೆ ಮಗಳು ವಂದಿತಾ (Vandita) ತಂದೆಗೆ ಇಷ್ಟವಾದ ತಿಂಡಿ ತಿನಿಸು ತಂದಿಟ್ಟು ನಮಿಸಿದ್ದು ರಾಘವೇಂದ್ರ ರಾಜ್‌ಕುಮಾರ್ (Rahavendra Rajkumar) ಯುವ ರಾಜ್‌ಕುಮಾರ್ (Yuva Rajkumar) ವಿನಯ್ ರಾಜ್‌ಕುಮಾರ್ (Vinay Rajkumar) ಸೇರಿದಂತೆ ಕುಟುಂಬ ಸದಸ್ಯರೆಲ್ಲರೂ ಕೂಡ ಅಪ್ಪು ಸಮಾಧಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಜಮಾಯಿಸುತ್ತಿದ್ದು ಸರತಿ ಸಾಲಿನಲ್ಲಿ ಬಂದು ಅಪ್ಪು ಸಮಾಧಿಗೆ ನಮಿಸುತ್ತಿದ್ದಾರೆ. ಹೌದು ನಮ್ಮ ಪುನೀತ್ ರಾಜ್‌ಕುಮಾರ್ ರವರು ಅಜಾತಶತ್ರುವಾಗಿದ್ದಾರೆ. ಇನ್ನು ಅಪಾರ ಸ್ನೇಹಿತರ ಬಳಗವನ್ನು ಸಂಪಾದಿಸಿದ್ದು ಚಿತ್ರರಂಗದ ಹೊರಗೂ ಕೂಡ ಅಪ್ಪು ಸ್ನೇಹಿತರ ಬಳಗ ದೊಡ್ಡದಿತ್ತು.
ಇನ್ನು ಈ ಬೆನ್ನಲ್ಲೆ ಅಪ್ಪು ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ರಾಘಣ್ಣ.. ಹೌದು ಮಾಧ್ಯಮದವರ ಮುಂದೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್ (Ragavendra Rajkumar) ಅಪ್ಪು ಇವಾಗ ನಿಜವಾಗಿ ಬದುಕಿ ಬೆಳಯುತ್ತಿದ್ದಾನೆ. ಹೌದು ನನ್ನ ಕೇಳಿದರೆ ಇದು ಅವನ 2ನೇ ವರ್ಷದ ಹುಟ್ಟುಹಬ್ಬವಾಗಿದ್ದು 23ನೇ ವರ್ಷದ ಮಗು ಅವನು. ಹೌದು ಮಗುತರ ಅವನನ್ನು ಬೆಳೆಸುತ್ತಿದ್ದೀರಾ ಆಟವಾಡಿಸುತ್ತಿದ್ದೀರಾ ಮತ್ತು ಅವನ ತಡೆಯಕ್ಕಾಗದೆ ಮಳೆನು ಬರಿಸ್ಬಿಟ್ರಿ . ನಿಮ್ಮ ಪ್ರೀತಿ ವಿಶ್ವಾಸಕ್ಕೆ ಏನು ಕೊಡಕ್ಕೆ ಸಾಧ್ಯ ಹೇಳಿ? ಶಾಷ್ಟಾಂಗ ನಮಸ್ಕಾರ ಹೇಳ್ಬೇಕಷ್ಟೆ. ಅವನನನ್ನ ಇಲ್ಲ ಅನ್ನಬೇಕಾ ಅಥವಾ ನಿಮ್ಮಲ್ಲಿ ಇದ್ದಾನೆ ಅನ್ಕೋಬೇಕಾ? ನಿಮ್ಮನ್ನ ನೋಡಿದಾಗೆ ತಮ್ಮ ಇದ್ದಾನೆ. ಎಷ್ಟು ಜನರನ್ನ ಕರೆಸ್ತಾ ಇದ್ದಾನೆ. ಇನ್ನು ಅವನು ಇದ್ದಾಗ ಅನ್ನೋದಕ್ಕಿಂತ ಇದಾಗ ಜಾಸ್ತಿ ಜನನ್ನ ಕರೆಸ್ತಾ ಇದ್ದಾನೆ. ನೀವು ಅವನನಚನ ಬದುಕಿ ಆಟ ಆಡಿಸ್ತಾ ಇದ್ದೀರ. ನಿಮಗೆಲ್ಲಾ ಶಾಷ್ಟಾಂಗ ನಮಸ್ಕಾರ ಬಿಟ್ಟರೆ ಬೇರೆನು ಹೇಳಕಾಗಲ್ಲ. ಹೌದು ಅವನ ಆದರ್ಶಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗೋಣ ಎಂದು ಹೇಳಿದ್ದಾರೆ. ಸದ್ಯ ರಾಘಣ್ಣ ಮಾತು ಕೇಳಿ ಕೆಲವರು ಭಾವುಕರಾಗಿದ್ದಾರೆ.
Advertisement